ಯಡಿಯೂರಪ್ಪ, ಶೆಟ್ಟರ್ ಮತ್ತು ಸವದಿ 
ರಾಜಕೀಯ

ಬಿಜೆಪಿಯಲ್ಲಿ ಲಿಂಗಾಯತ ನಾಯಕರ ಸಾಮ್ರಾಜ್ಯ ಪತನ: ವಯಸ್ಸಿನ ನೆಪ ಹೇಳಿ ನೇಪಥ್ಯಕ್ಕೆ ಸಮರ್ಥ ಮುಖಂಡರು!

ಯಡಿಯೂರಪ್ಪ ಈಗಾಗಲೇ 75 ವರ್ಷ ದಾಟಿರುವಾಗ ಅವರನ್ನು ಸಿಎಂ ಮಾಡುವುದರ ಹಿಂದೆ ಬಿಜೆಪಿಯ ತರ್ಕವನ್ನು ರಾಜ್ಯದ ಹಲವಾರು ನಾಯಕರು ಪ್ರಶ್ನಿಸಿದಾಗಲೂ, ವಯಸ್ಸನ್ನು ಒಂದು ಅಂಶವಾಗಿ ಉಲ್ಲೇಖಿಸಿ, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೊರೆಯುವಂತೆ ಮಾಡಲಾಯಿತು.

ಬೆಳಗಾವಿ: ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಲಿಂಗಾಯತ ಸಮುದಾಯದ ಹಲವಾರು ಪ್ರಮುಖ ನಾಯಕರಿಗೆ ಟಿಕೆಟ್ ನೀಡದೆ ಬಿಜೆಪಿ ಕೈಬಿಟ್ಟಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಂದ ಆರಂಭವಾಗಿ, ಶೆಟ್ಟರ್, ಸವದಿ, ಮಹಾದೇವಪ್ಪ ಯಾದವಾಡ, ಎಂ ಕೆ ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪುರ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರವರೆಗೂ ಬಂದು ನಿಂತಿದೆ.

ವಯಸನ್ನು ಕಡೆಗಣಸಿದರೆ, ಅವರಲ್ಲಿ ಹೆಚ್ಚಿನವರಿಗೆ ಈ ಚುನಾವಣೆಯಲ್ಲಿ ಗೆಲ್ಲು ಸಾಮರ್ಥ್ಯವಿದೆ ಹಾಗೂ ಉನ್ನತ ಹುದ್ದೆ ನಿರ್ವಹಿಸುವಷ್ಟು ಸಮರ್ಥರಿದ್ದಾರೆ.

ಯಡಿಯೂರಪ್ಪ ಈಗಾಗಲೇ 75 ವರ್ಷ ದಾಟಿರುವಾಗ ಅವರನ್ನು ಸಿಎಂ ಮಾಡುವುದರ ಹಿಂದೆ ಬಿಜೆಪಿಯ ತರ್ಕವನ್ನು ರಾಜ್ಯದ ಹಲವಾರು ನಾಯಕರು ಪ್ರಶ್ನಿಸಿದಾಗಲೂ, ವಯಸ್ಸನ್ನು ಒಂದು ಅಂಶವಾಗಿ ಉಲ್ಲೇಖಿಸಿ, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೊರೆಯುವಂತೆ ಮಾಡಲಾಯಿತು.

ಕುಂಟುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೋಲಿಸಿದರೇ ಶೆಟ್ಟರ್ ಮತ್ತು ಸವದಿ ತುಂಬಾ ಸಮರ್ಥರಾಗಿದ್ದಾರೆ.

ಕಳೆದ ಬಾರಿ ಅಥಣಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಯಡಿಯೂರಪ್ಪನವರ ಸಂಪುಟದಲ್ಲಿ ಸವದಿ ಅವರನ್ನು ಡಿಸಿಎಂ ಆಗಿ ನೇಮಿಸಿದಾಗ, ಬಿಜೆಪಿ ಹೈಕಮಾಂಡ್‌ನ ನಿರ್ಧಾರವು ಅನೇಕರನ್ನು ದಿಗ್ಭ್ರಮೆಗೊಳಿಸಿತು.

ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಪಕ್ಷ ನಿರ್ಧರಿಸಿದ ಸಮಯದಲ್ಲಿ, ಸವದಿ ಅವರು ಉನ್ನತ ಹುದ್ದೆಗೆ ಸಂಭಾವ್ಯ ನಾಯಕರಾಗಿ ಹೊರಹೊಮ್ಮಿದ್ದರು, ಆದರೆ ಅಂತಿಮವಾಗಿ ಸಿಎಂ ಪಟ್ಟ ಬೊಮ್ಮಾಯಿ ಪಾಲಾಯಿತು.

ಕೊನೆಗೂ ತಮ್ಮ ರಾಜಕೀಯ ಪ್ರತಿಸ್ಪರ್ಧಿ ಮಹೇಶ ಕುಮಟಳ್ಳಿಗೆ ಪಕ್ಷದ ಟಿಕೆಟ್ ನೀಡುವ ಮೂಲಕ ಸವದಿಯನ್ನು ನೇಪಥ್ಯಕ್ಕೆ ಸರಿಸಲು ಪಕ್ಷ ಮಾಡಿರುವ ನಿರ್ಧಾರ ಅವರಿಗೆ ಆಘಾತ ತಂದಿದೆ. ಮುಂದಿನ ಸಿಎಂ ಆಗುವ ಸಾಮರ್ಥ್ಯ ಹೊಂದಿರುವ ನಾಯಕ ಅಂತಿಮವಾಗಿ ಬಿಜೆಪಿಯಲ್ಲಿ ತನ್ನ ರಾಜಕೀಯ ಜೀವನ ರಾತ್ರೋರಾತ್ರಿ ಹಠಾತ್ತನೆ ಕೊನೆಗೊಂಡಿತು.

ಬಿಜೆಪಿಯ ವಿಶ್ವಾಸ ದ್ರೋಹದಿಂದ ವಿಚಲಿತರಾಗದ ಸವದಿ, ಬೇರೆ ಪಕ್ಷದಿಂದ ಅಥವಾ ಸ್ವತಂತ್ರ್ಯವಾಗಿ ಕಣಕ್ಕಿಳಿಯಲು ನಿರ್ಧರಸಿದ್ದಾರೆ.

ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಅವರ ಗೆಲುವು ಅನಾಯಾಸವಾಗಿದ್ದರೂ ಪಕ್ಷ ಟಿಕೆಟ್ ನಿರಾಕರಿಸಿದೆ. ಹೀಗಾಗಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಲಿಂಗಾಯತ ಮತದಾರಿರದ್ದು ಅವರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಸದ್ಯ ರಾಜ್ಯದಲ್ಲಿ ಲಿಂಗಾಯತ ಬಿಜೆಪಿ ನಾಯಕರ ಗುಂಪಿನಲ್ಲಿ ಸವದಿ ಹೊರತುಪಡಿಸಿ ಸಿಎಂ ಸ್ಥಾನಕ್ಕೆ ಸಮರ್ಥರಾಗಿರುವವರಲ್ಲಿ ಶೆಟ್ಟರ್ ಕೂಡ ಒಬ್ಬರು. ವಿಜಯಪುರದಿಂದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತ್ತು ಬಾದಾಮಿಯಿಂದ ಮೂರು ಬಾರಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಅವರಿಗೆ ಲಿಂಗಾಯತ ಸಮುದಾಯದ ಜನಪ್ರಿಯತೆಯ ಆಧಾರದ ಮೇಲೆ ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯವನ್ನು ಪರಿಗಣಿಸಿ ಟಿಕೆಟ್ ನೀಡಬೇಕಿತ್ತು. ರಾಮದುರ್ಗದಲ್ಲಿ ಲಿಂಗಾಯತ ಯಾದವಾಡ ಕೂಡ ಸುಲಭವಾಗಿ ಗೆಲ್ಲಬಹುದಿತ್ತು ಆದರೆ ಪಕ್ಷವು ಅವರ ಸ್ಥಾನಕ್ಕೆ ಜನಪ್ರಿಯವಲ್ಲದ ಚಿಕ್ಕ ರೇವಣ್ಣನನ್ನು ನೇಮಿಸಿತು.
 
ಪ್ರಭಾವಿ ಲಿಂಗಾಯತ ನಾಯಕರನ್ನು ಚುನಾವಣಾ ರಾಜಕೀಯದಿಂದ ದೂರವಿಟ್ಟು ಮುಂಬರುವ ಚುನಾವಣೆಯಲ್ಲಿ ಸಮುದಾಯದ ಮತಗಳನ್ನು ಬಿಜೆಪಿ ಹೇಗೆ ಕ್ರೋಢೀಕರಿಸುತ್ತದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT