ಸಿ ಎಂ ಇಬ್ರಾಹಿಂ 
ರಾಜಕೀಯ

ಬಾದಾಮಿಯಲ್ಲಿ ಓಡಾಡಿ ಸಿದ್ದರಾಮಯ್ಯನ ಗೆಲ್ಲಿಸಿದ್ದು ನಾನು, ಬಿಎಸ್​ವೈಗೆ ಮೋಸ ಮಾಡುತ್ತಾರೆಂದು 4 ವರ್ಷದ ಹಿಂದೆ ಹೇಳಿದ್ದೆ: ಸಿಎಂ ಇಬ್ರಾಹಿಂ

ಬಸವ ಕೃಪದವರಿಗೆ ಕೇಶವ ಕೃಪದಲ್ಲಿ ಜಾಗವಿಲ್ಲ ಯಡಿಯೂರಪ್ಪ, ನಿಮಗೆ ಮೋಸ ಮಾಡುತ್ತಾರೆ ಎಂದು ನಾನು 4 ವರ್ಷಗಳ ಹಿಂದೆಯೇ ಹೇಳಿದ್ದೆ. ಯಡಿಯೂರಪ್ಪನವರು ಇವತ್ತು ಅದನ್ನು ಅನುಭವಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.

ಬೀದರ್: ಬಸವ ಕೃಪದವರಿಗೆ ಕೇಶವ ಕೃಪದಲ್ಲಿ ಜಾಗವಿಲ್ಲ ಯಡಿಯೂರಪ್ಪ, ನಿಮಗೆ ಮೋಸ ಮಾಡುತ್ತಾರೆ ಎಂದು ನಾನು 4 ವರ್ಷಗಳ ಹಿಂದೆಯೇ ಹೇಳಿದ್ದೆ. ಯಡಿಯೂರಪ್ಪನವರು ಇವತ್ತು ಅದನ್ನು ಅನುಭವಿಸುತ್ತಿದ್ದಾರೆ. ಹೊರಗೆ ಬರುವ ಹಾಗಿಲ್ಲ, ಒಳಗೆ ಇರುವ ಹಾಗಿಲ್ಲ ಎಂಬಂತೆ ಆಗಿದೆ ಅವರ ಪರಿಸ್ಥಿತಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.

ಬೀದರ್ ನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ನಳಿನ್ ಕುಮಾರ್ ಕಟೀಲ್ ಅವರ ಟಿಪ್ಪು ವರ್ಸಸ್ ಸಾವರ್ಕರ್ ಹೇಳಿಕೆಗೆ ಟೀಕೆ ಮಾಡಿದ್ದಾರೆ. ಟಿಪ್ಪು ಹುಟ್ಟಿದ್ದು ಯಾವಾಗ, ಸಾವರ್ಕರ್ ಹುಟ್ಟಿದ್ದು ಯಾವಾಗ, ಕಟೀಲು ಅವರಿಗೆ ಸಿಡಿ ವರ್ಸಸ್ ಚುನಾವಣೆ ಮಾಡಲು ಹೇಳಿ. ಸ್ಯಾಂಟ್ರೊ ರವಿ ಯಾರು ಕಟೀಲು ಅವರ ನೆಂಟರಾ, 12 ಮಂದಿನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದರಲ್ಲ, ಅದರ ಸಿಡಿ ಹೊರಗೆ ಬರಲಿ, ಅದರ ಮೇಲೆ ಇವತ್ತಿನ ಚುನಾವಣೆ ನಡೆಯುತ್ತದೆ, ಇವರು ಹೆಣ್ಣು ಮಕ್ಕಳಿಗೆ ಗೌರವ ಕೊಡುತ್ತಾರೆಯೇ, ಬಿಜೆಪಿ ನಾಯಕರ ಮನೆಯಲ್ಲಿ ಹೆಣ್ಣು ಮಕ್ಕಳಿಲ್ಲವೇ ಎಂದು ಪ್ರಶ್ನಿಸಿದರು. 

ಸಿದ್ದರಾಮಯ್ಯನವರನ್ನು ಬಾದಾಮಿಯಲ್ಲಿ ಗೆಲ್ಲಿಸಿದ್ದು ನಾನು: ಸಿದ್ದರಾಮಯ್ಯನವರನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಗೆ ಕರೆತಂದು ನಿಲ್ಲಿಸಿ ಗೆಲ್ಲಿಸಿದವನು ನಾನು. ಸಿದ್ದರಾಮಯ್ಯ ವಲಸಿಗನಲ್ಲವೇ, ಜಮೀರ್ ಅಹ್ಮದ್ ಚಾಮರಾಜಪೇಟೆಯಲ್ಲಿ ವಲಸಿಗ ಅಲ್ಲವಾ, ಸಿದ್ದರಾಮಯ್ಯನವರನ್ನು ಚೀಫ್ ಮಿನಿಸ್ಟರ್ ಮಾಡಿದವನು ನಾನು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್ ಉಚಿತ ಕೊಡುತ್ತೇವೆ ಎನ್ನುತ್ತಾರೆ ಸಾಹುಕಾರರ ಮನೆಯಲ್ಲಿ ಮಲಗುವ ನಾಯಿಗೆ ಇವರು ಕೊಡುವ ವಿದ್ಯುತ್ ಸಾಕಾಗಲ್ಲ ಎಂದು ಟೀಕಿಸಿದರು.

ಸಿದ್ದರಾಮಯ್ಯನವರು ಹುಮ್ನಾಬಾದ್ ನಲ್ಲಿ ಬಂದು ನನ್ನ ಮಗನ ವಿರುದ್ಧ ಮಾತನಾಡಿದ್ದು ನನಗೆ ನೋವಾಯಿತು. ಇವರಿಗೆ ಎರಡು ಬಾರಿ ರಾಜಕೀಯ ಜೀವನ ಕೊಟ್ಟವನು ನಾನು, ಬೇಕೆಂದಾಗ ಮುಖ್ಯಮಂತ್ರಿ ಮಾಡಿದವನು ನಾನು, ಹೀಗಿರುವಾಗ ಇವತ್ತು ನಮ್ಮ ವಿರುದ್ಧ ರಾಜಕೀಯ ಮಾಡುತ್ತಾರೆ ಎಂದು ಆರೋಪಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT