ಎಚ್.ಡಿ ಕುಮಾರಸ್ವಾಮಿ ಮತ್ತು ಎಚ್.ಡಿ ದೇವೇಗೌಡ 
ರಾಜಕೀಯ

3ನೇ ಬಾರಿ ಸಿಎಂ ಆಗುವ ಆಸೆ ನನಗಿಲ್ಲ; ಜೀವನದ ಕೊನೆ ಹಂತದಲ್ಲಿದ್ದೇನೆ ಅಂದುಕೊಳ್ಳಬೇಡಿ, ಶಿವ ನಿಮ್ಮನ್ನ ಸದ್ಯಕ್ಕೆ ಕರೆದುಕೊಳ್ಳಲ್ಲ: ಎಚ್‌ಡಿಕೆ

ಈಗಾಗಲೇ ನನಗೆ 2 ಬಾರಿ ಹೃದಯ ಶಸ್ತಚಿಕಿತ್ಸೆಯಾಗಿದೆ, ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. 3ನೇ ಬಾರಿಗೆ ಮುಖ್ಯಮಂತ್ರಿಯಾಗುವ ಉದ್ದೇಶ ನನಗಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದರು.

ಮಂಡ್ಯ: ಈಗಾಗಲೇ ನನಗೆ 2 ಬಾರಿ ಹೃದಯ ಶಸ್ತಚಿಕಿತ್ಸೆಯಾಗಿದೆ, ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. 3ನೇ ಬಾರಿಗೆ ಮುಖ್ಯಮಂತ್ರಿಯಾಗುವ ಉದ್ದೇಶ ನನಗಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದರು.

ಕೆ.ಆರ್ ಪೇಟೆಯಲ್ಲಿ ಸೋಮವಾರ ನಡೆದ ಜೆಡಿಎಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಷ್ಟು ಬಾರಿ ಮುಖ್ಯಮಂತ್ರಿಯಾದರೂ ಮಣ್ಣಿಗೆ ಹೋಗುವಾಗ ನಾನು ಮಾಜಿ ಮುಖ್ಯಮಂತ್ರಿಯೇ. ನನ್ನ ಹೋರಾಟ ಮುಖ್ಯಮಂತ್ರಿ ಆಗುವುದಕ್ಕಾಗಿ ಅಲ್ಲ, ನನ್ನ ಹೋರಾಟವೇನಿದ್ದರೂ ಬಡವರ ಪರವಾಗಿ ಮಾತ್ರ’ ಎಂದರು.

ಎಚ್‌.ಡಿ.ದೇವೇಗೌಡರು 60 ವರ್ಷ ರಾಜಕಾರಣ ಮಾಡಿದ್ದಾರೆ, ಪ್ರಧಾನಿಯಾಗಿದ್ದು 10 ತಿಂಗಳು ಮಾತ್ರ. 15 ತಿಂಗಳು ಮಖ್ಯಮಂತ್ರಿ, 2–3 ವರ್ಷ ನೀರಾವರಿ ಮಂತ್ರಿ, ಉಳಿದಂತೆ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಅವರ ಕನಸುಗಳನ್ನು ನನಸು ಮಾಡುವುದಕ್ಕಾಗಿ ನಾನು ಹೋರಾಟ ಮಾಡುತ್ತಿದ್ದೇನೆ ಎಂದರು.

ಜೀವನದಲ್ಲಿ ಕೊನೆ ಹಂತಕ್ಕೆ ಬಂದುಬಿಟ್ಟಿದ್ದೇನೆ, ದೇವರು ನನ್ನನ್ನು ಕರೆದುಕೊಂಡು ಬಿಡ್ತಾನೆ ಎಂದುಕೊಂಡು ಮಾನಸಿಕ ಚಿಂತೆ ಮಾಡಿ ನಿಮ್ಮ ಪ್ರಾಣ ಹೋಗಬಾರದು. ನಮ್ಮ ಸಾಧನೆಯನ್ನು ಕಣ್ಣಾರೆ ನೋಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಎಂ ಎಚ್‌ಡಿ ಕುಮಾರಸ್ವಾಮಿ ಭಾವುಕರಾಗಿ ನುಡಿದರು.

ಜೀವನದಲ್ಲಿ ಕೊನೆ ಹಂತಕ್ಕೆ ಬಂದುಬಿಟ್ಟಿದ್ದೇನೆ, ದೇವರು ನನ್ನನ್ನು ಕರೆದುಕೊಂಡು ಬಿಡ್ತಾನೆ ಎಂದು ತಿಳಿದುಕೊಂಡಿದ್ದೀರಾ? ಮನಸ್ಸಿನಲ್ಲಿರುವ ಈ ಯೋಚನೆ ತೆಗೆದು ಹಾಕಿ ಎಂದು ದೇವೇಗೌಡರಿಗೆ ಪುತ್ರ ಕುಮಾರಸ್ವಾಮಿ ಸಲಹೆ ನೀಡಿದರು. ನನ್ನ ಪ್ರಕಾರ ಶಿವ ನಿಮ್ಮನ್ನು ಸದ್ಯಕ್ಕೆ ಕರೆದುಕೊಳ್ಳಲ್ಲ. ನೀವು ಮಾಡಲಿಕ್ಕೆ ಆಗದ ಸಾಧನೆ ನಾನು ಮಾಡುತ್ತೇನೆ. ಇದನ್ನು ನೀವು ನಿಮ್ಮ ಕಣ್ಣಾರೆ ನೋಡಬೇಕು. ನಿಮ್ಮ ಆಸೆಯನ್ನು ಮಕ್ಕಳಾಗಿ ಈಡೇರಿಸುವ ಸವಾಲು ಸ್ವೀಕರಿಸಿದ್ದೇನೆ. ಅಲ್ಲಿಯವರೆಗೂ ನೀವು ಬದುಕಿರುತ್ತೀರಿ. ಯಾವುದೇ ಕಾರಣಕ್ಕೂ ಮಾನಸಿಕ ಚಿಂತನೆಗೆ ಒಳಗಾಗಿ ನಿಮ್ಮ ಪ್ರಾಣ ಹೋಗಬಾರದು ಎಂದು ಕುಮಾರಸ್ವಾಮಿ ಭಾವುಕರಾದರು.

ನಾನು ಸ್ವಾರ್ಥಕ್ಕಾಗಿ ಶ್ರಮಪಡುತ್ತಿಲ್ಲ, ಜಾತಿಗಾಗಿಯೂ ಅಲ್ಲ. ನನಗೆ ಜಾತಿ ವ್ಯಾಮೋಹ ಇಲ್ಲ. ಸಿಕ್ಕ ಅವಕಾಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ರಾಷ್ಟ್ರೀಯ ಪಕ್ಷಗಳು ದುಡ್ಡು ಕೊಟ್ಟು ಸಮೀಕ್ಷೆ ಮಾಡಿಸಿದ್ದು ಜನರು ಅವುಗಳನ್ನು ನಂಬಬಾರದು. ಕಾಂಗ್ರೆಸ್‌, ಬಿಜೆಪಿಗಿಂತ 10–15 ಹೆಚ್ಚು ಸೀಟು ಗೆಲ್ಲುತ್ತೇವೆ ಎಂದರು.

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ನಮ್ಮವರೇ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ನಮ್ಮ ನೆಂಟರೇ ಬಂದು ಜೆಡಿಎಸ್‌ ಅಭ್ಯರ್ಥಿಯನ್ನು ಸೋಲಿಸಿ ಎನ್ನಬಹುದು, ಅವರ ಮಾತುಗಳನ್ನು ಕೇಳಬೇಡಿ ಎಂದರು, ಈ ಮಾತು ಎಚ್‌.ಡಿ.ರೇವಣ್ಣ ಕುರಿತು ಹೇಳಿದ್ದು ಎಂಬಂತೆ ಬಿಂಬಿತವಾಯಿತು. ನನ್ನ ಹೋರಾಟ ಬಡವರ ಬದುಕು ಸರಿಪಡಿಸಲು. ನನಗೆ ಜಾತಿ ಇಲ್ಲ. ಜಾತಿಯ ವ್ಯಾಮೋಹ ಬೇಡ. ನನ್ನ ಮೇಲೆ ವಿಶ್ವಾಸ ಇಡಿ. ಸಿಕ್ಕ ಅವಕಾಶದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT