ಮೈಸೂರಿನಲ್ಲಿ ಬಸವರಾಜ ಬೊಮ್ಮಾಯಿ 
ರಾಜಕೀಯ

ಟೀಕೆಗಳೇ ನನಗೆ ಟಾನಿಕ್, ನನ್ನ ಆತ್ಮಸ್ಥೈರ್ಯ- ಸಂಕಲ್ಪವನ್ನು ಹೆಚ್ಚಿಸುತ್ತವೆ: ಸಿಎಂ ಬಸವರಾಜ ಬೊಮ್ಮಾಯಿ

ಟೀಕೆಗಳು ತಮಗೆ ಟಾನಿಕ್ ಇದ್ದಂತೆ, ಅದನ್ನು ಸಮರ್ಥವಾಗಿ ಬಳಸಿಕೊಂಡು, ತಮ್ಮ ಗುರಿಯನ್ನು ಮುಟ್ಟವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮೈಸೂರು: ಟೀಕೆಗಳು ತಮಗೆ ಟಾನಿಕ್ ಇದ್ದಂತೆ, ಅದನ್ನು ಸಮರ್ಥವಾಗಿ ಬಳಸಿಕೊಂಡು, ತಮ್ಮ ಗುರಿಯನ್ನು ಮುಟ್ಟವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಆಡಳಿತಾರೂಢ ಬಿಜೆಪಿ ಸರ್ಕಾರ ಶೇ.40 ಕಮಿಷನ್  ಪಡೆಯುತ್ತಿದೆ ಎಂಬ ಕಾಂಗ್ರೆಸ್ ನ ‘ಪೇಸಿಎಂ’ ಅಭಿಯಾನದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ತಮ್ಮ ಕ್ಷೇತ್ರದ ನಿವಾಸಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಶಾಸಕ ಎಸ್‌ಎ ರಾಮದಾಸ್ ಅವರು ಆಯೋಜಿಸಿದ್ದ ಒಂದು ವಾರದ ಮೋದಿ ಯುಗ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬೊಮ್ಮಾಯಿ, ಟೀಕೆಗಳು ತಮ್ಮ  ಆತ್ಮವಿಶ್ವಾಸದ  ಉತ್ತೇಜನಕ್ಕೆ ಸಹಾಯ ಮಾಡುತ್ತವೆ ಎಂದಿದ್ದಾರೆ.

ಕಳೆದ ಎರಡು ಮೂರು ದಶಕಗಳಲ್ಲಿ, ನಾನು ಹಲವು ಟೀಕೆಗಳನ್ನು ಸ್ವೀಕರಿಸುತ್ತಿದ್ದೇನೆ, ಅದು ನನಗೆ ತುಂಬಾ ಹೊಸದಲ್ಲ. ರಾಜಕಾರಣಿಗಳು ಮುಂದಿನ ಚುನಾವಣೆಯ ಬಗ್ಗೆ ಯೋಚಿಸುತ್ತಾರೆ, ಆದರೆ ರಾಜ್ಯದ ಹಿತ ಚಿಂತಕ ಭವಿಷ್ಯದ ಪೀಳಿಗೆಯ ಬಗ್ಗೆ ಯೋಚಿಸುತ್ತಾರೆ ಎಂದು ನಾನು ನಂಬುತ್ತೇನೆ. ನನ್ನ ವಿರುದ್ಧದ ಯಾವುದೇ ಟೀಕೆಯು ನನ್ನನ್ನು ಕುಗ್ಗಿಸುವುದಿಲ್ಲ ಟೀಕೆಗಳೇ ನನಗೆ ಟಾನಿಕ್. ನನ್ನ ಆತ್ಮಸ್ಥೈರ್ಯ ಮತ್ತು ಸಂಕಲ್ಪವನ್ನು ಹೆಚ್ಚಿಸುವ ಅವುಗಳನ್ನು ‌ಸ್ವಾಗತಿಸುತ್ತೇನೆ. ವಿರೋಧವನ್ನು ಮೆಟ್ಟಿಲಾಗಿಸಿಕೊಂಡು ಗುರಿಯ ಕಡೆಗೆ ಹೋಗುತ್ತೇನೆ. ಹೇಡಿಗಳು ಮಾಡುವ ಕೆಲಸಕ್ಕೆ ಹೆದರುವುದಿಲ್ಲ’ ಎಂದು ಹೇಳಿದ್ದಾರೆ.

ಕಾಂಗ್ರೆಸ್  ನಾಯಕರು ತಮ್ಮ ಅವಧಿಯಲ್ಲಿ ಯೋಜನೆಗಳನ್ನು ಮಾತ್ರ ಘೋಷಿಸುತ್ತಾರೆ. ಆದರೆ ಅವುಗಳನ್ನು ಕಾರ್ಯಗತಗೊಳಿಸಲು ಮತ್ತು ಜನರಿಗೆ ಸಹಾಯ ಮಾಡಲು ಏನನ್ನೂ ಮಾಡುವುದಿಲ್ಲ, ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ಮಧ್ಯದಲ್ಲಿಯೇ ತಿಂದು ಹಾಕುವ ಸಂಸ್ಕೃತಿ‌ ಇತ್ತು. ಅದನ್ನೇ ಹಿಂದಿನ ಒಬ್ಬ ಪ್ರಧಾನಿ ಹೇಳಿದ್ದರು.

ಮಧ್ಯವರ್ತಿಗಳಿರುವ ರಾಜಕೀಯ ವ್ಯವಸ್ಥೆ ಈಗಲೂ ಇದೆ. ಅದನ್ನು ಹೋಗಲಾಡಿಸುವುದಕ್ಕಾಗಿಯೇ ಮೋದಿ ಡಿಜಿಟಲೀಕರಣ ಮಾಡುತ್ತಿದ್ದಾರೆ. ನೇರ ನಗದು ವರ್ಗಾವಣೆ ಮೂಲಕ ಎಲ್ಲ ಯೋಜನೆಗಳ ಲಾಭವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದ್ದಾರೆ’ ಎಂದರು.

ಸರ್ಕಾರದ ಸೌಲಭ್ಯ ಕೊಡಿಸುವುದಾಗಿ ದುಡ್ಡು ಪಡೆಯುವ ಮಧ್ಯವರ್ತಿಗಳಿದ್ದಾರೆ. ಆದರೆ, ಕೃಷ್ಣರಾಜ ಕ್ಷೇತ್ರದಲ್ಲಿ ಶಾಸಕ ರಾಮದಾಸ್ ನೇರವಾಗಿ 70ಸಾವಿರ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸುತ್ತಿರುವುದು ದಾಖಲೆಯೇ ಸರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT