ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಸಮಯ ಬಂದಾಯ್ತು ಪ್ಯಾಕ್ ಮಾಡ್ಕೊಳ್ಳಿ, ವಿಧಾನಸೌಧವನ್ನು ಡೆಟಾಲ್ ಹಾಕಿ ಕ್ಲೀನ್ ಮಾಡ್ತೇವೆ: ಬಿಜೆಪಿಗೆ ಡಿ.ಕೆ. ಶಿವಕುಮಾರ್

ಸಮಯ ಬಂದಾಯ್ತು ನಿಮ್ಮ ಟೆಂಟ್ ಗಿಂಟ್ ಪ್ಯಾಕ್ ಮಾಡಿಕೊಳ್ಳಿ, ವಿಧಾನಸೌಧವನ್ನು ಡೆಟಾಲ್ ನಿಂದ ಸ್ವಚ್ಛಗೊಳಿಸುತ್ತೇವೆಂದು ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಡಿಕೆ.ಶಿವಕುಮಾರ್.
Manjula VN
Updated On : 25 Jan 2023, 3:40 pm

ಬೆಂಗಳೂರು; ಸಮಯ ಬಂದಾಯ್ತು ನಿಮ್ಮ ಟೆಂಟ್ ಗಿಂಟ್ ಪ್ಯಾಕ್ ಮಾಡಿಕೊಳ್ಳಿ, ವಿಧಾನಸೌಧವನ್ನು ಡೆಟಾಲ್ ನಿಂದ ಸ್ವಚ್ಛಗೊಳಿಸುತ್ತೇವೆಂದು ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಿಮ್ಮ ಸರ್ಕಾರಕ್ಕೆ ಕೇವಲ 40-45 ದಿನಗಳು ಉಳಿದಿವೆ. ನಿಮ್ಮ ಟೆಂಟ್ ಗಿಂಡ್ ಪ್ಯಾಕ್ ಮಾಡಿಕೊಳ್ಳಿ. ಡೆಟಾಲ್‌ನಿಂದ ವಿಧಾನಸೌಧವನ್ನು  ಸ್ವಚ್ಛಗೊಳಿಸುತ್ತೇವೆ. ನನ್ನ ಬಳಿ ಶುದ್ಧೀಕರಣಕ್ಕೆ ಗೋಮೂತ್ರವೂ ಇದೆ ಎಂದು ಹೇಳಿದ್ದಾರೆ.

ಈ ದುಷ್ಟ ಸರ್ಕಾರ ತೊಲಗಬೇಕಿದೆ. ಜನ ಬಯಸಿದ್ದು ಅದನ್ನೇ. ಬೊಮ್ಮಾಯಿಯವರೇ ನಿಮ್ಮ ಮಂತ್ರಿಗಳಿಗೆ ಪ್ಯಾಕ್ ಅಪ್ ಮಾಡಲು ಹೇಳಿ ಎಂದು ತಿಳಿಸಿದ್ದಾರೆ.

Advertisement

Advertisement

ಇದನ್ನೂ ಓದಿ: ಸಿದ್ದು-ಡಿಕೆಶಿ ಬಣ ಬಡಿದಾಟ: 'ಪ್ರಜಾಧ್ವನಿ' ಯಾತ್ರೆ ನಂತರ ಕಾಂಗ್ರೆಸ್‌ಗೆ ಸಂಕಷ್ಟ; ಟಿಕೆಟ್ ಸಿಗದಿದ್ದರೇ ಆಕಾಂಕ್ಷಿಗಳ ಬಂಡಾಯ ಖಚಿತ!

ಸುಧಾಕರ ಮೇಲೆ ಭ್ರಷ್ಟಾಚಾರದ ಕೂಪ ಕೂತಿದೆ, ಮುತ್ತು ರತ್ನಗಳೆಲ್ಲೆ ಇದಾರಲ್ಲ ಬಿಜೆಪಿ ಕೈಲಿ, ಆಪರೇಷನ್ ಲೋಟಸ್ ಆದವರ ಕೈಯ್ಯಲ್ಲೇ ಮಾತಾಡಿಸ್ತೀರಲ್ಲ. ನಮ್ಮ ಬಸ್ ಫುಲ್ ಆಗಿದೆ ಯಾರನ್ನೂ ನಾವು ಕರೆದುಕೊಳ್ಳಲ್ಲ. ಬಿ ರಿಪೋರ್ಟ್ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರಿಗೆ ತಲೆ ಕೆಟ್ಟು ಹೋಗಿಬಿಟ್ಟಿದೆ, ಅವರ ಸರ್ವೆಯಲ್ಲಿ 60-70 ಸೀಟು ದಾಟ್ತಾ ಇಲ್ಲ. ಅದಕ್ಕೆ ಸುಧಾಕರ್‌'ನನ್ನು ಬಿಟ್ಟು 35 ಸಾವಿರ ಕೋಟಿ ಹೊಡೆದಿದ್ದಾರೆ ಎಂದು ಆರೋಪ ಮಾಡಿಸ್ತಿದ್ದಾರೆ. ಬಿಜೆಪಿಯಲ್ಲಿ 37 ಗುಂಪಿದೆ, ಬಸವರಾಜ ಬೊಮ್ಮಾಯಿಯವರೇ ಹೇಳಿ ಬಿಡಿ. ನಿಮ್ಮ ಮಂತ್ರಿಗಳಿಗೆ ಪ್ಯಾಕಪ್ ಮಾಡೋಕೆ. ನೀವು ಪ್ಯಾಕಪ್ ಮಾಡಿಕೊಂಡು ಹೊರಡಿ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments