ರಾಜಕೀಯ

ವಿಧಾನಸಭೆ ಚುನಾವಣೆಗೆ ದಿನಗಣನೆ: ಕರ್ನಾಟಕದಲ್ಲಿ ಮತದಾರರ ಮೇಲೆ ಉಡುಗೊರೆಗಳ ಸುರಿಮಳೆ!

Ramyashree GN

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಜಾರಿ ಮಾಡುವ ಮುನ್ನವೇ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಮತದಾರರಿಗೆ ಉಡುಗೊರೆಗಳ ಸುರಿಮಳೆಗೈಯುತ್ತಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ಇಸಿ ಚುನಾವಣಾ ನೀತಿ ಸಂಹಿತೆ ಜಾರಿ ಮಾಡುವ ಸಾಧ್ಯತೆಯಿದೆ.

ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸೇರಿದ ರಾಜಕೀಯ ಪಕ್ಷಗಳ ಮುಖಂಡರು ಮತದಾರರನ್ನು ಸೆಳೆಯಲು ಸೀರೆ, ಬೆಳ್ಳಿ, ಬಂಗಾರದ ವಸ್ತುಗಳು, ಪ್ರೆಷರ್ ಕುಕ್ಕರ್, ಮಿಕ್ಸರ್ ಗ್ರೈಂಡರ್, ಟೆಲಿವಿಷನ್ ಸೆಟ್, ಮೊಬೈಲ್‌ಗಳನ್ನು ಹಂಚುತ್ತಿದ್ದಾರೆ.

ಮೇಲುಗೈ ಸಾಧಿಸಲು ನಾಯಕರು ಉಡುಗೊರೆಗಳ ವಿನಿಮಯವನ್ನು ಸಹ ನೀಡುತ್ತಿದ್ದಾರೆ. ಒಬ್ಬ ನಾಯಕ ಹಂಚಿದ್ದ ಕುಕ್ಕರ್‌ ಅನ್ನು ತೆಗೆದುಕೊಂಡು ಬರುವಂತೆ ಮತ್ತು ಅವುಗಳನ್ನು ಕೆಳಗೆ ಎಸೆದು ಮತ್ತೊಬ್ಬ ನಾಯಕನ ಹೆಸರಿನ ಮೇಲೆ ಉತ್ತಮ ಗುಣಮಟ್ಟದ ಕುಕ್ಕರ್‌ಗಳನ್ನು ವಿತರಿಸುತ್ತಿರುವ ವಿಡಿಯೊ ವೈರಲ್ ಆಗಿದೆ.

ಹಾವೇರಿ ಜಿಲ್ಲೆಯ ಬೀರೇಶ್ವರನಗರದಲ್ಲಿರುವ ಬಿಜೆಪಿ ಎಂಎಲ್‌ಸಿ ಆರ್‌.ಶಂಕರ್‌ ಅವರ ನಿವಾಸದ ಮೇಲೆ ಮಂಗಳವಾರ ತಡರಾತ್ರಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಅವರ ಹೆಸರು ಹಾಗೂ ಚಿತ್ರಗಳಿರುವ 30ರಿಂದ 40 ಲಕ್ಷ ರೂಪಾಯಿ ಮೌಲ್ಯದ ಮನೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

6,000 ಸೀರೆಗಳು, 9,000 ಶಾಲಾ ಬ್ಯಾಗ್‌ಗಳು, ಸ್ಟೀಲ್ ಪ್ಲೇಟ್‌ಗಳು ಮತ್ತು ಗ್ಲಾಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಂಎಲ್‌ಸಿ ಆರ್.ಶಂಕರ್ ಅವರ ಬೆಂಬಲಿಗರು ನಿವಾಸದಲ್ಲಿ ಜಮಾಯಿಸಿ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಗೋವಾ, ಇತರ ಹಿಂದೂ ಯಾತ್ರಾ ಕೇಂದ್ರಗಳಾದ ಧರ್ಮಸ್ಥಳ, ಕೊಲ್ಲಾಪುರ, ಶಿರಡಿ ಮತ್ತು ಇತರ ಸ್ಥಳಗಳಿಗೆ ನಾಯಕರು ಪ್ರವಾಸವನ್ನು ಏರ್ಪಡಿಸುತ್ತಿದ್ದಾರೆ. ಅನೇಕ ಮತದಾರರು ತಮ್ಮ ನಾಯಕನಿಗೆ ತಪ್ಪದೆ ಮತ ಹಾಕುವುದಾಗಿ ದೇವರ ಮುಂದೆ ವಾಗ್ದಾನ ಮಾಡಿದ್ದಾರೆ ಎಂದು  ಎಂದು ಮೂಲಗಳು ಬಹಿರಂಗಪಡಿಸಿವೆ.

ಆಡಳಿತಾರೂಢ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ಶಾಸಕ ಸಿ.ಟಿ. ರವಿ ಅವರು ನೀಡಿದ್ದಾರೆ ಎನ್ನಲಾದ ಸೀರೆಗಳನ್ನು ಮತದಾರರು ಸುಟ್ಟು ಹಾಕಿರುವ ಮತ್ತು ಅಭಿವೃದ್ಧಿ ಕುರಿತು ಅವರು ಉತ್ತರ ನೀಡಬೇಕೆಂದು ಒತ್ತಾಯಿಸಿರುವ ಘಟನೆಯೂ ವರದಿಯಾಗಿದೆ.

ಮತ್ತೊಂದು ಘಟನೆಯಲ್ಲಿ, ಬಬಲೇಶ್ವರ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ್ ಹಂಚಿದರು ಎನ್ನಲಾದ ಸೀರೆ ಮತ್ತು ಪಾತ್ರೆಗಳನ್ನು ಅತಾಲಟ್ಟಿ ಗ್ರಾಮಸ್ಥರು ಎಸೆದಿದ್ದಾರೆ. 

SCROLL FOR NEXT