ಎಚ್.ಡಿ ಕುಮಾರಸ್ವಾಮಿ 
ರಾಜಕೀಯ

'ಹೆಲಿಕಾಪ್ಟರ್‌ನಲ್ಲಿ ಬೇಕಾದರೂ ಬರಲಿ, ರಾಕೆಟ್‌ನಲ್ಲಿ ಬರಲಿ ನನಗೇನು? ಪಂಚರತ್ನ ಯಾತ್ರೆ ಸುನಾಮಿ ತಡೆಯಲು ಅಮಿತ್‌ ಶಾ ಕರೆಸುತ್ತಿದ್ದಾರೆ'

ರಾಜ್ಯದಲ್ಲಿ ಪಂಚರತ್ನಯಾತ್ರೆಗೆ ಅಭೂತಪೂರ್ವ ಬೆಂಬಲ ದೊರಕಿದ್ದು, ಪಂಚರತ್ನ ರಥಯಾತ್ರೆಯ ಸುನಾಮಿ ಅಲೆ ತಡೆಯಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಬಿಜೆಪಿಯವರು ಕರೆಸುತ್ತಿದ್ದಾರೆ.

ತುಮಕೂರು: ರಾಜ್ಯದಲ್ಲಿ ಪಂಚರತ್ನಯಾತ್ರೆಗೆ ಅಭೂತಪೂರ್ವ ಬೆಂಬಲ ದೊರಕಿದ್ದು, ಪಂಚರತ್ನ ರಥಯಾತ್ರೆಯ ಸುನಾಮಿ ಅಲೆ ತಡೆಯಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಬಿಜೆಪಿಯವರು ಕರೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದ ಅವರು, ಅಮಿತ್  ಶಾ ಹೆಲಿಕಾಪ್ಟರ್‌ನಲ್ಲಿ ಬೇಕಾದರೂ ಬರಲಿ, ರಾಕೆಟ್‌ನಲ್ಲಿ ಬೇಕಾದರೂ ಬರಲಿ ನನಗೇನು?. ರೈತರಿಗೆ ಹೆದರಿ ಅವರು ಕರ್ನಾಟಕಕ್ಕೆ ಬರುತ್ತಿದ್ದಾರೆ. ಬಿಜೆಪಿಯವರು ದೇಶವನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ, ಮಂಡ್ಯವನ್ನು ಜೆಡಿಎಸ್‌ ಮುಕ್ತ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಮುಕ್ತ ಮಾಡುವುದಕ್ಕೆ ಇವರೇನು ದೊಡ್ಡ ಬ್ರಹ್ಮನಾ ಎಂದು ಪ್ರಶ್ನಿಸಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಜಾಲತಾಣದ ವಿಭಾಗದಿಂದ 1 ರು.ಮುಖಬೆಲೆಯ 15 ಸಾವಿರ ಕಾಯಿನ್‌ ಹಾರ ಹಾಕಿ ಸ್ವಾಗತ ಕೋರಲಾಯಿತು. ಬಳಿಕ, ಹೆಬ್ಬೂರಿನಲ್ಲಿ ಕ್ರೇನ್‌ ಬಳಸಿ ಮಣ್ಣಿನ ಹಾರ, ನೇಗಿಲ ಹಾರ ಹಾಕಿ ಸ್ವಾಗತಿಸಲಾಯಿತು.

ರಾಷ್ಟ್ರೀಯ ಪಕ್ಷಗಳು ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದ್ದು,ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷಗಳು ಅನಿವಾರ್ಯವಾಗಿವೆ , ಪಂಚರತ್ನ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ರಾಜ್ಯವನ್ನು ಅಭಿವೃದ್ಧಿಪಡಿಸಬೇಕೆಂಬ ಉದ್ದೇಶದಿಂದ ಜೆಡಿಎಸ್ ಈ ಯಾತ್ರೆಯನ್ನು ಆರಂಭಿಲಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

ಮೈಸೂರು: ಕುಸಿದು ಬಿದ್ದ ದೀಪಾಲಂಕಾರದ ಬೃಹತ್ ಕಟೌಟ್; ವಿದ್ಯಾರ್ಥಿಗಳು ಪಾರು, ದಸರಾ ಆರಂಭದಲ್ಲೇ ತಪ್ಪಿದ ದೊಡ್ಡ ದುರಂತ!

'ಕಮಾಲ್ ಕರ್ ದಿಯಾ ಪೈಲಟ್ ಜಿ, ನಿಮ್ಮ ಧೈರ್ಯಕ್ಕೆ ನಮ್ಮ ಸೆಲ್ಯೂಟ್': ಕ್ಯಾಪ್ಟನ್ ಸ್ಮಿತ್ ಮಚ್ಚರ್'ರನ್ನು ಹಾಡಿ ಹೊಗಳಿದ ಸಲ್ಮಾನ್ ಖಾನ್!

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

Dimple Queen: ಹುಟ್ಟುಹಬ್ಬದ ಸಂಭ್ರಮದಲ್ಲಿ ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ! Video ವೈರಲ್