ಸುಧಾಕರ್ ಮತ್ತು ಆನಂದ್ ಮಾಮನಿ 
ರಾಜಕೀಯ

ಉಮೇಶ್ ಕತ್ತಿ ಹಠಾತ್ ನಿಧನ: ಆರೋಗ್ಯದ ವಿಷಯದಲ್ಲಿ ರಾಜಕಾರಣಿಗಳ ತೀವ್ರ ಲಕ್ಷ್ಯ; ಜ್ವರ-ಕೆಮ್ಮಿಗೂ ಆಸ್ಪತ್ರೆಗೆ ದಾಖಲು!

ಅರಣ್ಯ ಸಚಿವ ಉಮೇಶ ಕತ್ತಿ (61) ಹೃದಯಾಘಾತದಿಂದ ಹಠಾತ್ ನಿಧನವಾದ ನಂತರ, ರಾಜಕಾರಣಿಗಳು ಅವಕಾಶಗಳನ್ನು ತೆಗೆದುಕೊಳ್ಳಲು ಬಯಸುತ್ತಿಲ್ಲ.

ಬೆಂಗಳೂರು: ಅರಣ್ಯ ಸಚಿವ ಉಮೇಶ ಕತ್ತಿ (61) ಹೃದಯಾಘಾತದಿಂದ ಹಠಾತ್ ನಿಧನವಾದ ನಂತರ, ರಾಜಕಾರಣಿಗಳು ಅವಕಾಶಗಳನ್ನು ತೆಗೆದುಕೊಳ್ಳಲು ಬಯಸುತ್ತಿಲ್ಲ. ಜ್ವರ ಅಥವಾ ಕೆಮ್ಮು ಬಂದರೂ ನಿರ್ಲಕ್ಷ್ಯ ಮಾಡದೇ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧಿವೇಶನಕ್ಕೆ ಗೈರಾಗುತ್ತಿದ್ದಾರೆ.

ಕೆಲ ದಿನಗಳಿಂದ ಸದನಕ್ಕೆ ಗೈರು ಹಾಜರಾಗಿದ್ದ ವಿಧಾನಸಭಾ ಉಪಸಭಾಪತಿ ಹಾಗೂ ಯೆಲ್ಲಮ್ಮ ಶಾಸಕ ಆನಂದ್ ಮಾಮನಿ ಅನಾರೋಗ್ಯದ ಕಾರಣದಿಂದ ಚೆನ್ನೈಗೆ ತೆರಳಿದ್ದಾರೆ. ಅವರ ಬೆಂಬಲಿಗರು ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ ಮಾಮನಿ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವೀಡಿಯೊವನ್ನು ಹಾಕಿ, ತಾವು ಆರೋಗ್ಯದಿಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ನನ್ನ ಹಲವು ಶಾಸಕ ಸ್ನೇಹಿತರ ಸಲಹೆಯಂತೆ ನಾನು ಚಿಕಿತ್ಸೆಗಾಗಿ ಚೆನ್ನೈಗೆ ತೆರಳಿದ್ದೇನೆ. ನಾನು ತೀವ್ರವಾಗಿ ಅಸ್ವಸ್ಥನಾಗಿದ್ದೇನೆ ಎಂಬ ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಉನ್ನತ ವೈದ್ಯಕೀಯ ತಜ್ಞರನ್ನು ಸಂಪರ್ಕಿಸಿದ ನಂತರ ನಾನು ಬೆಂಗಳೂರಿಗೆ ಹಿಂತಿರುಗುತ್ತೇನೆ ಎಂದು ಟ್ವಿಟರ್‌ನಲ್ಲಿ ಅವರ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಮಾಮನಿ ಗೈರು ಹಾಜರಾದ ಕಾರಣ ಕುಮಾರ್ ಬಂಗಾರಪ್ಪ ಅವರು ಸಭಾಧ್ಯಕ್ಷರ ಆಸನದಲ್ಲಿ ಕುಳಿತರು.

ಇದೇ ವೇಳೆ ಬಿಜೆಪಿ ಸರ್ಕಾರದ ಸಂಭ್ರಮಾಚರಣೆ ಜನಸ್ಪಂದನದಲ್ಲಿ ನಿರತರಾಗಿದ್ದ ಆರೋಗ್ಯ ಸಚಿವ ಕೆ.ಸುಧಾಕರ್ ಕೂಡ ಸುಸ್ತಾಗಿದ್ದು, ಸದನದಲ್ಲಿ ಗೈರಾಗಿದ್ದರು. ಸುಧಾಕರ್ ಕೂಡ ಟ್ವಿಟ್ಟರ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದು, “ಅನಾರೋಗ್ಯದ ಕಾರಣ ವೈದ್ಯರು ಕೆಲವು ದಿನಗಳ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಈ ಕಾರಣಕ್ಕಾಗಿ ನಾನು ಸದನದ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸುತ್ತೇನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT