ರಾಜಕೀಯ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: 17 ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು, 1 ಸ್ಥಾನಕ್ಕೆ ತೃಪ್ತಿ ಪಟ್ಟ ಜೆಡಿಎಸ್; ಖಾತೆ ತೆರೆದ ಓವೈಸಿ ಪಕ್ಷ

Shilpa D

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ  ಮೊದಲ  ಬಾರಿಗೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ವಿಜಯಪುರ ನಗರ ಪಾಲಿಕೆ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಿದೆ.

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಎಣಿಕೆ ಅಂತಿಮವಾಗಿದ್ದು, ಫಲಿತಾಂಶ ಪ್ರಕಟಗೊಂಡಿದೆ. 35 ವಾರ್ಡಗಳಿಗೆ ನಡೆದ ಚುನಾವಣೆಯಲ್ಲಿ 17 ವಾರ್ಡ್‌ಗಳಲ್ಲಿ ಬಿಜೆಪಿ , 10 ವಾರ್ಡ್‌ಗಳಲ್ಲಿ ಕಾಂಗ್ರೆಸ್, 1 ವಾರ್ಡ್ ನಲ್ಲಿ ಜೆಡಿಎಸ್, 2 ವಾರ್ಡ್‌ಗಳಲ್ಲಿ ಎಂಐಎಂ, 5 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ವಿಜಯಪುರ ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಲು 18 ಸಂಖ್ಯಾ ಬಲ ಬೇಕಾಗಿದ್ದು, ಬಿಜೆಪಿ 17 ವಾರ್ಡಗಳಲ್ಲಿ ಈಗಾಗಲೇ ಗೆಲುವು ಸಾಧಿಸಿದೆ. ಹೀಗಾಗಿ ಬಹುಮತ ಪಡೆಯಲು ಬಿಜೆಪಿಗೆ ಬೇಕಿದೆ 1 ಅಭ್ಯರ್ಥಿ ಬೆಂಬಲ ಬೇಕಿದೆ.

ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಅಕ್ಟೋಬರ್‌ 28 ರಂದು ನಡೆದಿತ್ತು. ಒಟ್ಟು 174 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದರು. 35 ವಾರ್ಡ್‌ಗಳ ಪೈಕಿ ಬಿಜೆಪಿ 33 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು, ಮುಸ್ಲಿಂ ಮತದಾರರು ಹೆಚ್ಚಾಗಿರುವ 20 ಹಾಗೂ 27ನೇ ವಾರ್ಡ್‌ನಲ್ಲಿ ಬಿಜೆಪಿ ಸ್ಪರ್ಧಿಸಿರಲಿಲ್ಲ. ಕಾಂಗ್ರೆಸ್‌ ಎಲ್ಲಾ 35 ಕ್ಷೇತ್ರಗಳಲ್ಲೂ ಜೆಡಿಎಸ್‌ 20, ಎಎಪಿ 15, ಎಐಎಂಐಎಂ 4, ಜನತಾ ಪಕ್ಷ 3, ಕೆಆರ್‌ಎಸ್‌ 3 ಸ್ಥಾನ, ಎಸ್‌ಡಿಪಿಐ 2 ಹಾಗೂ ಬಿಎಸ್‌ಪಿ 1ರಲ್ಲಿ ಹಾಗೂ 58 ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿದ್ದರು.

ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಸ್ಪರ್ಧಿಸಿದ ನಾಲ್ಕು ಸ್ಥಾನಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ವಿಧಾನಸಭೆ ಮುಂದಿನ ಚುನಾವಣೆಗೆ ಇತರೆ ರಾಜಕೀಯ ಪಕ್ಷಗಳಿಗೆ ಹೊಸ ಸಂದೇಶ ನೀಡಲು ಮುಂದಾಗಿದೆ.

SCROLL FOR NEXT