ಪ್ರಹ್ಲಾದ್ ಜೋಶಿ 
ರಾಜಕೀಯ

ವಿಧಾನಸಭೆ ಚುನಾವಣೆ: ಬಿಜೆಪಿ ಸೋಲಿಗೆ ಪ್ರಹ್ಲಾದ್ ಜೋಶಿ 'ಹರಕೆಯ ಕುರಿ'; 'ಸಂತೋಷ್' ರಕ್ಷಣೆಗಾಗಿ ಜೋಶಿ ತಲೆ ದಂಡ?

ಸಂತೋಷ್ ಅವರನ್ನು ಉಳಿಸುವ ನಿಟ್ಟಿನಲ್ಲಿ ಪಕ್ಷವು ಜೋಶಿ ಅವರನ್ನು ಬಲಿಪಶು ಮಾಡುವ ಸಾಧ್ಯತೆಯಿದೆಎಂದು ಮೂಲಗಳು ತಿಳಿಸಿವೆ. ಜೋಶಿ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದರೆ ಬಿಜೆಪಿ ಬೆಂಬಲಿಸುತ್ತಿದ್ದ ಲಿಂಗಾಯತ ಸಮುದಾಯ ಆಕ್ರೋಶ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆಯಿದೆ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಹೊಣೆ ಎಂದು ಕಿಡಿಕಾರಲಾಯಿತು, ಆದರೆ ಅಂತಿಮವಾಗಿ ಹರಕೆಯ ಕುರಿ ಆಗುವವರು ಯಾರು ಎಂಬ ಪ್ರಶ್ನೆ ಎದ್ದಿದೆ.

ಒಂದು ವೇಳೆ ಶಿಕ್ಷೆ ವಿಧಿಸಿದರೆ ಸಂತೋಷ್ ಆರಾಮವಾಗಿ ಪಾರಾಗುತ್ತಾರೆ, ಆದರೆ ಜೋಶಿ ತಲೆದಂಡಕ್ಕೆ ಪಕ್ಷ ಹಿಂಜರಿಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಜೋಶಿ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದರೆ ಬಿಜೆಪಿ ಬೆಂಬಲಿಸುತ್ತಿದ್ದ ಲಿಂಗಾಯತ ಸಮುದಾಯ ಆಕ್ರೋಶ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆಯಿದೆ, ಏಕೆಂದರೆ ಜೋಶಿ ಮತ್ತು ಸಂತೋಷ್ ಇಬ್ಬರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಲಿಂಗಾಯತ ಬೆಂಬಲಕ್ಕಿಂತ ಪಕ್ಷವು ಹಿಂದುತ್ವದ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಸಂತೋಷ್ ಹೇಳುವ ವೀಡಿಯೊ ಮೇ 5 ರಂದು ವೈರಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ಬಿಎಸ್ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನಿರಾಕರಿಸಿದ ನಂತರ  ಲಿಂಗಾಯತರು ಬಿಜೆಪಿ ವಿರುದ್ಧ ಕುದಿಯತೊಡಗಿದ್ದರು ಎಂದು ಮೂರು ದಶಕಗಳಿಗೂ ಹೆಚ್ಚು ಕಾಲ ಪಕ್ಷದಲ್ಲಿ ಇರುವ ನಾಯಕರೊಬ್ಬರು ಹೇಳಿದ್ದಾರೆ.

ಸಂತೋಷ್ ಅವರನ್ನು ಉಳಿಸುವ ನಿಟ್ಟಿನಲ್ಲಿ ಪಕ್ಷವು ಜೋಶಿ ಅವರನ್ನು ಬಲಿಪಶು ಮಾಡುವ ಸಾಧ್ಯತೆಯಿದೆಎಂದು ಮೂಲಗಳು ತಿಳಿಸಿವೆ. ಪಕ್ಷದ 75ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟರೆ ಉತ್ತಮ ಫಲಿತಾಂಶ ಸಿಗುವುದಿಲ್ಲ, ನಾಯಕತ್ವದ ಇತರ ಲೋಪದೋಷಗಳ ಬಗ್ಗೆ ಅವರು ಪಕ್ಷದ ನಾಯಕರಿಗೆ  ಜೋಶಿ ಎಚ್ಚರಿಕೆ ನೀಡಿಲ್ಲ ಎಂಬ ಆರೋಪವಿದೆ ಎಂದು ಮೂಲಗಳು ತಿಳಿಸಿವೆ.

ಶಾಸಕರ ಹೆಸರನ್ನು ಕೈಬಿಡುವಾಗ, ಪಕ್ಷವು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸ್ಪರ್ಧಿಸಿದವರನ್ನು  ಹೊರಗಿಡಲು ಮಾನದಂಡ  ಬಳಸಿತ್ತು. ನಾಲ್ಕು ಅವಧಿಗೆ ಸಂಸದರಾಗಿದ್ದ ಜೋಶಿ ಅವರನ್ನು ಕೈಬಿಡಲು ಇದೇ ಮಾನದಂಡ ಬಳಕೆಯಾಗಲಿದೆ.

ಪ್ರಲ್ಹಾದ್ ಜೋಶಿ ಅವರನ್ನು ಕೈಬಿಡುವ ಬಗ್ಗೆ ಯಾವುದೇ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ನಾವು ಸಭೆಗಳಲ್ಲಿ ಸೋಲಿನ ಬಗ್ಗೆ  ಆತ್ಮಾವಲೋಕನ ಮಾಡಿದ್ದೇವೆ ಮತ್ತು ಇದು ಸಾಮೂಹಿಕ ವೈಫಲ್ಯ ಎಂದು ಕೇಂದ್ರ ನಾಯಕತ್ವಕ್ಕೆ ವರದಿಯನ್ನು ಕಳುಹಿಸಿದ್ದೇವೆ. ಟಿಕೆಟ್ ಹಂಚಿಕೆ ವಿಚಾರ, ಶೆಟ್ಟರ್ ಮತ್ತು ಸವದಿ ಅವರಿಗೆ ಟಿಕೆಟ್ ನಿರಾಕರಿಸಿರುವುದು, ಮೀಸಲಾತಿ ವೈಫಲ್ಯ ಮತ್ತಿತರ ವಿಷಯಗಳ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ಮಾಜಿ ಸಿಎಂಗಳಾದ ಯಡಿಯೂರಪ್ಪ ಮತ್ತು ಬೊಮ್ಮಾಯಿ ಮೇಲೆ ಹೀಗಾಗಲೇ ಹೊಂದಾಣಿಕೆ ರಾಜಕೀಯದ ಆರೋಪ ಕೇಳಿ ಬಂದಿವೆ. ಈ ಸಂಬಂಧ ಸಂತೋಷ್ ಬೆಂಬಲಿಗರು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ, ವರುಣಾದಿಂದ ಸ್ಪರ್ಧಿಸಲು ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರ ಹೆಸರನ್ನು ತಿರಸ್ಕರಿಸಿದ್ದಕ್ಕೆ ಯಡಿಯೂರಪ್ಪ ಅವರನ್ನು ದೂಷಿಸಲಾಗುತ್ತಿದೆ.

ಸಿಎಂ ಆಗಿದ್ದ ವೇಳೆ ಬೊಮ್ಮಾಯಿ ಅವರು ಅರ್ಕಾವತಿ 'ರೀ-ಡೂ' ವಿಚಾರದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧದ ಅಕ್ರಮಗಳ ಆರೋಪವನ್ನು ತಾರ್ಕಿಕ ಅಂತ್ಯಕ್ಕೆ ಎಂದಿಗೂ ತೆಗೆದುಕೊಳ್ಳಲಿಲ್ಲ. ಸೌರ ವಿದ್ಯುತ್ ಹಂಚಿಕೆ ಸಮಸ್ಯೆ ಅಥವಾ ಶಿಕ್ಷಕರು ಮತ್ತು ಪೊಲೀಸ್ ನೇಮಕಾತಿಗಳು ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT