ರಾಜಕೀಯ

ಬಿಎಸ್ ವೈಗೆ ಅಧಿಕಾರ ಹಸ್ತಾಂತರಿಸದಿರಲು ದೆಹಲಿಯ ಅಗ್ರಿಮೆಂಟ್‌’ ಕಾರಣ, ಆದರೆ ಬಲಿಪಶು ಆದದ್ದು ನಾನು: ಎಚ್ ಡಿ ಕುಮಾರಸ್ವಾಮಿ

Shilpa D

ಬೆಂಗಳೂರು: 20-20 ಸರ್ಕಾರದಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಿದಿರಲು ಏನು ಕಾರಣ ಎಂಬ ವಿಚಾರವನ್ನು ವಿಧಾನಸಭೆಯಲ್ಲಿ ಮಾಜಿ ಸಿಎಂ‌ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಜೆಡಿಎಸ್‌ ಮತ್ತು ಬಿಜೆಪಿ ನಡುವಿನ 20-20 ಸರ್ಕಾರದಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದಿರಲು ‘ದೆಹಲಿಯಿಂದ ಬಂದ ಅಗ್ರಿಮೆಂಟ್‌’ ಕಾರಣ ಎಂಬ ವಿಚಾರವನ್ನು ವಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಹಿರಂಗಪಡಿಸಿದ ಘಟನೆ ಗುರುವಾರ ಸದನದಲ್ಲಿ ನಡೆಯಿತು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡುವಾಗ, ಬಿಜೆಪಿಯ ಕೆ.ಎಸ್‌.ಈಶ್ವರಪ್ಪ ಅವರು ನೀವು ಯಡಿಯೂರಪ್ಪ ಅವರಿಗೆ ಜಂಟಲ್‌ಮ್ಯಾನ್‌ ಅಗ್ರಿಮೆಂಟ್‌ ಪ್ರಕಾರ ಹಿಂದೆ 20 ತಿಂಗಳ ಅಧಿಕಾರ ನೀಡಲಿಲ್ಲ ಎಂಬ ನೋವಿದೆ ಎಂದು ಹೇಳಿದರು.

ಇದಕ್ಕೆ ಈ ಸ್ಪಷ್ಟನೆ ನೀಡಿದ ಅವರು, ನಮ್ಮ ನಡುವಿನ ಸಹಿ ಹಾಕದ ಅಗ್ರಿಮೆಂಟ್‌ ಪ್ರಕಾರ ನಡೆದಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ, ಸಹಿ ಹಾಕಬೇಕೆಂದು ದೆಹಲಿಯಿಂದ ಬಂದ ಅಗ್ರಿಮೆಂಟ್‌ನಿಂದ ಸಮಸ್ಯೆ ಆಯಿತು. ಅಷ್ಟೊತ್ತಿಗೆ ದೇವೇಗೌಡರು ದೆಹಲಿಗೆ ವಿಮಾನ ಹತ್ತಿದ್ದರು.

ಅಂದು ಕೇಂದ್ರ ಸಚಿವರಾಗಿದ್ದ ಜಸ್ವಂತ್‌ ಸಿಂಗ್‌ ದೇವೇಗೌಡರಿಗೆ ಏನು ಹೇಳಿದರೋ ಇಂದಿಗೂ ಗೊತ್ತಿಲ್ಲ. ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೆ. ಯಾರಿಂದ ಅನ್ಯಾಯ ಆಯಿತು ಎಂದು ಯಡಿಯೂರಪ್ಪ ಹೇಳಿದ್ದಾರೆ. ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಅಗ್ರಿಮೆಂಟ್‌ ಒಂದು ದೆಹಲಿಯಿಂದ ಬರದೆ ಹೋಗಿದ್ದರೆ ಏನೂ ಆಗುತ್ತಿರಲಿಲ್ಲ. ಆ ಅಗ್ರಿಮೆಂಟ್‌ಗೆ ಸಹಿ ಹಾಕಲು ಯಡಿಯೂರಪ್ಪ ಒಪ್ಪಿರಲಿಲ್ಲ. ಆ ಕಾರಣಕ್ಕೆ ನಾನು ಬೆಂಬಲ ಕೊಡಲಿಲ್ಲ. ಆದರೆ, ಈ ಪ್ರಸಂಗದಲ್ಲಿ ನಾನು ಬಲಿಪಶುವಾದೆ ಎಂದರು.

ಈ ಸಮಯದಲ್ಲಿ ಸದನದಲ್ಲಿ ಉಪಸ್ಥಿತರಿದ್ದ ಬಿಎಸ್‌ ಯಡಿಯೂರಪ್ಪ ಅವರ ಮಧ್ಯಸ್ಥಿಕೆಗೆ ಕೋರಿದರು, ಆದರೆ ಉತ್ತರ ನೀಡಲಿಲ್ಲ. "ಈಗ, ಬಿಎಸ್‌ವೈ ಅವರು ನಿರ್ಮಿಸಿದ ಬಿಜೆಪಿ ಅಲ್ಲ, ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ ಎಂದರು.

ಬಿಜೆಪಿಯಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ನಾನು ಹೇಳಲಾರೆ, ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಹೆಚ್ಚು ಆಂತರಿಕ ಕಚ್ಚಾಟವಿದೆ. ಮೇಲ್ನೋಟಕ್ಕೆ, ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲಲು ನಮ್ಮನ್ನು ಬಲಪಡಿಸಿಕೊಳ್ಳಲು ಚುನಾವಣೆಗೆ ಹೋಗುತ್ತೇವೆ. 90ರಲ್ಲಾದರೂ ನಾವು ಎಷ್ಟು ಗೆಲ್ಲುತ್ತೇವೆಯೋ ಯಾರಿಗೆ ಗೊತ್ತುಎಂದು ಹೇಳಿದರು.

SCROLL FOR NEXT