ರಾಜಕೀಯ

ಬಿಜೆಪಿ ವಿರುದ್ಧ ಭ್ರಷ್ಟಾಚಾರ ರೇಟ್ ಕಾರ್ಡ್ ಜಾಹಿರಾತು; ಕಾಂಗ್ರೆಸ್ ಗೆ ಚುನಾವಣಾ ಆಯೋಗ ನೊಟೀಸ್

Srinivas Rao BV

ಬೆಂಗಳೂರು: ಬಿಜೆಪಿಯನ್ನು ಟಾರ್ಗೆಟ್ ಮಾಡಿ ಕಾಂಗ್ರೆಸ್ ಪಕ್ಷ ಪತ್ರಿಕೆಗಳಿಗೆ ನೀಡಿದ್ದ ಭ್ರಷ್ಟಾಚಾರ ದರ ಪಟ್ಟಿಯ ಜಾಹಿರಾತಿನ ವಿಚಾರದಲ್ಲಿ ಚುನಾವಣಾ ಆಯೋಗ ಕಾಂಗ್ರೆಸ್ ಪಕ್ಷಕ್ಕೆ ನೊಟೀಸ್ ಜಾರಿ ಮಾಡಿದೆ. 

ಜಾಹಿರಾತಿನಲ್ಲಿ ಮಾಡಿರುವ ಆರೋಪಗಳಿಗೆ ನಿಖರವಾದ ಸಾಕ್ಷ್ಯಗಳನ್ನು ಭಾನುವಾರ ಸಂಜೆ ವೇಳೆಗೆ ಸಾಬೀತುಪಡಿಸುವಂತೆ ನೊಟೀಸ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಶನಿವಾರದಂದು ಬಿಜೆಪಿ ದಾಖಲಿಸಿದ ದೂರಿನ ಆಧಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಯೋಗ ನೊಟೀಸ್ ಜಾರಿ  ಮಾಡಿದೆ.

ಮೇ.10 ರಂದು ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಟಾರ್ಗೆಟ್ ಮಾಡಿದ್ದ ಕಾಂಗ್ರೆಸ್ ಪಕ್ಷ, ಬಿಜೆಪಿ ಸರ್ಕಾರವನ್ನು ಟ್ರಬಲ್ ಇಂಜಿನ್ ಸರ್ಕಾರ ಎಂದು ಬಿಂಬಿಸಿ ಪೋಸ್ಟರ್ ಹಾಗೂ ಜಾಹಿರಾತುಗಳನ್ನು ನೀಡಿ, ಭ್ರಷ್ಟಾಚಾರ ರೇಟ್ ಗಳನ್ನು ಪಟ್ಟಿ ಮಾಡಿತ್ತು.

ನೀವು ನೀಡಿದ ಜಾಹೀರಾತಿನಲ್ಲಿ ಉಲ್ಲೇಖಿಸಲಾದ ನೇಮಕಾತಿಗಳು ಮತ್ತು ವರ್ಗಾವಣೆಗಳು, ಉದ್ಯೋಗಗಳು ಮತ್ತು ಕಮಿಷನ್ ಪ್ರಕಾರಗಳ ದರಗಳಿಗೆ ಪುರಾವೆಗಳನ್ನು ಮೇ 7, 2023 ರಂದು 19.00 ಗಂಟೆಗಳ ಒಳಗೆ ಯಾವುದೇ ವಿವರಣೆಯೊಂದಿಗೆ ಮತ್ತು ಅದನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸುವ ಮೂಲಕ ಪಕ್ಷ ಮಾಡಿದ ಆರೋಪಗಳನ್ನು ಸಾಬೀತುಪಡಿಸಲು ಪುರಾವೆಗಳನ್ನು ನೀಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಿಗೆ "  ಸೂಚಿಸಲಾಗಿದೆ" ಎಂದು ಆಯೋಗ ಹೇಳಿದೆ.

SCROLL FOR NEXT