ರಾಜಕೀಯ

ಪಕ್ಷದಲ್ಲಿ ಯಡಿಯೂರಪ್ಪನವರನ್ನು ಟೀಕಿಸುವವರ ವಿರುದ್ಧ ಏಕೆ ಶಿಸ್ತು ಕ್ರಮವಿಲ್ಲ: ರೇಣುಕಾಚಾರ್ಯ

Sumana Upadhyaya

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(B S Yedyurappa) ಅವರ ವಿರುದ್ಧ ಯಾರಾದರೂ ಕಟುವಾದ ಹೇಳಿಕೆ ನೀಡಿದರೆ ಅವರಿಗೆ ಯಾವುದೇ ಶಿಸ್ತು ಕ್ರಮದ ನೋಟಿಸ್ ನೀಡದೆ ಅವರಿಗೆ ರಾಜಮನೆತನದ ಗೌರವ ನೀಡುವುದೇಕೆ ಎಂದು ಬಿಜೆಪಿ ನಾಯಕ, ಮಾಜಿ ಶಾಸಕ ರೇಣುಕಾಚಾರ್ಯ(M P Renukacharya) ಪ್ರಶ್ನಿಸಿದ್ದಾರೆ. 

ಯಡಿಯೂರಪ್ಪ ಅವರನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರನ್ನು ಉಲ್ಲೇಖಿಸಿ ಮಾತನಾಡಿದ ಅವರು, ಶಿಸ್ತಿನ ಹೆಸರಿನಲ್ಲಿ ಈ ದ್ವಂದ್ವ ನೀತಿ ಮತ್ತು ಅನ್ಯಾಯ ಮಾಡುವುದೇಕೆ ಎಂದು ಪ್ರಶ್ನಿಸಿದರು. ನಾನು ಹೇಳಿಕೆ ನೀಡಿದಾಗ ಮಾತ್ರ ಈ ಜನರಿಗೆ ಶಿಸ್ತು ಸಮಿತಿ ನೆನಪಾಗುತ್ತದೆ ಎಂದು ಆರೋಪಿಸಿದರು. 

ಬಿಜೆಪಿಯಲ್ಲಿ ಹಲವು ನಾಯಕರು ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಮೈಸೂರು ಸಂಸದ ಪ್ರತಾಪ್ ಸಿಂಹ(MP Pratap Simha) ಅವರು ಜೆಡಿಎಸ್ ಜೊತೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬರುತ್ತಿದ್ದು, ಅದರ ಬಗ್ಗೆ ಮಾತನಾಡದೇ ಇರುವುದು ಏಕೆ ಎಂದು ಕೇಳಿದರು.

ಪಕ್ಷದ ಕೆಲವು ನಾಯಕರು ಮತ್ತು ಪಕ್ಷದ ಬಗ್ಗೆ ಇರುವ ಅಸಮಾಧಾನ ಬಗ್ಗೆ ಮಾತನಾಡಲು ಯಡಿಯೂರಪ್ಪ ಅವರು ತಮ್ಮನ್ನು ಬಳಸಿಕೊಳ್ಳುತ್ತಿದ್ದಾರೆಯೇ ಎಂದು ಕೇಳಿದ್ದಕ್ಕೆ, ಯಡಿಯೂರಪ್ಪನವರು ಯಾವತ್ತೂ ಕೀಳರಿಮೆ ಅಥವಾ ಕ್ಷುಲ್ಲಕ ರಾಜಕಾರಣ ಮಾಡಿಲ್ಲ. ಪಕ್ಷವು 11 ಮಂದಿಗೆ ನೋಟಿಸ್ ಜಾರಿ ಮಾಡಿದೆ, ಆದರೆ ಯಾರೊಬ್ಬರೂ ಅದನ್ನು ಸ್ವೀಕರಿಸಿಲ್ಲ, ಶಿಸ್ತು ಸಮಿತಿ ಬಗ್ಗೆ ನಾವು ಹೇಳಿಕೆ ನೀಡುವವರೆಗೆ ಯಾರಿಗೂ ತಿಳಿದಿಲ್ಲ ಮತ್ತು ಕೇಳಿಲ್ಲ ಎಂದು ಹೇಳಿದರು. 

SCROLL FOR NEXT