ಅನಿಲ್ ಲಾಡ್ 
ರಾಜಕೀಯ

ಜನಾರ್ಧನ ರೆಡ್ಡಿ ಅಕ್ರಮ ಆಸ್ತಿ ಹೊಂದಿದ್ದು, ಶೀಘ್ರದಲ್ಲೇ ಅಮಿತ್ ಶಾಗೆ ಪತ್ರ ಬರೆಯುವೆ: ಅನಿಲ್ ಲಾಡ್

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಮೂಲಕ ಗಳಿಸಿರುವ ಆಸ್ತಿಗಳ ವಿವರವನ್ನು ಶೀಘ್ರದಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲಿಸುತ್ತೇನೆಂದು ಎಂದು ಬಳ್ಳಾರಿ ನಗರ ಮಾಜಿ ಶಾಸಕ ಅನಿಲ್ ಲಾಡ್ ಅವರು ಆರೋಪಿಸಿದ್ದಾರೆ.

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಮೂಲಕ ಗಳಿಸಿರುವ ಆಸ್ತಿಗಳ ವಿವರವನ್ನು ಶೀಘ್ರದಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲಿಸುತ್ತೇನೆಂದು ಎಂದು ಬಳ್ಳಾರಿ ನಗರ ಮಾಜಿ ಶಾಸಕ ಅನಿಲ್ ಲಾಡ್ ಅವರು ಆರೋಪಿಸಿದ್ದಾರೆ.

ನಗರದ ವೀರನಗೌಡ ಕಾಲೊನಿಯಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ನಾನು ವಾಸವಿದ್ದ ಮನೆಯನ್ನು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬಲವಂತವಾಗಿ ಕಬಳಿಸಿದ್ದಾರೆಂದು ಆರೋಪಿಸಿದರು

ಜನಾರ್ದನ ರೆಡ್ಡಿ ಮನೆ ಕಬಳಿಸಿರುವ ವಿಚಾರವಾಗಿ ಹಲವು ಸಲ ಧ್ವನಿ ಎತ್ತಬೇಕೆಂದರೂ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದ ಕಾರಣ ಹಿಂಜರಿಯಬೇಕಿತ್ತು. ಆದರೆ, ಈಗ ಜನಾರ್ದನ ರೆಡ್ಡಿ ಅವರು ಬಿಜೆಪಿ ಬಿಟ್ಟಿದ್ದು, ಹೀಗಾಗಿ ಮನೆ ಕಬಳಿಕೆ ವಿಷಯ ಬಹಿರಂಗಪಡಿಸಿದ್ದೇನೆ. ಅಲ್ಲದೆ, ನಗರದಲ್ಲಿ ರೆಡ್ಡಿ ಅವರಿಂದ ಅನ್ಯಾಯಕ್ಕೆ ಒಳಗಾದವರ ಸಂಪರ್ಕಿಸಿ, ದಾಖಲೆಗಳನ್ನು ಸಂಗ್ರಹಿಸಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆಯಲಾಗುವುದು. ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗುವುದು ಎಂದು ಹೇಳಿದರು.

'ನಾನು ಬಿಜೆಪಿಯಲ್ಲಿದ್ದ ವೇಳೆ ಜೆಡಿಯುನಲ್ಲಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿಗೆ ಸೇರುವಂತೆ ಮನವೊಲಿಸಿದ್ದೆ. ಇದಾದ ಬಳಿಕ ಅವರು ಬಿಜೆಪಿಗೆ ಬಂದರು, ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದೆ ಎಂದು ತಿಳಿಸಿದರು.

ಈ ಹಿಂದೆ ಕುಮಾರ ಸ್ವಾಮಿ ಅವರಿಗೆ 150ಕೋಟಿ ರೂ.ಕೊಟ್ಟಿರುವ ಬಗ್ಗೆ ಆರೋಪ ಮಾಡಲು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಆ ಸಂದರ್ಭದಲ್ಲಿ ಮೈನಿಂಗ್‌ ಓನರ್‌ ಅಸೋಸಿಯೇಷನ್‌ ಉಪಾಧ್ಯಕ್ಷನಾಗಿದ್ದ ವೇಳೆ ಕರೆದಿದ್ದರು. ಆದರೆ, ನಾನು ಹೋಗಲಿಲ್ಲ. ಇದರ ಪರಿಣಾಮ 2008ರಲ್ಲಿ ನಾನು ಖಾನಾಪುರದಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿರುವ ವೇಳೆ ಯಡಿಯೂರಪ್ಪ ಅವರು ಕರೆ ಮಾಡಿ ನಿನಗೆ ಬಿಜೆಪಿ ಟಿಕೆಟ್‌ ಕೊಡದಂತೆ ಜನಾರ್ದನ ರೆಡ್ಡಿ ಹೇಳುತ್ತಿದ್ದಾರೆ ಎಂದು ತಿಳಿಸಿದ್ದರು.

ಬಿಜೆಪಿ ಸರಕಾರ ಆಡಳಿತಕ್ಕೆ ಬರಲು ನಾನು ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದೆ. ಬೊಮ್ಮಾಯಿ ಅವರನ್ನು ಬಿಜೆಪಿಗೆ ಕರೆತರಲು ಮನವೊಲಿಸಿದ್ದೆ. ಆದರೂ ನನಗೆ ಟಿಕೆಟ್‌ ನೀಡದ ಹಿನ್ನೆಲೆ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದೆ. ಕಾಂಗ್ರೆಸ್‌ನಲ್ಲಿದ್ದ ವೇಳೆ ನನಗೆ ಕಾಂಗ್ರೆಸ್‌ ಸಚಿವರು ಮತ್ತು ನಮ್ಮ ಸಹೋದರ (ಸಂತೋಷ್‌ ಲಾಡ್‌) ಸಹ ಸಹಾಯ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

2013ರಲ್ಲಿಬಳ್ಳಾರಿ ನಗರ ಕ್ಷೇತ್ರದಲ್ಲಿನನ್ನನ್ನು ಮತದಾರರು ಗೆಲ್ಲಿಸಿದ್ದರು. 2018ರಲ್ಲಿ60 ಸಾವಿರ ಮತ ಪಡೆದು ಕೇವಲ 15 ಸಾವಿರ ಮತಗಳ ಅಂತರದಿಂದ ಮಾತ್ರ ಸೋತಿದ್ದೇನೆ. ಹೀಗಾಗಿ, ಈ ಬಾರಿ ಚುನಾವಣೆಯಲ್ಲಿಬಳ್ಳಾರಿ ನಗರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಟಿಕೆಟ್‌ ಸಿಗುವ ನಿರೀಕ್ಷೆಯಿದೆ. ಒಂದು ವೇಳೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರೆ ನಗರದಲ್ಲಿರುವ ಸರಕಾರಿ ಶಾಲೆಗಳನ್ನು ಹೈಟೆಕ್‌ ಮಾಡಲಾಗುವುದು. ಐಟಿಐ, ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿನೂತನ ತಂತ್ರಜ್ಞಾನ ಆಧರಿತ ಯಂತ್ರಗಳನ್ನು ಅಳವಡಿಸಲಾಗುವುದು. ಬಳ್ಳಾರಿ ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಟಿಕೆಟ್‌ ಸಿಗದಿದ್ದಲ್ಲಿಎಂಎಲ್ಸಿ ಆದರೂ ನೀಡುವಂತೆ ಮನವಿ ಮಾಡಲಾಗುವುದು ಎಂದರು.

ಬಳ್ಳಾರಿ ಜಿಲ್ಲೆಯ ಜಿಂದಾಲ್‌ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು ಎಷ್ಟು ಜನ ಕನ್ನಡಿಗರಿಗೆ ಆದ್ಯತೆ ನೀಡಿದೆ ಎನ್ನುವುದರ ಬಗ್ಗೆ ಜಿಂದಾಲ್‌ ಕಂಪನಿಯವರು ಸ್ಪಷ್ಟಪಡಿಸಬೇಕಿದೆ.

ಗಣಿಗಾರಿಕೆ ಮಿತಿ ಹೆಚ್ಚಿಸಿದ್ದು ಉದ್ಯೋಗ ಸಹ ಹೆಚ್ಚಳವಾಗಲಿದೆ. ಜಿಂದಾಲ್‌ನಲ್ಲಿ ಬೇರೆ ರಾಜ್ಯದವರಿಗೆ ಉದ್ಯೋಗ ನೀಡಲಾಗುತ್ತಿದೆ. ಹೀಗಾಗಿ, ಸ್ಥಳೀಯ ಹಾಗೂ ರಾಜ್ಯದವರಿಗೆ ಎಷ್ಟು ಉದ್ಯೋಗ ನೀಡಲಾಗಿದೆ ಎಂಬುವದನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'Gaza deal ಒಪ್ಕೊಳ್ಳಿ.. ಇಲ್ಲ ನರಕ ತೋರಿಸ್ತೀವಿ': Hamas ಗೆ ಡೊನಾಲ್ಡ್ ಟ್ರಂಪ್ ಅಂತಿಮ ಎಚ್ಚರಿಕೆ!

2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬೇಡಿ: 11 ಮಕ್ಕಳ ಸಾವಿನ ನಂತರ ಕೇಂದ್ರ ಎಚ್ಚರಿಕೆ

ಖ್ಯಾತ ಹಿರಿಯ ಪತ್ರಕರ್ತ, ಲೇಖಕ ಟಿಜೆಎಸ್ ಜಾರ್ಜ್ ನಿಧನ

ಕರೂರ್ ಕಾಲ್ತುಳಿತ ತನಿಖೆಗೆ SIT ರಚನೆ: ಸ್ಥಳದಿಂದ ಓಡಿ ಹೋದ ವಿಜಯ್​​ಗೆ ಮದ್ರಾಸ್ ಹೈಕೋರ್ಟ್ ತರಾಟೆ

'ಭೌಗೋಳಿಕ ನಕ್ಷೆಯಲ್ಲಿ ಕೂಡ ಇರದಂತೆ ಅಳಿಸಿ ಹಾಕುತ್ತೇವೆ': ಬಾಲ ಬಿಚ್ಚಿದ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥ ದ್ವಿವೇದಿ ಎಚ್ಚರಿಕೆ! Video

SCROLL FOR NEXT