ನಳಿನ್ ಕುಮಾರ್ ಕಟೀಲ್ 
ರಾಜಕೀಯ

ರಾಹುಲ್‌ ಗಾಂಧಿಗೆ ಮಕ್ಕಳಾಗಲ್ಲ ಹೇಳಿಕೆ: ನಳಿನ್ ಕುಮಾರ್ ಕಟೀಲ್ ವಿರುದ್ಧ ಹರಿಹಾಯ್ದ ಕಾಂಗ್ರೆಸ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅಸಭ್ಯ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಕಾಂಗ್ರೆಸ್ ತೀವ್ರವಾಗಿ ವಾಗ್ದಾಳಿ ನಡೆಸಿದೆ.

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅಸಭ್ಯ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಕಾಂಗ್ರೆಸ್ ತೀವ್ರವಾಗಿ ವಾಗ್ದಾಳಿ ನಡೆಸಿದೆ.

ರಾಮನಗರದಲ್ಲಿ ಭಾನುವಾರ ನಡೆದ ವಿಜಯ ಸಂಕಲ್ಪ ಯಾತ್ರೆ ವೇಳೆ ಮಾತನಾಡಿದ್ದ ಕಟೀಲ್ ಅವರು, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಕೋವಿಡ್ 19 ಲಸಿಕೆ ತೆಗೆದುಕೊಳ್ಳಬೇಡಿ, ಹಾಕಿಸಿಕೊಂಡರೆ ಮಕ್ಕಳಾಗುವುದಿಲ್ಲ ಎಂದು ಜನರಿಗೆ ಹೇಳಿದರು. ಆದರೆ, ರಾತ್ರೋರಾತ್ರಿ ಕದ್ದು ರಾಹುಲ್ ಗಾಂಧಿ, ಸಿದ್ದರಾಮಯ್ಯ ಲಸಿಕೆ ತೆಗೆದುಕೊಂಡಿದ್ದರು. ಅದಕ್ಕೆ ಮೊನ್ನೆ ನಮ್ಮ ಎಂಎಲ್‌ಸಿ ಮಂಜುನಾಥ್ ಹೇಳಿದ್ದರು. ಅದಕ್ಕೆ ರಾಹುಲ್ ಗಾಂಧಿ ಮದುವೆಯಾಗುತ್ತಿಲ್ಲ. ಏಕೆಂದರೆ ಹೇಗೂ ಅವರಿಗೆ ಮಕ್ಕಳಾಗುವುದಿಲ್ಲ ಅಂತ” ಎಂದು ಹೇಳಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಶೀಘ್ರಗತಿಯಲ್ಲಿ ಗುಣಮುಖವಾಗಲಿ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಅವರು ಮಾತನಾಡಿ, ನಿಮ್ಮ ನೈತಿಕತೆ ಶೂನ್ಯ. ನಳಿನ್ ಕುಮಾರ್ ಕಟೀಲ್ ನಾಲಿಗೆ ಹರಿಬಿಟ್ಟಿದ್ದಾರೆ. ಈ ಬಾರಿ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿದೇಶದಿಂದ ನವ ಮಂಗಳೂರು ಬಂದರಿಗೆ ಆಗಮಿಸಿದ ಎರಡು ತೈಲ ಹಡಗುಗಳು!

West Asia war: ತಾರಕಕ್ಕೇರಿದ ಅಮೆರಿಕಾ-ಇರಾನ್ ಸಂಘರ್ಷ; ಟ್ರಂಪ್ ಬೆದರಿಕೆಗೆ ಮಣಿಯದ ಟೆಹ್ರಾನ್, ವಿದ್ಯುತ್ ಸ್ಥಾವರ ನಾಶಪಡಿಸಿದರೆ ಭೀಕರ ಪ್ರತಿದಾಳಿ ಎಚ್ಚರಿಕೆ

ಐಪಿಎಲ್ 2026: 5 ಎಸೆತದಲ್ಲಿ 5 ಸಿಕ್ಸರ್.. ಇಂಟರ್ನೆಟ್ ಗೆ ಬೆಂಕಿ ಹಚ್ಚಿದ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟರ್! Video

West Asia war: ಜಾಗತಿಕ ತೈಲ ಮಾರುಕಟ್ಟೆ ಅಸ್ಥಿರ; 48 ಗಂಟೆಗಳಲ್ಲಿ 'ಹಾರ್ಮುಜ್ ಜಲಸಂಧಿ' ತೆರೆಯದಿದ್ದರೆ ವಿದ್ಯುತ್ ಸ್ಥಾವರಗಳ ನಾಶ; ಇರಾನ್'ಗೆ ಟ್ರಂಪ್ ಕಠಿಣ ಎಚ್ಚರಿಕೆ

'ಇನ್ ಯಾವ್ friendship ಇಲ್ಲ': ಇರಾನ್ ಮಿಲಿಟರಿ ಅಧಿಕಾರಿಗಳು, ಸಿಬ್ಬಂದಿಗಳ ಹೊರದಬ್ಬಿದ Saudi Arabia

SCROLL FOR NEXT