ರಾಜಕೀಯ

ನೆರೆಯನ್ನೇ ಮುಂದಿಟ್ಟುಕೊಂಡು 'ಬ್ರ್ಯಾಂಡ್ ಬೆಂಗಳೂರು' ಎಂಬ ಹೆಗ್ಗಳಿಕೆಗೆ ಕಾಂಗ್ರೆಸ್ ನಿಂದ ಕುಂದು: ತೇಜಸ್ವಿ ಸೂರ್ಯ

Shilpa D

ಬೆಂಗಳೂರು: ಕಾಂಗ್ರೆಸ್‌ ಪಕ್ಷದವರು ಹಾಗೂ ಸ್ವಹಿತಾಸಕ್ತಿ ಇರುವವರು ನಗರದ ಕೆಲವು ಪ್ರದೇಶಗಳಲ್ಲಿ ಮಳೆಯಿಂದ ಉಂಟಾದ ನೆರೆಯನ್ನೇ ಮುಂದಿಟ್ಟುಕೊಂಡು ’ಬ್ರ್ಯಾಂಡ್ ಬೆಂಗಳೂರು‘ ಎಂಬ ಹೆಗ್ಗಳಿಕೆಗೆ ಕುಂದು ತರುತ್ತಿದ್ದಾರೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ರಾಜಕೀಯ ಲಾಭಕ್ಕಾಗಿ ಬ್ರ್ಯಾಂಡ್‌ ಬೆಂಗಳೂರು ಎಂಬ ಗೌರವಕ್ಕೆ ವಿರೋಧ ಪಕ್ಷದವರು ಚ್ಯುತಿ ತರುತ್ತಿದ್ದಾರೆ. ಬೆಳ್ಳಂದೂರಿನಲ್ಲಿ ಐಟಿ ಪಾರ್ಕ್ ಯಾರ ಮಾಲೀಕತ್ವದಲ್ಲಿ ಇತ್ತು, ಕೆರೆಗಳು ಹಾಗೂ ಜಲಾನಯನ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡವರು ಯಾರು ಎಂದು ತೇಜಸ್ವಿ ಪ್ರಶ್ನಿಸಿದ್ದಾರೆ.

ಕೆರೆ, ರಾಜಕಾಲುವೆ ಒತ್ತುವರಿ ಮಾಡಿರುವವರು ಯಾರು ಎಂಬುದು ಕಾಂಗ್ರೆಸ್ ನಾಯಕರಿಗೆ ಗೊತ್ತಿರಬೇಕು. ನನ್ನ ಲೋಕಸಭಾ ಕ್ಷೇತ್ರವು ಹೆಚ್ಚಿನ ಪ್ರಮಾಣದಲ್ಲಿ (ಪ್ರವಾಹದಲ್ಲಿ) ಹಾನಿಯಾಗಿಲ್ಲ, ಹಾಗಾಗಿ ನಾನು ಗಣೇಶ ಉತ್ಸವ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೆ ಎಂದು ಹೇಳಿದರು.

ಮಳೆಯ  ಅನಾಹುತದ ನಡುವೆ ತಮ್ಮ ಕ್ಷೇತ್ರದಲ್ಲಿ  ದೋಸೆ ಸವಿಯಲು ಮತ್ತು ಉಪಾಹಾರ ಗೃಹವನ್ನು ಪ್ರಚಾರ ಮಾಡಿದ್ದಕ್ಕಾಗಿ ಸಂಸದರು ವಿಶೇಷವಾಗಿ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದರು.

ನಾನು ಅಂತಹ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ" ಎಂದು ಹೇಳಿದ ತೇಜಸ್ವಿ ಸೂರ್ಯ ನಗರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಳೆ ನೀರಿನ ಪ್ರಮಾಣ ತಗ್ಗಿದ್ದು, ಸಹಜ ಸ್ಥಿತಿಗೆ ಮರಳುತ್ತಿವೆ ಎಂದರು.

SCROLL FOR NEXT