ಬೆಳಗಾವಿ ರೈಲು ನಿಲ್ದಾಣ (ಸಂಗ್ರಹ ಚಿತ್ರ) 
ರಾಜಕೀಯ

ಬೆಳಗಾವಿಯಲ್ಲಿ ಎರಡು ಕುಟುಂಬಗಳದ್ದೇ ರಾಜಕೀಯ ಪ್ರಾಬಲ್ಯ; ರಮೇಶ್ ಜಾರಕಿಹೊಳಿಯನ್ನೇ ನಂಬಿ ಕೂತ ಬಿಜೆಪಿ!

ಬೆಂಗಳೂರು ನಗರದ ನಂತರ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಜಾರಕಿಹೊಳಿ ಸಹೋದರರು ಮತ್ತು ಕತ್ತಿ ಕುಟುಂಬದ ಪ್ರಾಬಲ್ಯವೇ ಅಧಿಕ.

ಬೆಳಗಾವಿ: ಬೆಂಗಳೂರು ನಗರದ ನಂತರ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಜಾರಕಿಹೊಳಿ ಸಹೋದರರು ಮತ್ತು ಕತ್ತಿ ಕುಟುಂಬದ ಪ್ರಾಬಲ್ಯವೇ ಅಧಿಕ.

ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದರೆ, ಅವರ ಸಹೋದರ ಸತೀಶ್ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ತಂತ್ರ ರೂಪಿಸುವಲ್ಲಿ ಪ್ರಮುಖರಾಗಿದ್ದಾರೆ. ಒಂದೇ ಕುಟುಂಬದವರಾದರೂ, ಈ ಮೂವರೂ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳಲ್ಲಿ ಸಚಿವರಾಗಿದ್ದರು.

ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ ಮತ್ತು ಅರಭಾವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರೆ, ಸತೀಶ್ ಯೆಮಕನಮರಡಿಯಿಂದ ಸ್ಪರ್ಧಿಸುತ್ತಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಬಿಜೆಪಿ ತೊರೆದಿದ್ದು, ಇದಕ್ಕೆ ರಮೇಶ್ ಜಾರಕಿಹೊಳಿ ಅವರ ಶಕ್ತಿಯೇ ಕಾರಣ ಎನ್ನಲಾಗುತ್ತಿದೆ.

ಸವದಿ ಅವರು ಈಗ ಅಥಣಿಯಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ ಮತ್ತು ಅವರ ಪ್ರತಿಸ್ಪರ್ಧಿ ಮಹೇಶ್ ಕುಮಠಳ್ಳಿ, ರಮೇಶ್ ಜಾರಕಿಹೊಳಿ ಅವರ ಆಪ್ತರಾಗಿದ್ದಾರೆ.

ಜಾರಕಿಹೊಳಿ ಸಹೋದರರು ಸಕ್ಕರೆ ಉದ್ಯಮಿಗಳಾಗಿದ್ದು, ಈ ಕ್ಷೇತ್ರದಲ್ಲಿ ವರ್ಣರಂಜಿತ ಇತಿಹಾಸವನ್ನು ಹೊಂದಿದ್ದಾರೆ. ಅವರು ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗಕ್ಕೆ ಸೇರಿದವರಾಗಿದ್ದು, ಅವರನ್ನು ಮೀಸಲು ಕ್ಷೇತ್ರಗಳಿಗೆ ಸೀಮಿತಗೊಳಿಸಬೇಕೆಂಬ ಕೂಗು ಕೇಳಿಬಂದಿದೆ. ಆದರೆ, ಒಡಹುಟ್ಟಿದವರ ಹಣ ಮತ್ತು ತೋಳ್ಬಲವು ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ವ್ಯತ್ಯಾಸವನ್ನುಂಟು ಮಾಡುತ್ತಿದೆ.

ಈಮಧ್ಯೆ, ಕತ್ತಿ ಪ್ರಬಲ ಲಿಂಗಾಯತ ಕುಟುಂಬವಾಗಿದೆ. ಆದರೆ, ಎಂಟು ಅವಧಿಯ ಶಾಸಕ ಮತ್ತು ಆರು ಬಾರಿ ಸಚಿವರಾಗಿದ್ದ ಉಮೇಶ್ ಕತ್ತಿ ಅವರ ನಿಧನವು ಈ ಕುಟುಂಬದ ಪ್ರಭಾವವನ್ನು ಕುಗ್ಗಿಸಿದೆ. 

ಉಮೇಶ್ ಕತ್ತಿ ಅವರ ಸಹೋದರ ಹಾಗೂ ಮಾಜಿ ಸಂಸದ ರಮೇಶ್ ಕತ್ತಿ ಅವರು ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದಾರೆ. ಉಮೇಶ ಕತ್ತಿ ಅವರ ಅವರ ಪುತ್ರ ನಿಖಿಲ್ ತಮ್ಮ ತಂದೆ ಪ್ರತಿನಿಧಿಸಿದ್ದ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 

ಈ ಭಾಗದಲ್ಲಿ ಜೊಲ್ಲೆ ಕುಟುಂಬವೂ ಪ್ರಬಲವಾಗಿದ್ದು, ಧಾರ್ಮಿಕ ಮತ್ತು ದತ್ತಿ ಸಚಿವೆ ಶಶಿಕಲಾ ಜೊಲ್ಲೆ ಅವರು ನಿಪ್ಪಾಣಿ ವಿಧಾನಸಭಾ ಕ್ಷೇತ್ರದಿಂದ ಜನಾದೇಶ ಬಯಸಿದ್ದಾರೆ. ಅವರ ಪತಿ ಆನಂದ ಜೊಲ್ಲೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ಸಂಸದರಾಗಿದ್ದಾರೆ.

ಜಿಲ್ಲೆಯು 18 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಅದರಲ್ಲಿ 13 ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯವಿದೆ. ಕೇಂದ್ರ ರೈಲ್ವೆ ಖಾತೆ ಮಾಜಿ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ಉಮೇಶ ಕತ್ತಿ ನಿಧನದಿಂದಾಗಿ ಸಮುದಾಯವು ತನ್ನ ಇಬ್ಬರು ಪ್ರಬಲ ನಾಯಕರನ್ನು ಕಳೆದುಕೊಂಡಿದೆ. 

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಐದು ಸ್ಥಾನಗಳಲ್ಲಿ ಪ್ರಬಲವಾಗಿದೆ ಮತ್ತು ಎನ್‌ಸಿಪಿ-ಶಿವಸೇನೆಯ ಬೆಂಬಲವನ್ನು ಹೊಂದಿದೆ. ಈ ಪ್ರದೇಶಗಳಲ್ಲಿ ಶೇ 40 ರಷ್ಟು ಮರಾಠಿ ಮಾತನಾಡುವ ಜನರಿದ್ದಾರೆ. ಏಕೆಂದರೆ, ಬೆಳಗಾವಿಯು ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು.

ಬೆಳಗಾವಿ ಬಿಜೆಪಿ ಭದ್ರಕೋಟೆಯಾಗಿತ್ತು. ಆದರೆ, ಸುರೇಶ ಅಂಗಡಿ ಮತ್ತು ಉಮೇಶ ಕತ್ತಿ ಅವರ ನಿಧನ ಹಾಗೂ ಲಕ್ಷ್ಮಣ ಸವದಿ ಅವರ ಪಕ್ಷಾಂತರ ಸೇರಿದಂತೆ ಇತರೆ ಕೆಲವು ಅಂಶಗಳು ಕೇಸರಿ ಪಕ್ಷಕ್ಕೆ ಪರಿಸ್ಥಿತಿ ಕಠಿಣವಾಗಲು ಕಾರಣವಾಗಿವೆ. ಬಿಜೆಪಿ ಈಗ ರಮೇಶ ಜಾರಕಿಹೊಳಿ ಅವರ ಬಲದ ಮೇಲೆ ಪಕ್ಷಕ್ಕೆ ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT