ಎಚ್.ಡಿ ಕುಮಾರಸ್ವಾಮಿ 
ರಾಜಕೀಯ

2019ರ ಚುನಾವಣೆ ಗೆಲುವಿನ ದುರಹಂಕಾರ ಇನ್ನು ಕಡಿಮೆ ಆಗಿಲ್ಲ, ಜನ ಒಂದು ದಿನ ಇಳಿಸುತ್ತಾರೆ: ಎಚ್.ಡಿ ಕುಮಾರಸ್ವಾಮಿ

ಮಂಡ್ಯ ವಿಧಾನಸಭೆ ಕ್ಷೇತ್ರಕ್ಕೆ ಮಾಜಿ ಸಿಎಂ ಎಚ್.ಡಿಕೆ ಬಂದರೆ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಕೆ ನೀಡಿರುವ ಸಂಸದೆ ಸುಮಲತಾ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಮೂಡಿಗೆರೆ: ಮಂಡ್ಯ ವಿಧಾನಸಭೆ ಕ್ಷೇತ್ರಕ್ಕೆ ಮಾಜಿ ಸಿಎಂ ಎಚ್.ಡಿಕೆ ಬಂದರೆ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಕೆ ನೀಡಿರುವ ಸಂಸದೆ ಸುಮಲತಾ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ  ಮೂಡಿಗೆರೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸುಮಲತಾ ಅವ್ರು 2019ರ ಚುನಾವಣೆಯ ದುರಹಂಕಾರದಲ್ಲಿದ್ದಾರೆ. ಅವರಿಗೆ ಇನ್ನೂ ದುರಹಂಕಾರ ಕಡಿಮೆ ಆಗಿಲ್ಲ. ಜನ ಒಂದಲ್ಲ ಒಂದು ದಿನ ಕೆಳಕ್ಕೆ ಇಳಿಸುತ್ತಾರೆ. ನನಗೆ ಸೇರಿದಂತೆ ಯಾರಿಗೂ ಯಾವುದೂ ಶಾಶ್ವತವಲ್ಲ ಎಂದಿದ್ದಾರೆ. ಸವಾಲಿನ ಮೂಲಕ ಸೆಡ್ಡು ಹೊಡೀತಾರೆ ಅಂದರೆ ದೇವೆಗೌಡರ ಕುಟುಂಬದ ಮೇಲಿನ ದ್ವೇಷ ಎದ್ದು ಕಾಣುತ್ತೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ದೇವೇಗೌಡರ ಕುಟುಂಬದ ಮೇಲೆ ಯಾವ ಮಟ್ಟದಲ್ಲಿ ದ್ವೇಷ ಇದೆ ಅನ್ನೋದು ಗೊತ್ತಾಗುತ್ತಿದೆ. ಅವರು ತುಂಬಾ ದೊಡ್ಡವರು, ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ. ಚನ್ನಪಟ್ಟಣದಲ್ಲಿ ಈಗಾಗಲೇ ಅರ್ಜಿ ಹಾಕಿದ್ದೇನೆ, ನಾನು ಒಂದೇ ಕಡೆ ಸ್ಪರ್ಧಿಸುವುದು.

ದೇವೇಗೌಡರ ಕುಟುಂಬದ ಯುವಕನನ್ನು ಸೋಲಿಸಿ, ಜನತಾ ದಳದ ಕೋಟೆಯನ್ನು ಛಿದ್ರ ಮಾಡಿದ್ದಾರೆ. 2019ರ ಚುನಾವಣೆಯ ಗುಂಗಿನಲ್ಲಿ ಅವರು ಇನ್ನು ಇದ್ದಾರೆ. ಜನ ಒಂದು ಜನ ದಿನ ಎಲ್ಲವನ್ನು ಇಳಿಸುತ್ತಾರೆ ಎಂದು ಸುಮಲತಾ ವಿರುದ್ಧ ಎಚ್.ಡಿ ಕುಮಾರಸ್ವಾಮಿ ಕೆಂಡ ಕಾರಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್ ಮುಗಿಸುತ್ತೇನೆಂದು ಸವಾಲು ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ಜನತೆಯೇ ಸವಾಲು ಸ್ವೀಕರಿಸಲಿದ್ದಾರೆ. ಮಂಡ್ಯದಿಂದ ಸ್ಪರ್ಧೆ ಮಾಡಲು ನಾನೇನು ಟೂರಿಂಗ್ ಟಾಕೀಸಾ? ಕಾರ್ಯಕರ್ತರಿಗಾಗಿ ರಾಮನಗರ, ಚನ್ನಪಟ್ಟಣದಲ್ಲಿ ತಲೆಕೊಟ್ಟೆನು. ಮಂಡ್ಯದಲ್ಲಿ ಹಲವಾರು ಅಭ್ಯರ್ಥಿ ಆಕಾಂಕ್ಷಿಗಳಿದ್ದಾರೆ, ಸಮರ್ಥರಿದ್ದಾರೆ. ಮೇಲೇಳುವುದು, ಕೆಳಗೆ ಬೀಳುವುದು ಜನ ತೀರ್ಮಾನಿಸುತ್ತಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

'JDS ಪಾದಯಾತ್ರೆಯ ಬಂಡವಾಳ ಬಯಲು ಮಾಡಿದ ವಿಜಯೇಂದ್ರ': ಕಾಂಗ್ರೆಸ್​​ನಿಂದ ವಿಡಿಯೋ ಬಿಡುಗಡೆ!

ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಚರ್ಚೆಗೆ ಅಮಿತ್ ಶಾ ಉತ್ತರಿಸುತ್ತಾರೆ, ಆದರೆ...: ಕಿರಣ್ ರಿಜಿಜು

ಅಮೃತ್ ಭಾರತ್ ಯೋಜನೆಗೆ ವೇಗದ ಕೊರತೆ? ಕರ್ನಾಟಕದ 61 ರೈಲು ನಿಲ್ದಾಣಗಳಲ್ಲಿ 12 ಮಾತ್ರ ಮೇಲ್ದರ್ಜೆಗೆ