ಚೆನ್ನರಾಯನಪಟ್ಟಣದಲ್ಲಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಪವಿತ್ರ ಜೆ.ಕೆ ಜಂಬೂರು ರವರ ನೇತೃತ್ವದಲ್ಲಿ ಬೃಹತ್ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿರುವ ಜನಾರ್ಧನ ರೆಡ್ಡಿ. 
ರಾಜಕೀಯ

ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ರಾಜಕಾರಣಕ್ಕೆ ಬರಲಿಲ್ಲ: ಗಾಲಿ ಜನಾರ್ಧನ ರೆಡ್ಡಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ನಿರ್ಣಾಯಕ ಪಾತ್ರವಹಿಸಲಿದ್ದು, ನಮ್ಮ ಪಕ್ಷದ ಬೆಂಬಲವಿಲ್ಲದೆ, ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಹೊಸ ಸರ್ಕಾರವನ್ನು ರಚನೆ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಅವರು ಭಾನುವಾರ ಹೇಳಿದರು.

ಹಾಸನ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ನಿರ್ಣಾಯಕ ಪಾತ್ರವಹಿಸಲಿದ್ದು, ನಮ್ಮ ಪಕ್ಷದ ಬೆಂಬಲವಿಲ್ಲದೆ, ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಹೊಸ ಸರ್ಕಾರವನ್ನು ರಚನೆ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಅವರು ಭಾನುವಾರ ಹೇಳಿದರು.

ಚನ್ನರಾಯಪಟ್ಟಣದಲ್ಲಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಪ್ರಗತಿ ಪಕ್ಷದ ಪ್ರಗತಿ ಯಾತ್ರೆ ಹಾಗೂ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 50 ಕ್ಷೇತ್ರಗಳಲ್ಲಿ ಕೆಆರ್‌ಪಿಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, 30ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಹೀಗಾಗಿ ಈ ಬಾರಿಯ ಸರ್ಕಾರ ರಚನೆಯಲ್ಲಿ ನಮ್ಮ ಪಕ್ಷ ನಿರ್ಣಾಯಕ ಪಾತ್ರ ವಹಿಸಲಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಬಂದವರನ್ನು ಮುಂದಿನ ದಿನಗಳಲ್ಲಿ ರಾಜಕೀಯವಾಗಿಯೇ ಎದುರಿಸುತ್ತೇನೆ. ಜನರ ಸೇವೆ ಮಾಡಲು ಆದ್ಯತೆ ನೀಡುತ್ತೇನೆ. ನಾನು ಈ ನಿರ್ಧಾರ ತೆಗೆದುಕೊಳ್ಳಲು 12 ವರ್ಷ ಸಮಯ ತೆಗೆದುಕೊಂಡಿದ್ದೇನೆ. ಇಟ್ಟಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ತೆಗೆದುಕೊಳ್ಳಲಾರೆ ಎಂದು ಹೇಳಿದರು.

ಅಂದು ನಾನು ಮಾಡಿದ ಪ್ರಯತ್ನದಿಂದಾಗಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು. ಬಳ್ಳಾರಿ ಜಿಲ್ಲೆಯ 10 ರಲ್ಲಿ 9 ಸ್ಥಾನಗಳನ್ನು ಗೆಲ್ಲುವುದಕ್ಕೂ ನಾನೇ ಕಾರಣ ಎಂದು ತಿಳಿಸಿದರು.

ಬಳಿಕ ಬಿಜೆಪಿ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವನಾಗಿ ರಾಜ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದ ಅವರು, ಹೆಲಿ ಟೂರಿಸಂ ಯೋಜನೆಯಡಿಯಲ್ಲಿ ಇಡೀ ಕರ್ನಾಟಕವನ್ನು ಮೂರು ದಿನದಲ್ಲಿ ನೋಡುವ ಯೋಜನೆಯನ್ನು ರೂಪಿಸಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದವನು ನಾನು ಎಂದು ಹೇಳಿದರು.

ವಿಮಾನ ನಿಲ್ದಾಣಗಳನ್ನು ಉನ್ನತೀಕರಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿ ಕೊಟ್ಟಿದ್ದು ನಾನು. ಸಚಿವನಾಗಿ ಸಾಕಷ್ಟು ಕೆಲಸವನ್ನೂ ಮಾಡಿದ್ದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ನನ್ನನ್ನು ಹೀಗೆ ಬಿಟ್ಟರೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತೇನೆ ಎನ್ನುವ ಭಯ, ಆತಂಕದಲ್ಲಿ ನನ್ನನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ಮಾಡಿದರು. ಹಿತ ಶತ್ರುಗಳ ಕುತಂತ್ರಕ್ಕೆ ಒಳಗಾಗಿ 12 ವರ್ಷಗಳ ಕಾಲ ನಾನು ರಾಜಕೀಯ ಸನ್ಯಾಸತ್ವವನ್ನು ತೆಗೆದುಕೊಳ್ಳುವ ಪರಿಸ್ಥಿತಿಯೊಂದಿಗೆ ಜೈಲು ವಾಸವನ್ನೂ ಅನುಭವಿಸಬೇಕಾಯಿತು. ನಾನು ರಾಜಕೀಯವಾಗಿ ಬೆಳೆಯುವುದನ್ನು ಸಹಿಸಲಾರದ ಕುತಂತ್ರಿಗಳು ನನ್ನನ್ನು ತುಳಿಯುವ ತಂತ್ರ ರೂಪಿಸಿದರು ಎಂದು ಬಿಜೆಪಿ ನಾಯಕರ ವಿರುದ್ಧ ಪರೋಕ್ಷವಾಗಿ ಕುಟುಕಿದರು.

ಯಾವುದೇ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ನಾನು ರಾಜಕಾರಣತ್ತೆ ಮತ್ತೆ ಬಂದಿಲ್ಲ. ನನ್ನಿಂದ ಜನರಿಗೆ ಏನಾನು ಸೇವೆ ಮಾಡಬೇಕೆಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹುಟ್ಟು ಹಾಕಿದ್ದೇನೆ. ನಮ್ಮ ಪಕ್ಷದಿಂದ ಹಲವಾರು ಪ್ರಗತಿಪರ ಯೋಜನೆಗಳನ್ನು ರೂಪಿಸಿದ್ದು, ರಾಜ್ಯದಲ್ಲಿ ಕೆಆರ್'ಪಿಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬಸವೇಶ್ವರ ರೈತ ಯೋಜನೆಯಡಿ ಪ್ರತಿಯೊಬ್ಬ ರೈತರಿಗೂ ಪ್ರತಿ ವರ್ಷ ರೂ.15 ಸಾವಿರ ನೀಡಲಾಗುವುದು. ಅಲ್ಲದೆ, ರೈತರಿಗೆ ದಿನದ 9 ಗಂಟೆ ಉಚಿತ ವಿದ್ಯುತ್ ನೀಡಲಾಗುವುದು. ರೈತರು ರಾಸಾಯನಿಕ ಗೊಬ್ಬರ, ಔ|ಧ, ಬಿತ್ತನೆ ಬೀಜಕ್ಕೆ ಅಲೆಯುವುದನ್ನು ತಪ್ಪಿಸಿ ಮನೆ ಬಾಗಿಲಿಗೆ ಪೂರೈಸಲಾಗುವುದು. ಶ್ರವಣಬೆಳಗೊಳದಲ್ಲಿ 5 ಕೋಟಿ ವೆಚ್ಚದಲ್ಲಿ ಮಹಿಳೆಯರಿಗೆ ಉಚಿತ ಟೈಲರಿಂಗ್ ಕೋಚಿಂಗ್ ಸೆಂಟರ್ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಸ್ವಪ್ರಯತ್ನದಿಂದ ಪಕ್ಷವನ್ನು ತಳಮಟ್ಟದಿಂದ ಕಟ್ಟುತ್ತೇನೆ, ಯಾವುದೇ ರಾಜಕೀಯ ಪಕ್ಷದ ಮುಖಂಡರನ್ನು ಕೆಆರ್‌ಪಿಪಿಗೆ ಆಹ್ವಾನಿಸುವುದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಅಕ್ರಮದ ಹಾದಿ ಹಿಡಿಯದಿರಲಿ: ಗೃಹ ಸಚಿವ ಪರಮೇಶ್ವರರ "ಧ್ವಂಸ" ಹೇಳಿಕೆಗೆ ಪಿ. ಚಿದಂಬರಂ ಕಿಡಿ!

ತಾಳ್ಮೆ ಕಳೆದುಕೊಂಡು ಪುಟಿನ್-ಎರ್ಡೋಗನ್ ನಡುವಿನ ರಹಸ್ಯ ಸಭೆಗೆ ನುಗ್ಗಿದ ಪಾಕ್ ಪ್ರಧಾನಿ; ಮುಂದೇನಾಯ್ತು?, Video!

'ಸಂಸ್ಕೃತದ ವ್ಯಾಕರಣ ಹುಟ್ಟಿದ್ದು ನಮ್ಮಲ್ಲೇ; ನಾವ್ಯಾಕೆ ಸಂಸ್ಕೃತ ಕಲಿಯಬಾರದು'?: Pak ವಿವಿಯಲ್ಲಿ ಮಹಾಭಾರತ, ಸಂಸ್ಕೃತದ ಕೋರ್ಸ್ ಆರಂಭ!

ರೌಡಿಶೀಟರ್‌ ಮೌಖಿಕವಾಗಿ ಕರೆಸಿಕೊಳ್ಳಲು ಬ್ರೇಕ್‌; SMS ಅಥವಾ WhatsApp ಬಳಸಿ: ಪೊಲೀಸರಿಗೆ ಹೈಕೋರ್ಟ್‌ ಸೂಚನೆ!

ಭಾರತದಲ್ಲಿ 11,718 ಕೋಟಿ ರೂ ವೆಚ್ಚದಲ್ಲಿ 'ಡಿಜಿಟಲ್ ಜನಗಣತಿ': ಕೇಂದ್ರ ಸಂಪುಟ ಅನುಮೋದನೆ!

SCROLL FOR NEXT