ಬಿ.ಕೆ ಹರಿಪ್ರಸಾದ್ 
ರಾಜಕೀಯ

'ಅರಸು ಕಾಲದಲ್ಲಿಯೂ ನಾವು ವಿರೋಧಿ ಬಣದಲ್ಲಿದ್ದೆವು; ಹಿಂದುಳಿದ ವರ್ಗದ ಹಿತವೆಂದರೆ ಒಂದು ಪ್ರಬಲ ಜಾತಿಗೆ ಅಧಿಕಾರ ಕೊಡುವುದಲ್ಲ'

ಅರಸು ಕಾಲದಲ್ಲಿ ನಾವು ವಿರೋಧಿ ಬಣದಲ್ಲಿದ್ದೆವು. ಹಾಗಿದ್ದರೂ ನಮ್ಮನ್ನು ಕರೆದು ನೀವು ಕಪಿಗಳು. ನಿಮ್ಮ ಕಪಿಚೇಷ್ಟೆಯಿಂದ ಪ್ರತಿಪಕ್ಷಗಳಿಗೆ ಅನುಕೂಲವಾಗುತ್ತದೆ ಎನ್ನುತ್ತಿದ್ದರು. ಎಲ್ಲರನ್ನೂ ಜತೆಗೆ ಕರೆದೊಯ್ಯುತ್ತಿದ್ದರು.

ಬೆಂಗಳೂರು: ಸಿಎಂ ಸಿದ್ದರಾಮಯ್ಯ  ವಿರುದ್ಧ ಪರೋಕ್ಷವಾಗಿ ಮತ್ತೆ ಅಸಮಾಧಾನ ಹೊರಹಾಕಿರುವ ಕಾಂಗ್ರೆಸ್‌ ನಾಯಕ ಬಿ.ಕೆ.ಹರಿಪ್ರಸಾದ್‌ ಹಿಂದುಳಿದ ವರ್ಗದ ಹಿತವೆಂದರೆ ಅಲ್ಲಿರುವ ಒಂದು ಪ್ರಬಲ ಜಾತಿಗೆ ಅಧಿಕಾರ ಕೊಡುವುದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಅರಸು ಜನ್ಮ ದಿನಾಚರಣೆ ಪ್ರಯುಕ್ತ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೀಗೆ ಹೇಳಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತೊಂದು ಸಭೆಗೆ ತೆರಳಬೇಕಿದ್ದರಿಂದ ವೇದಿಕೆಯಿಂದ ನಿರ್ಗಮಿಸಿದ್ದರು.

ಹಿಂದುಳಿದ ವರ್ಗಗಳಲ್ಲಿ ಹಲವು ಸಣ್ಣ ಸಣ್ಣ ಜಾತಿಗಳಿವೆ. ಇಂಥ ಸಮಾಜಗಳನ್ನು ಗುರುತಿಸಿ ಅಧಿಕಾರ ನೀಡಬೇಕು. ಅರಸು ಕಾಲದಲ್ಲಿ ನಾವು ವಿರೋಧಿ ಬಣದಲ್ಲಿದ್ದೆವು. ಹಾಗಿದ್ದರೂ ನಮ್ಮನ್ನು ಕರೆದು ನೀವು ಕಪಿಗಳು. ನಿಮ್ಮ ಕಪಿಚೇಷ್ಟೆಯಿಂದ ಪ್ರತಿಪಕ್ಷಗಳಿಗೆ ಅನುಕೂಲವಾಗುತ್ತದೆ ಎನ್ನುತ್ತಿದ್ದರು. ಎಲ್ಲರನ್ನೂ ಜತೆಗೆ ಕರೆದೊಯ್ಯುತ್ತಿದ್ದರು. ಈಗ ಒಟ್ಟಿಗೆ ಕರೆದೊಯ್ಯುವುದಿರಲಿ. ವಿರೋಧಿಸುವವರನ್ನು ಶತ್ರುಗಳಂತೆ ನೋಡುತ್ತಾರೆ ಎಂದು ಆಕ್ಷೇಪಿಸಿದರು.

ದೇವರಾಜ ಅರಸು ಅಧಿಕಾರದಲ್ಲಿದ್ದಾಗ ಕಾರ್ಯಕರ್ತರ ಮದುವೆಗೆ ಹೋಗಲಾಗದಿದ್ದರೂ ತಮ್ಮ ರಾಜಕೀಯ ಸಲಹೆಗಾರರ ಬಳಿ 10-15 ಸಾವಿರ ರೂ. ಕೊಟ್ಟು ಕಳಿಸುತ್ತಿದ್ದರು. ಕಾರ್ಯಕರ್ತರ ರಕ್ಷಣೆಯಾಗಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಸಂಕಷ್ಟ ಬರಲಿದೆ ಎಂದು ಎಚ್ಚರಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೂ ಚುರುಕು ಮುಟ್ಟಿಸಿದ ಹರಿಪ್ರಸಾದ್‌, ''ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸುವುದಾಗಿ ನಾವು ಮಾತು ಕೊಟ್ಟಿದ್ದೆವು. ಅಧಿಕಾರಕ್ಕೆ ಬಂದ ಮೇಲೆ ನಮ್ಮ ಅಧ್ಯಕ್ಷರು ಇದನ್ನು ಮರೆತಂತಿದೆ. ವಿವಿಗಳಲ್ಲಿ ಚುನಾವಣೆಯಾದರೆ ಲೀಡರ್‌ಗಳು ಜನ್ಮ ತಳೆಯುತ್ತಾರೆ. ಇಲ್ಲದಿದ್ದರೆ ಲೀಡರ್‌ಗಳ ಹಿಂದೆ ಓಡಾಡುವವರೇ ನಾಯಕರಾಗುತ್ತಾರೆ.

ಅಶೋಕ್‌ ಪಟ್ಟಣ್‌ ಗ್ರಾಜುಯೇಟ್‌ ಅಲ್ಲ. ಆದರೂ ಲೀಡರ್‌ ಅರಸು ಕಾಲದಲ್ಲಿ 5 ಸಾವಿರ ಜನಸಂಖ್ಯೆಯಿರುವ ಸಮಾಜದವರನ್ನೂ ಗುರುತಿಸಿ ಬೋರ್ಡ್‌ ಮೆಂಬರ್‌ ಮಾಡುತ್ತಿದ್ದರು ಎಂದು ನೆನಪಿಸಿದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT