ರಾಜಕೀಯ

ಕಾಂಗ್ರೆಸ್ ಸಭೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಮಾತನಾಡಲು ಸಿಗದ ಅವಕಾಶ: ಟಿಕೆಟ್ ಆಕಾಂಕ್ಷಿಗಳ ಆಕ್ರೋಶ

Shilpa D

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಟಿಕೆಟ್ ಗಾಗಿ ಕೆಪಿಸಿಸಿ ಕಚೇರಿಗೆ ತಲಾ 2 ಲಕ್ಷ ರೂಪಾಯಿ ನೀಡಿ ಅರ್ಜಿ ಸಲ್ಲಿಸಿರುವ ರಾಜ್ಯಾದ್ಯಂತ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಭಾನುವಾರ ನಡೆದ ವರ್ಚುವಲ್ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರು ಮಾತನಾಡಲು ಅವಕಾಶ ನೀಡದ ಕಾರಣ ಆಕಾಂಕ್ಷಿಗಳು ನಿರಾಸೆಗೊಂಡಿದ್ದಾರೆ.

ಕಾಂಗ್ರೆಸ್ ಟಿಕೆಟ್ ಗಾಗಿ 1,450 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ, ಸಂಜೆ 4 ಗಂಟೆಗೆ ಆರಂಭವಾದ ಜೂಮ್ ಸಭೆಗೆ ಸುಮಾರು 900 ಮಂದಿ ಲಾಗಿನ್ ಆಗಿದ್ದರು. ಸರದಿಗಾಗಿ ಕಾದರೂ ಅವಕಾಶ ಸಿಗದ ಕಾರಣ ಸಂಜೆ 6 ಗಂಟೆಗೆ ಸಭೆ ಮುಕ್ತಾಯವಾಯಿತು.

ನಾನು ಮಾತನಾಡಲು ಉತ್ಸುಕನಾಗಿದ್ದೆ ಮತ್ತು ನಾಯಕರು ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ರ್ಯಾಂಡಮ್ ಆಗಿ ಆಕಾಂಕ್ಷಿಗಳನ್ನು ಆಯ್ಕೆ ಮಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ ನಮಗೆ ಮಾತನಾಡಲು ಅವಕಾಶ ನೀಡದಿದ್ದರಿಂದ ನನಗೆ ನಿರಾಶೆಯಾಯಿತು ಎಂದು ಚಿಕ್ಕಬಳ್ಳಾಪುರದ ಟಿಕೆಟ್ ಆಕಾಂಕ್ಷಿಯೊಬ್ಬರು ಬೇಸರ ವ್ಯಕ್ತ ಪಡಿಸಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಆಂತರಿಕ ಸಮೀಕ್ಷೆ ಮತ್ತು ಆಯಾ ವಿಧಾನಸಭಾ ಕ್ಷೇತ್ರದ ನಾಯಕರ ಅಭಿಪ್ರಾಯದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಡಿ.ಕೆ ಶಿವಕುಮಾರ್ ಹೇಳಿದರು. ಗೆಲುವು ಸಾಧಿಸುವುದೇ ಮುಖ್ಯ ಮಾನದಂಡ ಎಂದು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮತದಾರರ ಪಟ್ಟಿಯಿಂದ ಮತದಾರರನ್ನು ಕೈಬಿಡುವ ಬಗ್ಗೆ ನಿಗಾ ಇಡುವಂತೆ ಆಕಾಂಕ್ಷಿಗಳಿಗೆ ಸೂಚಿಸಲಾಗಿದೆ.

ಈ ಬೆಳವಣಿಗೆ ನಿಜವಾಗಿಯೂ ಪ್ರಮುಖವಾದದ್ದು, ಏಕೆಂದರೆ ಪಕ್ಷದ ಜೊತೆಗಿರುವವರು  ಮಾತ್ರ ಉಳಿದುಕೊಳ್ಳುತ್ತಾರೆ ಉಳಿದವರು ಹೊರ ಹೋಗುತ್ತಾರೆ ಎಂದು ತುಮಕೂರು ನಗರ ವಿಧಾನಸಭೆ ಟಿಕೆಟ್ ಆಕಾಂಕ್ಷಿ ಇಕ್ಬಾಲ್ ಅಹಮದ್ ಅಭಿಪ್ರಾಯ ಪಟ್ಟಿದ್ದಾರೆ.

ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ನೇತೃತ್ವದಲ್ಲಿ 2023 ರ ಅಸೆಂಬ್ಲಿ ಚುನಾವಣೆಯನ್ನು ನಿರ್ವಹಿಸಲು ಕೆಪಿಸಿಸಿ ವಾರ್ ರೂಮ್ ಅನ್ನು ಸ್ಥಾಪಿಸಲು ಮುಂದಾಗಿದೆ ಎಂದಿದ್ದಾರೆ.

ಭಾನುವಾರದ ಸಭೆಯಿಂದ ಹೊರಗುಳಿದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಆಕಾಂಕ್ಷಿಗಳೊಂದಿಗೆ ಸಂವಾದ ನಡೆಸಲಿದ್ದು, ಮತ್ತೊಂದು ಸಭೆ ನಡೆಯುವ ಸಾಧ್ಯತೆಯಿದೆ ಎಂದು ಸಭೆಗೆ ಸಂಚಾಲಕರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಿಳಿಸಿದ್ದಾರೆ.

SCROLL FOR NEXT