ಆರ್. ವಿ ದೇಶಪಾಂಡೆ 
ರಾಜಕೀಯ

ಸ್ಪೀಕರ್ ಸ್ಥಾನ ದೊಡ್ಡ ಜವಾಬ್ದಾರಿ, ಆ ಅರ್ಹತೆ ನನಗಿಲ್ಲ: ಆರ್.ವಿ ದೇಶಪಾಂಡೆ ಟಾಂಗ್

ಹೊಸ ಕಾಂಗ್ರೆಸ್‌ ಸರ್ಕಾರದಲ್ಲಿ ನನಗೆ ವಿಧಾನಸಭೆ ಸ್ಪೀಕರ್‌ ಆಗುವ ಅರ್ಹತೆ ಇಲ್ಲವೆಂದು ಅನಿಸುತ್ತದೆ ಎಂದು ಸ್ವತಃ ಕಾಂಗ್ರೆಸ್‌ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಹೇಳಿಕೊಂಡಿದ್ದಾರೆ.

ಬೆಂಗಳೂರು: ಹೊಸ ಕಾಂಗ್ರೆಸ್‌ ಸರ್ಕಾರದಲ್ಲಿ ನನಗೆ ಸ್ಪೀಕರ್‌ ಆಗುವ ಅರ್ಹತೆ ಇಲ್ಲವೆಂದು ಅನಿಸುತ್ತದೆ ಎಂದು ಸ್ವತಃ ಕಾಂಗ್ರೆಸ್‌ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಹೇಳಿಕೊಂಡಿದ್ದಾರೆ.

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದು, ಪ್ರಮಾಣವಚನ ಸ್ವೀಕಾರ ಮಾತ್ರ ಬಾಕಿಯಿದೆ. ಆದರೆ, ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಲಾಗುತ್ತದೆ ಎಂಬುದಕ್ಕೆ ಯಾರ ಬಳಿಯೂ ಸ್ಪಷ್ಟ ಉತ್ತರಗಳಿಲ್ಲ.

ಇದರ ಮಧ್ಯೆ ಆರ್​ವಿ ದೇಶಪಾಂಡೆಗೆ ಸ್ಪೀಕರ್ ಸ್ಥಾನ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ದೇಶಪಾಂಡೆ, ಪರೋಕ್ಷವಾಗಿ ಸ್ಪೀಕರ್ ಆಗಲು ತಯಾರಿಲ್ಲ ಅನ್ನೋದನ್ನು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿರುವ ದೇಶಪಾಂಡೆ, ನಾಳೆ ಸಚಿವ ಸಂಪುಟ ರಚನೆಯಾಗಲಿದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದರೆ, ಸಚಿವ ಸಂಪುಟದಲ್ಲಿ ನಾನು ಇರುವ ಬಗ್ಗೆ ಮುಖ್ಯಮಂತ್ರಿ ಮತ್ತು ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ರಾಜ್ಯದ ಸಚಿವ ಸಂಪುಟದಿಂದ ಹಿರಿಯರನ್ನು ಕೈ ಬಿಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಈಗಾಗಲೇ ರಾಜ್ಯದಲ್ಲಿ ನಾನು 8 ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಈ ಬಾರಿ ಏನು ಮಾಡುತ್ತಾರೆ, ಏನು ಇಲ್ಲ ಅನ್ನೋದು ಅವರಿಗೆ ಬಿಟ್ಟ ವಿಚಾರವಾಗಿದೆ. ಆದರೆ, ಕಾಂಗ್ರೆಸ್‌ ಸರ್ಕಾರದ ಸ್ಪೀಕರ್‌ ಆಗುವ ಅರ್ಹತೆ ನನಗೆ ಇಲ್ಲವೆಂದು ಅನಿಸುತ್ತದೆ. ಅದು ಬಹಳ ದೊಡ್ಡ ಹುದ್ದೆಯಾಗಿದ್ದು, ಸರ್ಕಾರದಲ್ಲಿಯೇ ಅತ್ಯಂತ ಜವಾಬ್ದಾರಿ ಹುದ್ದೆಯಾಗಿದೆ. ಇದರ ಬಗ್ಗೆ ನನ್ನ ಜೊತೆ ಯಾರು ಚರ್ಚೆಯೂ ಮಾಡಿಲ್ಲ ಎಂದು ದೇಶಪಾಂಡೆ ಮಾಹಿತಿ ನೀಡಿದರು.

ನನ್ನ ಪ್ರಕಾರ ಸ್ಪೀಕರ್ ಪೋಸ್ಟ್ ಬಹಳ ದೊಡ್ಡದು. ಆ ಅರ್ಹತೆ ನನಗೆ ಇಲ್ಲ ಎಂದು ಕಾಣುತ್ತದೆ. ಅದು ತುಂಬಾ ಜವಾಬ್ದಾರಿಯುತ ಹುದ್ದೆ ಎನ್ನುವ ಮೂಲಕ  ತಮಗೆ ಸಚಿವ ಸ್ಥಾನವೇ ಬೇಕೆಂದು ಪರೋಕ್ಷವಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪದೇ ಪದೇ ಇರಾನ್ ದಾಳಿ: ಅಬುದಾಬಿಯಲ್ಲಿ ಕ್ಷಿಪಣಿ ಅವಶೇಷಗಳು ಬಿದ್ದು, ಭಾರತೀಯ ಪ್ರಜೆ ಸೇರಿದಂತೆ ಇಬ್ಬರು ಸಾವು!

ಕಾಡುಪ್ರಾಣಿಗಳ ದಾಳಿಯಲ್ಲಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರಿ ಉದ್ಯೋಗವಿಲ್ಲ: ಸಚಿವ ಈಶ್ವರ್ ಖಂಡ್ರೆ

News wrap 26-03-2026 | ಉಗ್ರ ನಂಟು: ಬಳ್ಳಾರಿ ಮೂಲದ ಯುವಕ ಸೇರಿ 12 ಮಂದಿ ಬಂಧನ; IPL: ನಮಗೆ ಒಂದೇ ಟಿಕೆಟ್ ಕೊಡ್ತಾರೆ, 5 ಬೇಕು- ಶಾಸಕರ ಆಗ್ರಹ; ಸಿಎಂ ಗೆ ಮತ್ತೆ ಮುಡಾ ತಲೆನೋವು!

IPL 2026: ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಿದ BCCI; ಫೈನಲ್ ಪಂದ್ಯ ಎಲ್ಲಿ ಗೊತ್ತಾ?

1ನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯವಲ್ಲ: ವಯೋಮಿತಿಯಲ್ಲಿ ಸಡಿಲಿಕೆ; ಪೋಷಕರು ನಿರಾಳ!

SCROLL FOR NEXT