ಹೆಚ್ ಪಿ ಸ್ವರೂಪ್- ರೇವಣ್ಣ 
ರಾಜಕೀಯ

ಹಾಸನ: ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್ ­-ರೇವಣ್ಣ ಮಾತುಕತೆ; ಕುತೂಹಲ ಮೂಡಿಸಿದ ಭೇಟಿ

ಅಚ್ಚರಿಯ ಬೆಳವಣಿಗೆಯಲ್ಲಿ ಹಾಸನ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಹೆಚ್ ಪಿ ಸ್ವರೂಪ್ ಮಾಜಿ ಸಚಿವ, ಜೆಡಿಎಸ್ ನಾಯಕ ರೇವಣ್ಣ ಅವರನ್ನು ಭೇಟಿ ಮಾಡಿದ್ದಾರೆ. 

ಹಾಸನ: ಅಚ್ಚರಿಯ ಬೆಳವಣಿಗೆಯಲ್ಲಿ ಹಾಸನ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಹೆಚ್ ಪಿ ಸ್ವರೂಪ್ ಮಾಜಿ ಸಚಿವ, ಜೆಡಿಎಸ್ ನಾಯಕ ರೇವಣ್ಣ ಅವರನ್ನು ಭೇಟಿ ಮಾಡಿದ್ದಾರೆ. 

ಹಾಸನದ ಲೋಕಸಭಾ ಸದಸ್ಯರ ಅಧಿಕೃತ ಕ್ವಾರ್ಟರ್ಸ್ ನಲ್ಲಿ ಸ್ವರೂಪ್ ರೇವಣ್ಣ ಅವರನ್ನು ಭೇಟಿ ಮಾಡಿದ್ದಾರೆ.

ಒಂದೂ ವರೆ ತಿಂಗಳ ಬಳಿಕ ಸ್ವರೂಪ್ ಜೆಡಿಎಸ್ ನಾಯಕರನ್ನು ಭೇಟಿ ಮಾಡಿದ್ದು, ಉಭಯ ನಾಯಕರ ನಡುವೆ ಟಿಕೆಟ್ ವಿಷಯವಾಗಿ ಜಟಾಪಟಿ ನಡೆದಿತ್ತು.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಎರಡು ಬಾರಿ ಸ್ವರೂಪ್ ಗೆ ಬಹಿರಂಗವಾಗಿ ಭರವಸೆ ನೀಡಿದ್ದ ನಂತರ ಭವಾನಿ ರೇವಣ್ಣ ಹಾಗೂ ಸ್ವರೂಪ್ ಪ್ರತ್ಯೇಕವಾಗಿ ಪ್ರಚಾರ ನಡೆಸಿದ್ದರು. ಆಗಿನಿಂದ ಹೆಚ್ ಡಿ ರೇವಣ್ಣ ಹಾಗೂ ಹೆಚ್ ಪಿ ಸ್ವರೂಪ್ ಅಂತರ ಕಾಯ್ದುಕೊಂಡಿದ್ದರು. 

ಇನ್ನು ಸ್ವರೂಪ್ ಹೆಚ್ ಡಿ ರೇವಣ್ಣ ಅವರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂಬ ಊಹಾಪೋಹಗಳೂ ಎದುರಾಗಿತ್ತು. ಈಗ ಸುಮಾರು 20 ನಿಮಿಷಗಳಿಗೂ ಹೆಚ್ಚಿನ ಕಾಲ ಸ್ವರೂಪ್ ಹಾಗೂ ರೇವಣ್ಣ ಗೌಪ್ಯವಾಗಿ ಚರ್ಚೆ ನಡೆಸಿದ್ದಾರೆ. ಚರ್ಚೆ ವೇಳೆ ಪಂಚರತ್ನ ಯಾತ್ರೆ ಬಗ್ಗೆ ಮಾತ್ರ ಮಾತನಾಡಿದ್ದೇವೆ ರಾಜಕೀಯ ಮಾತನಾಡಿಲ್ಲ ಎಂದು ಸ್ವರೂಪ್ ಹೇಳಿದ್ದಾರೆ.

ಟಿಕೆಟ್ ವಿಷಯವನ್ನು ನಾಯಕರು ಪಂಚರತ್ನ ಯಾತ್ರೆ ಬಳಿಕ ಚರ್ಚಿಸಲಿದ್ದಾರೆ. ರಾಜಕೀಯ ಭವಿಷ್ಯದ ದೃಷ್ಟಿಯಿಂದ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳದಂತೆ ಸ್ವರೂಪ್ ಗೆ ರೇವಣ್ಣ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ