ರಾಜಕೀಯ

ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ನೇಮಕ: ಬಿಜೆಪಿಗೆ ಒಳಗೊಳಗೆ ತಳಮಳ; ಹಿಂದುಳಿದ ವರ್ಗಗಳ ಮತ ಕ್ರೋಡೀಕರಣಕ್ಕಾಗಿ ಕಟೀಲ್ ಗೆ ಗೇಟ್ ಪಾಸ್?

Shilpa D

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಮುಳುಗುತ್ತಿರುವ ದೋಣಿಯ ಕ್ಯಾಪ್ಟನ್ ಮಾತ್ರ ಎಂದು ಬಿಜೆಪಿ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದರೂ ಒಳಗೊಳಗೆ ತಳಮಳ ಆರಂಭವಾಗಿದೆ, ಹೀಗಾಗಿ ಅದು ಸಮಾಜದ ವಿವಿಧ ವರ್ಗಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ.

ಬಿಜೆಪಿಯ ಹಿರಿಯ ನಾಯಕರ ಆರಂಭಿಕ ವಿಶ್ಲೇಷಣೆಯ ಪ್ರಕಾರ, ದಲಿತರಾದ ಖರ್ಗೆ ಅವರು ಪಕ್ಷದ ಉನ್ನತ ಹಂತವನ್ನು ತಲುಪಿರುವುದರಿಂದ ದಲಿತ ಮತಗಳು, ವಿಶೇಷವಾಗಿ ಪರಿಶಿಷ್ಟ ಜಾತಿಗಳು ಕ್ರೋಢೀಕರಿಸಲ್ಪಟ್ಟು ಕಾಂಗ್ರೆಸ್ ಪರವಾಗಿ ಹೋಗಬಹುದು. ಕಲ್ಯಾಣ ಕರ್ನಾಟಕದ ಯಾವೊಬ್ಬ ನಾಯಕರೂ ಮತದಾರರ ಮೇಲೆ ಪ್ರಭಾವ ಬೀರುವಷ್ಟು ನಿರೀಕ್ಷಿತ ಮಟ್ಟಕ್ಕೆ ಬೆಳೆದಿಲ್ಲ ಎಂಬುದು ಬಿಜೆಪಿ ವರಿಷ್ಠರ ಆತಂಕಕ್ಕೆ ಕಾರಣವಾಗಿರುವ ಇನ್ನೊಂದು ಅಂಶ.

ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮದೇ ಆದ ಅನುಯಾಯಿಗಳು, ಹಿತೈಷಿಗಳು, ಅಭಿಮಾನಿಗಳ ದಂಡನ್ನು ಹೊಂದಿದ್ದು, ಈ ಭಾಗದ ಅಭಿವೃದ್ಧಿಗೆ ಉತ್ತೇಜನ ನೀಡಿದ 371 ಜೆ ಕಲಂಗೆ ತಿದ್ದುಪಡಿ ತರುವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.

ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ (ಬೆಳಗಾವಿ ಪ್ರದೇಶ) ಲಿಂಗಾಯತರು ಮತ್ತು ವೀರಶೈವರ ಭದ್ರಕೋಟೆ ಎಂದು ಪರಿಗಣಿಸಲಾಗಿದೆ, ಕುರುಬರು ಮತ್ತು ದಲಿತರು ಸೇರಿದಂತೆ ಹಿಂದುಳಿದ ವರ್ಗಗಳು ಇಲ್ಲಿ ಮೇಲ್ಮೈ ಸಾಧಿಸಿವೆ.

ಕುರುಬರು ಸಿದ್ದರಾಮಯ್ಯನವರನ್ನು ಕಂಡಂತೆ, ಒಕ್ಕಲಿಗರು ಎಚ್.ಡಿ.ದೇವೇಗೌಡರನ್ನು, ವೀರಶೈವರು ಮತ್ತು ಲಿಂಗಾಯತರು ಬಿ.ಎಸ್.ಯಡಿಯೂರಪ್ಪ ಅವರನ್ನು ತಮ್ಮ ನಾಯಕರನ್ನಾಗಿ ಕಾಣುವಂತೆ ದಲಿತರು ಖರ್ಗೆ ಅವರನ್ನು ತಮ್ಮ ನಾಯಕ ಎಂದು ಪರಿಗಣಿಸುತ್ತಾರೆ ಎಂಬುದು ನಿರ್ವಿವಾದದ ಸತ್ಯ.

ಅಲ್ಲದೆ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವುದಕ್ಕೆ ಲಿಂಗಾಯತರು ಮತ್ತು ವೀರಶೈವರು  ಮುಂದಿನ ವಿಧಾನಸಭೆ ಚುನಾವಣೆಯಲ್ಲಿಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಇನ್ನೂ ತಿಳಿದಿಲ್ಲ ಎಂದು ಮೂಲಗಳು ತಿಳಿಸಿವೆ.

ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳ ಕ್ರೋಡೀಕರಣದ ಬೆದರಿಕೆಯನ್ನು ಎದುರಿಸಲು ರಾಜ್ಯ ಪಕ್ಷದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರನ್ನು ಬದಲಾಯಿಸಬೇಕೇ ಎಂಬ ಬಗ್ಗೆಯೂ ಕೇಸರಿ ಪಕ್ಷವು ಚರ್ಚಿಸಲಾಗುತ್ತಿದೆ.

ಕಲಬುರಗಿಯಲ್ಲಿ ರೈಲ್ವೆ ವಿಭಾಗ ಸ್ಥಾಪನೆಯ ಬೇಡಿಕೆಯನ್ನು ಕೇಂದ್ರ ನಿರ್ಲಕ್ಷಿಸಿದೆ.  ಕಲಬುರಗಿಯ ದೂರದರ್ಶನ ಕೇಂದ್ರದ ಮೂಲಕ ಈ ಭಾಗದಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ನೇರ ಪ್ರಸಾರವನ್ನು ರದ್ಧಗೊಳಿಸುವ ಮೂಲಕ ಅದನ್ನು ದುರ್ಬಲಗೊಳಿಸಿದೆ. ಅಲ್ಲದೆ, ಈ ಪ್ರದೇಶದಲ್ಲಿಕಣ್ಣಿಗೆ ಕಾಣುವಂತ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗಿಲ್ಲ ಮತ್ತು ಈ ಅಂಶಗಳು ಬಿಜೆಪಿ ವಿರುದ್ಧ ಕೆಲಸ ಮಾಡಬಹುದು ಎಂದು ನಾಯಕರೊಬ್ಬರು ಹೇಳಿದರು.

SCROLL FOR NEXT