ರಾಜಕೀಯ

ಸಾಮಾಜಿಕ ಮಾಧ್ಯಮಗಳಲ್ಲಿ 'ರಾಗಾ' ಪಾದಯಾತ್ರೆಯದ್ದೇ ಅಬ್ಬರ: ವಾಟ್ಸಾಪ್ ಡಿಪಿಯಿಂದ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಫೋಟೋ ಟ್ರೆಂಡ್!

Shilpa D

ಬೆಂಗಳೂರು: ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಫೋಟೋಗಳದ್ದೇ ಅಬ್ಬರವಾಗಿದೆ.

ರಾಹುಲ್ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಹಲವು ಮಂದಿ ಸೆಲ್ಫೀ ತೆಗೆದು ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಅಪ್ ಲೋಡ್ ಮಾಡುತ್ತಿದ್ದಾರೆ.

ಚಿಕ್ಕನಾಯಕನಹಳ್ಳಿಯ ಅಶ್ವಿನ್ ಕುಮಾರಸ್ವಾಮಿ ಸೋಮವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, “ನಾನು ನನ್ನ ನಾಯಕ ರಾಹುಲ್ ಗಾಂಧಿಯವರೊಂದಿಗೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದೇನೆ. ಭಾರತ್ ಜೋಡೋ ಯಾತ್ರೆಯು ಎಲ್ಲರಲ್ಲೂ ಹೊಸ ಶಕ್ತಿಯನ್ನು ತುಂಬುತ್ತಿದೆ ಎಂದಿದ್ದಾರೆ.

ಎರಡು ವಾರಗಳ ಹಿಂದೆ ರಾಹುಲ್ ಅವರೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಡಾ. ಉದಿತ್ ರಾಜ್, ನಾನು ರಾಹುಲ್ ಗಾಂಧಿಯವರೊಂದಿಗೆ  ಭಾರತ್ ಜೋಡೋ ಯಾತ್ರೆಯಲ್ಲಿ ನಡೆದಿದ್ದೇನೆ, ಚುನಾವಣೆಯ ಲಾಭದ ಬಗ್ಗೆ ತಲೆಕೆಡಿಸಿಕೊಳ್ಳದೆ ದೇಶದ ಹಿತಕ್ಕಾಗಿ ಮಾಡುತ್ತಿರುವ ಈ ವ್ಯಕ್ತಿ ಎಷ್ಟು ಶ್ರೇಷ್ಠ ಎಂದು ನನಗೆ ಅರಿವಾಯಿತು. ಒಂದು ವೇಳೆ ನಾನು ಭಾಗವಹಿಸದಿದ್ದರೆ ನನಗೆ ಅರ್ಥವಾಗುತ್ತಿರಲಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ನನ್ನ ಕೈ ಹಿಡಿದು ನಡೆದರು, ನನ್ನ ಕುಟುಂಬದ ಬಗ್ಗೆ ಕಳಕಳಿ ತೋರಿದ್ದಾರೆ. ನನ್ನ ತಂದೆ ಬಂಗಾರಪ್ಪ  ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಕರೆ ತಂದಿದ್ದ ಬಗ್ಗೆ ಮಾತನಾಡಿದರು, ನಾವಿಬ್ಬರೂ ಸುಮಾರು 8 ಕಿಮೀ ದೂ ನಡೆದೆವು ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಿಂದ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ.

ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿಯವರೊಂದಿಗೆ ಬಂದ 92 ಮಂದಿಯಲ್ಲಿಒಬ್ಬರಾದ ಮಧ್ಯಪ್ರದೇಶದ ಕಾಂಗ್ರೆಸ್ ಕಾರ್ಯಕರ್ತೆ ಪ್ರತಿಭಾ ರಘುವಂಶಿ ಅವರಿಗೆ ಭಾನುವಾರ ಸಂಜೆ ದೊಡ್ಡ ಅವಕಾಶ ಸಿಕ್ಕಿತು. ನಾನು ರಾಹುಲ್ ಗಾಂಧಿ ಅವರೊಂದಿಗೆ ಸುಮಾರು 4-5 ನಿಮಿಷಗಳ ಕಾಲ ನಡೆದಿದ್ದೇನೆ. ರಾಹುಲ್ ಅತ್ಯದ್ಭುತ ವ್ಯಕ್ತಿ, ಅವರು ನನ್ನ ಮೊಣಕಾಲು ನೋವಿನ ಬಗ್ಗೆ ವಿಚಾರಿಸಿದರು.  ಕೆಲವೊಮ್ಮೆ ನೋವು ಇರುತ್ತದೆ, ಆದರೆ ಜನರು ನನ್ನನ್ನು ಕರೆದುಕೊಂಡು ಬಂದರು. ಅವರ ಸಮಸ್ಯೆಗಳು ನನಗಿಂತ ಹೆಚ್ಚು ಎಂದು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದು ಹೇಳಿದ್ದಾರೆ.

SCROLL FOR NEXT