ಸಮಾವೇಶ ವೇದಿಕೆಯಲ್ಲಿ ಜೆಡಿಎಸ್ ನಾಯಕರು. 
ರಾಜಕೀಯ

ಎರಡೂ ರಾಷ್ಟ್ರೀಯ ಪಕ್ಷಗಳ ತಿರಸ್ಕರಿಸಿ, ಜೆಡಿಎಸ್'ಗೆ ಬಹುಮತ ನೀಡಿ: ಮತದಾರರಿಗೆ ಎಚ್.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಸುವರ್ಣ ಯುಗವನ್ನು ಮರಳಿ ತರಲು ಎರಡೂ ರಾಷ್ಟ್ರೀಯ ಪಕ್ಷಗಳನ್ನು (ಕಾಂಗ್ರೆಸ್ ಮತ್ತು ಬಿಜೆಪಿ) ತಿರಸ್ಕರಿಸಿ, ಜೆಡಿಎಸ್ ಪಕ್ಷಕ್ಕೆ ಬಹುಮತವನ್ನು ನೀಡುವಂತೆ ಮತದಾರರಿಗೆ ಹೆಚ್.ಡಿ.ಕುಮಾರಸ್ವಾಮಿಯವರು ಭಾನುವಾರ ಮನವಿ ಮಾಡಿಕೊಂಡರು.

ಮೈಸೂರು: ರಾಜ್ಯದಲ್ಲಿ ಸುವರ್ಣ ಯುಗವನ್ನು ಮರಳಿ ತರಲು ಎರಡೂ ರಾಷ್ಟ್ರೀಯ ಪಕ್ಷಗಳನ್ನು (ಕಾಂಗ್ರೆಸ್ ಮತ್ತು ಬಿಜೆಪಿ) ತಿರಸ್ಕರಿಸಿ, ಜೆಡಿಎಸ್ ಪಕ್ಷಕ್ಕೆ ಬಹುಮತವನ್ನು ನೀಡುವಂತೆ ಮತದಾರರಿಗೆ ಹೆಚ್.ಡಿ.ಕುಮಾರಸ್ವಾಮಿಯವರು ಭಾನುವಾರ ಮನವಿ ಮಾಡಿಕೊಂಡರು.

ಮೈಸೂರಿನ ಹೊರವಲಯದಲ್ಲಿ ಜೆಡಿಎಸ್‌ನ ಪಂಚರತ್ನ ರಥ ಯಾತ್ರೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣಾ ಫಲಿತಾಂಶವು 1994ರಲ್ಲಿ ಎಚ್‌ಡಿ ದೇವೇಗೌಡ ಅವರು ಸಿಎಂ ಆಗಿದ್ದಂತೆಯೇ ಬರಲಿದೆ. ಪಕ್ಷಕ್ಕೆ ಸಂಪೂರ್ಣ ಬಹುಮತ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು.

1994ರಲ್ಲಿ ಹಳೇ ಮೈಸೂರು ಭಾಗ ಪಕ್ಷಕ್ಕೆ 74 ಶಾಸಕರನ್ನು ನೀಡಿತ್ತು, 2023ರಲ್ಲೂ ಅದೇ ಪರಿಸ್ಥಿತಿ ಪುನರಾವರ್ತನೆಯಾಗಲಿದೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷ 123 ಸ್ಥಾನ ಗೆಲ್ಲುವ ಗುರಿಯನ್ನು ಹೊಂದಿದೆ. ನೀವು ನನಗೆ 50 ಸ್ಥಾನಗಳನ್ನು ನೀಡಬಹುದು. ಆದರೆ, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಇರಿಸಲು ಮತ್ತು ರೈತರನ್ನು ಸಬಲೀಕರಣಗೊಳಿಸಲು ಐದು ವರ್ಷಗಳ ಸರ್ಕಾರವನ್ನು ನೀಡಲು 123 ಸ್ಥಾನಗಳನ್ನು ನಾನು ಬಯಸುತ್ತಿದ್ದೇನೆಂದು ಮತದಾರರಿಗೆ ತಿಳಿಸಿದರು.

ಕೋಲಾರ ಮತ್ತು ಚಿಕ್ಕಬಳಾಪುರ ಜಿಲ್ಲೆಗಳಲ್ಲಿ ಈಗಿರುವ ರಾಜಕೀಯ ಪರಿಸ್ಥಿತಿಯಿಂದ ಜೆಡಿಎಸ್ 10 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದ್ದು, ತುಮಕೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಗೆಲುವು ಸಾಧಿಸಲಿದೆ ವಿಶ್ವಾಸ ವ್ಯಕ್ತಪಡಿಸಿದರು.

ರೈತರು, ಬಡವರು, ದಲಿತರ ಸಬಲೀಕರಣಕ್ಕಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ ದೇವೇಗೌಡರ ನಾಯಕತ್ವವನ್ನು ಮಂಡ್ಯ, ಮೈಸೂರು ಮತ್ತು ಹಾಸನದ ಜನರು ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ ಎಂದರು.

ಬಳಿಕ ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಆಗಾಗ ಭೇಟಿ ನೀಡುತ್ತಿರುವುದಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಮತ್ತು ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದಾಗ ರಾಜ್ಯಕ್ಕೆ ಭೇಟಿ ನೀಡುವುದನ್ನು ಯಾವುದು ತಡೆದಿತ್ತು ಎಂದು ಪ್ರಶ್ನಿಸಿದರು.

ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬವನ್ನು ಪ್ರಧಾನಮಂತ್ರಿಗಳು ಭೇಟಿ ಮಾಡದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದಲ್ಲಿ ಬಯಲು ಶೌಚ ಬಳಕೆಗಳು ಇನ್ನು ಮುಂದುವರೆದಿದೆ. ಸರ್ಕಾರದ ಸ್ವಚ್ಛ ಭಾರತ ಅಭಿಯಾನ ಕೇವಲ ಘೋಷಣೆಯಾಗಿದೆ. ಪಿಎಸ್‌ಐ ಮತ್ತು ಇತರ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮಗಳು ನಡೆದಿವೆ. ಬಿಜೆಪಿ ಕೇಂದ್ರ ನಾಯಕರು ಚುನಾವಣೆಗೂ ಮುನ್ನ ಭರವಸೆಗಳ ನೀಡುತ್ತಿರುವುದನ್ನು ನಂಬಬೇಡಿ ಮತದಾರರಿಗೆ ಮನವಿ ಮಾಡಿಕೊಂಡರು.

ಇದೇ ವೇಳೆ ಹಲವು ಯೋಜನೆಗಳ ಕ್ರೆಡಿಟ್ ಪಡೆಯಲು ಯತ್ನಿಸುತ್ತಿರುವ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ ಕಿಡಿಕಾರಿದರು, ಬಳಿಕ ಪಂಚರತ್ನ ಆಶ್ವಾಸನೆಗಳನ್ನು ಪಟ್ಟಿ ಮಾಡಿದರು. ನಾನು ರೂಪಿಸಿರುವ ಕಾರ್ಯಕ್ರಮಗಳು, ಯೋಜನೆಗಳ ಜಾರಿಗೆ ತರಲು ರೂ.2.5ಲಕ್ಷ ಕೋಟಿ ಕ್ರೋಢಿಕರಿಸುವುದಾಗಿ ತಿಳಿಸಿದರು.

ಬಳಿಕ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ಮಂಡ್ಯ, ತುಮಕೂರು ಜಿಲ್ಲೆಗಳಿಗೆ ಹೇಮಾವತಿ ನೀರನ್ನು ತರಲು ಎಚ್‌ಡಿ ದೇವೇಗೌಡ ಅವರು ನೀಡಿದ ಕೊಡುಗೆ ಸ್ಮರಿಸಿದ ಕುಮಾರಸ್ವಾಮಿ, ಪಂಜಾಬ್‌ನ ಜನರು ಒಂದು ಭತ್ತದ ತಳಿಗಳಿಗೆ ದೇವೇಗೌಡ ಅವರ ಹೆಸರಿಟ್ಟಿದ್ದಾರೆ ಆದರೆ, ಅವರ ಕೊಡಗೆಗಳ ಸ್ಮರಿಸಿರುವ ಸೌಜನ್ಯತೆ ರಾಷ್ಟ್ರೀಯ ಪಕ್ಷಗಳಿಗಿಲ್ಲ. ಕಾಂಗ್ರೆಸ್ ವಿರೋಧದ ನಡುವೆಯೂ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೃಷಿ ಸಾಲ ಮನ್ನಾ ಮಾಡಿದ್ದೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT