ಸಿಎಂ ಬೊಮ್ಮಾಯಿ 
ರಾಜಕೀಯ

'ತಾಕತ್ತಿದ್ರೆ, ಧಮ್ಮಿದ್ರೆ ತಡೆಯುವ ಪ್ರಯತ್ನ ಮಾಡಿ': ಜನಸ್ಪಂದನ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಆವೇಶಭರಿತ ಮಾತು

ದೊಡ್ಡಬಳ್ಳಾಪುರದಲ್ಲಿ ಪ್ರಾರಂಭ ಮಾಡಿರುವ ಜನಸ್ಪಂದನೆಯನ್ನು ಇಡೀ ಕರ್ನಾಟಕ ತುಂಬ ತೆಗೆದುಕೊಂಡು ಹೋಗಿ ಮತ್ತೊಮ್ಮೆ ಕಮಲವನ್ನು ಅರಳಿಸುವ ಪ್ರಯತ್ನ ಮಾಡುತ್ತೇವೆ. ತಾಕತ್ತಿದ್ದರೆ, ಧಮ್ಮಿದ್ದರೆ ನಿಲ್ಲಿಸುವ, ತಡೆಯುವ ಪ್ರಯತ್ನ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಆಕ್ರೋಶಭರಿತರಾಗಿ ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ. 

ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಪ್ರಾರಂಭ ಮಾಡಿರುವ ಜನಸ್ಪಂದನೆಯನ್ನು ಇಡೀ ಕರ್ನಾಟಕ ತುಂಬ ತೆಗೆದುಕೊಂಡು ಹೋಗಿ ಮತ್ತೊಮ್ಮೆ ಕಮಲವನ್ನು ಅರಳಿಸುವ ಪ್ರಯತ್ನ ಮಾಡುತ್ತೇವೆ. ತಾಕತ್ತಿದ್ದರೆ, ಧಮ್ಮಿದ್ದರೆ ನಿಲ್ಲಿಸುವ, ತಡೆಯುವ ಪ್ರಯತ್ನ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಆಕ್ರೋಶಭರಿತರಾಗಿ ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ. 

ಬಿಜೆಪಿ ಸರ್ಕಾರದ 3 ವರ್ಷದ ಸಾಧನೆ ಹಾಗೂ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಒಂದು ವರ್ಷ ನಡೆಸಿದ ಆಡಳಿತ ಬಗ್ಗೆ ರಾಜ್ಯದ ಜನತೆ ಮುಂದಿಡುವ ಸಮಾವೇಶವಾದ ಜನಸ್ಪಂದನೆಯಲ್ಲಿ ಇಂದು ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ನೇರಾನೇರವಾಗಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ವಿರುದ್ಧ ಹರಿದಾಯ್ದರು. 

ಕಾಮನ್ ಮ್ಯಾನ್ ಸಿಎಂ, ಸರಳ, ಮೃದು ಭಾಷಿ ಎಂದು ಕರೆಸಿಕೊಳ್ಳುವ ಬೊಮ್ಮಾಯಿಯವರು ಇಂದು ಜನೋತ್ಸವ ಸಮಾವೇಶದಲ್ಲಿ ಮಾತ್ರ ರೋಷಾ ವೇಷದ ಆವೇಶಭರಿತರಾಗಿ ರಾಜಕೀಯ ಭಾಷಣದಂತೆ ಮಾತನಾಡಿದರು. ಅವರ ಇಂದಿನ ಭಾಷಣ 2023ರ ಚುನಾವಣೆಗೆ ಮುನ್ನುಡಿ ಬರೆದಂತಿತ್ತು.

ನಮ್ಮ ಸರ್ಕಾರವನ್ನು ಪರ್ಸೆಂಟೇಜ್ ಸರ್ಕಾರ ಎಂದು ಕರೆಯುತ್ತಿರುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನವರದ್ದು 100 ಪರ್ಸೆಂಟ್ ಕಮಿಷನ್ ಸರ್ಕಾರವಾಗಿತ್ತು. ಸಿದ್ದರಾಮಯ್ಯ ಆಡಳಿತದಲ್ಲಿ ಎಷ್ಟು ಹಗರಣಗಳು ಕೇಳಿಬಂದಿದ್ದವು, ಎಷ್ಟು ಅಧಿಕಾರಿಗಳು ಜೀವ ಕಳೆದುಕೊಂಡಿದ್ದರು, ಸಿದ್ದರಾಮಯ್ಯ ಅವಧಿಯಲ್ಲಿಯೇ ಹೆಚ್ಚು ಕೊಲೆಗಳು ಆದವು, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತೀರಿ ಎಂದು ಸಾಬೀತಾಗಿದೆ ಎಂದರು.

2019ರಲ್ಲೇ ಬಿ.ಎಸ್​.ಯಡಿಯೂರಪ್ಪ ಸಿಎಂ ಆಗಬೇಕಿತ್ತು. ಆದರೆ ಕಾಂಗ್ರೆಸ್​ನ ಹುನ್ನಾರದಿಂದ ಅದು ಕೈತಪ್ಪಿತ್ತು. ಕಾಂಗ್ರೆಸ್​ನಿಂದ ಬಂದ ಎಲ್ಲ ಶಾಸಕರೂ ವೀರರು. ನಾವು ಸಮರ್ಥವಾಗಿ ಕೊವಿಡ್​ ಎದುರಿಸಿದ್ದೇವೆ. ಜನರಿಗೆ ಉಚಿತವಾಗಿ ಕೊವಿಡ್​ ಲಸಿಕೆ ನೀಡಿದ್ದೇವೆ. ಕಾಂಗ್ರೆಸ್​​ನವರು ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಾರೆ. ಅನ್ನಭಾಗ್ಯ ಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳ್ತಾರೆ. ಚೀಲದಲ್ಲಿದ್ದ ಅಕ್ಕಿ ಮೋದಿದು, ಚೀಲ ಮಾತ್ರ ನಿಮ್ಮದು. ಅನ್ನಭಾಗ್ಯದಲ್ಲಿ ಅವ್ಯವಹಾರ ಆಯ್ತು. ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ದಂಧೆ ಮಾಡಿದ್ರಿ. ಲ್ಯಾಪ್​ಟಾಪ್​ ಕೊಡುವುದರಲ್ಲಿ ಹಗರಣ ಮಾಡಿದ್ರಿ, ನಿಮ್ಮ ಬಗ್ಗೆ ಹೇಳುತ್ತಾ ಹೋದರೆ ಒಂದೆರಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT