ನೆಹರೂ ಓಲೇಕಾರ್ 
ರಾಜಕೀಯ

ಟಿಕೆಟ್ ಕೈ ತಪ್ಪಿದ ಬೇಸರ: ಜೆಡಿಎಸ್​ಗೆ ಹೋಗದೆ ಬಿಜೆಪಿಯಲ್ಲೇ ಉಳಿಯುತ್ತೇನೆಂದ ನೆಹರೂ ಓಲೇಕಾರ್!

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದರಿಂದ ಬೇಸರಗೊಂಡು ಜೆಡಿಎಸ್​ಗೆ ಹೋಗುತ್ತೇನೆ ಎಂದಿದ್ದ ನೆಹರು ಓಲೇಕಾರ ಇದೀಗ ಯುಟರ್ನ್​​ ಹೊಡಿದಿದ್ದು, ಬಿಜೆಪಿಯಲ್ಲೆ ಮುಂದುವರೆಯುವುದಾಗಿ ತಿಳಿಸಿದ್ದಾರೆ.

ಹಾವೇರಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದರಿಂದ ಬೇಸರಗೊಂಡು ಜೆಡಿಎಸ್​ಗೆ ಹೋಗುತ್ತೇನೆ ಎಂದಿದ್ದ ನೆಹರು ಓಲೇಕಾರ ಇದೀಗ ಯುಟರ್ನ್​​ ಹೊಡಿದಿದ್ದು, ಬಿಜೆಪಿಯಲ್ಲೆ ಮುಂದುವರೆಯುವುದಾಗಿ ತಿಳಿಸಿದ್ದಾರೆ. 

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷ ಬಿಟ್ಟು ಹೋಗುತ್ತಿಲ್ಲ ಎಂದರು. ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ ಓಲೇಕಾರ್ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ ಎಂದು ಆರೋಪಿಸಿದರು. 

ಪಕ್ಷ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ನನಗೆ ಬೇಸರವಾಗಿತ್ತು. ಆದರೆ ನಾನು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಬಿಜೆಪಿ ಪಕ್ಷದಲ್ಲಿಯೇ ಇದ್ದೇನೆ. ಬೇರೆ ಯಾವ ಪಕ್ಷದ ಬಗ್ಗೆ ನನಗೆ ಒಲುವಿಲ್ಲ. ಬಿಜೆಪಿಯಲ್ಲೇ ಇದ್ದೇನೆ ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಸಿಎಂ ಬೊಮ್ಮಾಯಿ ಬೇಡ ಎಂದಿದ್ದಾರೆ. ಬೊಮ್ಮಾಯಿ ಕರೆದರೆ ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೇಳಿದರು.

ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗಿ ಅಲ್ಲಿ ಪಕ್ಷ ಸಂಘಟನೆ ಮಾಡಿ ಕಟ್ಟುವುದು ಸುಲಭವಲ್ಲ. ನಾವು ಇರುವ ಪಕ್ಷದಲ್ಲೇ ನಮಗೆ ಗೌರವವಿರುತ್ತದೆ. ಪದೇ ಪದೇ ಪಕ್ಷ ಬದಲಾವಣೆ ಮಾಡುತ್ತಿದ್ದರೆ ಗೌರವ ಇರುವುದಿಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣ: ಏರ್ ಪೋರ್ಟ್ ನಲ್ಲಿ ಬಿಜೆಪಿ MLA ಬೈರತಿ ಬಸವರಾಜ್ ಬಂಧನ!

OP Sindoor ಎಫೆಕ್ಟ್: ಮೆಗಾ Rafale ಜೆಟ್ ಯೋಜನೆಗೆ 'ಕೇಂದ್ರ' ಅನುಮೋದನೆ, 114 ಜೆಟ್‌ ಖರೀದಿ, ಬಹುತೇಕ ಭಾರತದಲ್ಲೇ ನಿರ್ಮಾಣ!

News wrap 12-02-2026| ನಾನು ರಾಜಕಾರಣ ಮಾಡೋಕೇ ದಿಲ್ಲಿಗೆ ಬಂದಿರೋದು- ಡಿಕೆ ಶಿವಕುಮಾರ್; ಹೆಬ್ಬಾಳ–ಸರ್ಜಾಪುರ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರದ ಬ್ರೇಕ್; ರಾಹುಲ್ ಗಾಂಧಿ ಫೋಟೋ ಎಡಿಟ್: ಶಾಸಕ ಆರಗ ಜ್ಞಾನೇಂದ್ರ PA ಬಂಧನ

ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ ಹೆಚ್ಚಳ: ಮಧ್ಯಮ ವರ್ಗ ತುಳಿಯುವ ಪ್ರಯತ್ನವೇ? ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ಮಾರಾಟವಾಗದೇ ಉಳಿದದ್ದಾ? or ಕುಡಿದು ಉಳಿದದ್ದಾ?: ದೆಹಲಿ ಸ್ಟೇಡಿಯಂ ಸಿಬ್ಬಂದಿ ಪಾನೀಯ ತುಂಬುತ್ತಿರುವ Video Viral

SCROLL FOR NEXT