ಎಂಬಿ.ಪಾಟೀಲ್. 
ರಾಜಕೀಯ

ಡಿಕೆ ಸುರೇಶ್ ಜೊತೆಗೆ ಜಟಾಪಟಿ ವಿಚಾರ: ಯಾರಿಂದರೂ ವಾರ್ನಿಂಗ್ ತೆಗೆದುಕೊಳ್ಳುವಷ್ಟು ದುರ್ಬಲ ನಾನಲ್ಲ ಎಂದ ಎಂಬಿ ಪಾಟೀಲ್

ಸಿದ್ದರಾಮಯ್ಯ ಅವರೇ ಮುಂದಿನ 5 ವರ್ಷಗಳಿಗೆ ಸಿಎಂ ಎಂದು ಹೇಳಿದ್ದಕ್ಕೆ ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದ್ದರು ಎಂಬ ಸುದ್ದಿಗಳ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ಸಿದ್ದರಾಮಯ್ಯ ಅವರೇ ಮುಂದಿನ 5 ವರ್ಷಗಳಿಗೆ ಸಿಎಂ ಎಂದು ಹೇಳಿದ್ದಕ್ಕೆ ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದ್ದರು ಎಂಬ ಸುದ್ದಿಗಳ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯ ನಂತರ ಹೊರನಡೆಯುತ್ತಿದ್ದಾಗ ಡಿ.ಕೆ. ಸುರೇಶ್ ಪ್ರೀತಿಯಿಂದಲೇ ಪಾಟೀಲರೆ ಎಂದು ಗಟ್ಟಿಯಾಗಿ ಕರೆದರು, ನಾನು ವಾಪಸ್ ಅವರ ಬಳಿ ಬಂದೆ, ಅವರು ಗಟ್ಟಿಯಾಗಿರಿ ಎಂದು ಹೇಳಿದರು, ನಾನು ಈಗ ಆಫೀಸ್‌ಗೆ ಹೋಗುತ್ತಿದ್ದೇನೆ ಆಮೇಲೆ ಮಾತನಾಡುತ್ತೇನೆ ಎಂದು ಹೇಳಿ ಬಂದೆ, ಇದನ್ನು ಬಿಟ್ಟು ನನಗೆ ವಾರ್ನಿಂಗ್ ಕೊಟ್ಟರು ಎನ್ನುವುದೆಲ್ಲಾ ಸುಳ್ಳು ಎಂದು ಹೇಳಿದರು.

"ಡಿಕೆ ಸುರೇಶ್ ನನಗೆ ವಾರ್ನಿಂಗ್ ಕೊಟ್ಟಿಲ್ಲ ನಾನು ಕೂಡ ಅವರಿಗೆ ವಾರ್ನಿಂಗ್ ಕೊಟ್ಟಿಲ್ಲ, ನನಗೆ ವಾರ್ನಿಂಗ್ ಕೊಡುವಂತವರೂ ಯಾರೂ ಇಲ್ಲ, ಡಿಕೆ ಶಿವಕುಮಾರ್, ಡಿಕೆ ಸುರೇಶ್ ಅವರಿಗೆ ವಾರ್ನಿಂಗ್ ಕೊಡುವಂತವರೂ ಯಾರೂ ಇಲ್ಲ" ಎಂದು ತಿಳಿಸಿದರು.

ವಾರ್ನಿಂಗ್ ಎನ್ನುವುದೆಲ್ಲ ನಮ್ಮ ಡಿಕ್ಷನರಿಯಲ್ಲಿ ಇಲ್ಲ, ನಾವು ವಾರ್ನಿಂಗ್ ಕೊಡುವವರೆ ಹೊರತು ತೆಗೆದುಕೊಳ್ಳುವವರಲ್ಲ, ಸುಮ್ಮನೆ ಅವರ ಹೆಸರನ್ನು ತಪ್ಪಾಗಿ ಬಿಂಬಿಸುವುದು ಬೇಕಾಗಿಲ್ಲ. ನಾನು ಮುಂದೆ ಹೋಗುತ್ತಿದ್ದಾಗ ಡಿಕೆ ಸುರೇಶ್ ಅವರು ಪ್ರೀತಿಯಿಂದ ಎಂಬಿ ಪಾಟೀಲರೇ ಅಂತ ಕರೆದರು, ನಾವು ವಾಪಸ್ ಬಂದ ನಂತರ ಪ್ರೀತಿಯಿಂದ ಗಟ್ಟಿಯಾಗಿ ಇರಿ ಎಂದರು, ಪ್ರೀತಿಯಿಂದಲೇ ಅವರು ಮಾತನಾಡಿಸಿದರು, ನಾನು ಆಮೇಲೆ ಸಿಗುತ್ತೇನೆ ಎಂದು ಬಂದೆ" ಇಷ್ಟೇ ಆಗಿರುವುದು ಎಂದರು.

ಯಾರಿಂದಲೂ ವಾರ್ನಿಂಗ್ ಮಾಡಿಸಿಕೊಳ್ಳುವಷ್ಟು ದುರ್ಬಲವಾಗಿಲ್ಲ, ಡಿಕೆ ಸುರೇಶ್ ಕೂಡ ವಾರ್ನಿಂಗ್ ಮಾಡಿಸಿಕೊಳ್ಳುವಷ್ಟು ದುರ್ಬಲವಾಗಿಲ್ಲ, ನಮ್ಮ ಸಂಬಂಧ ಚೆನ್ನಾಗಿದೆ, ಈ ರೀತಿ ತಪ್ಪಾಗಿ ಬಿಂಬಿಸುವ ಕೆಲಸ ಆಗಬಾರದು" ಎಂದು ಸ್ಪಷ್ಟಪಡಿಸಿದರು.

"ನಾನು ಬಿಜಾಪುರದವನು ನಾನು ಯಾರಿಗೂ ಹೆದರುವುದಿಲ್ಲ, ನನಗೆ ಯಾರೂ ಬೆದರಿಕೆ ಹಾಕುವುದು, ವಾರ್ನಿಂಗ್ ಮಾಡುವುದಿಲ್ಲ, ನನ್ನ ತಂದೆ ಕೂಡ ನನಗೆ ಬೆರಳು ತೋರಿಸಿಲ್ಲ. ನಮ್ಮ ಮತ್ತು ಡಿಕೆ ಸುರೇಶ್ ಅವರ ಬಾಂಧವ್ಯ ಚನ್ನಾಗಿದೆ. ಅವರು ತಪ್ಪಾಗಿ ನಡೆದುಕೊಂಡಿಲ್ಲ, ಅವರು ಹಂಗೆ ಮಾಡಿದ್ದರೆ ನಾನು ಅದಕ್ಕೆ ಉತ್ತರ ಕೊಡುತ್ತಿದ್ದೆ ಎಂದು ಹೇಳಿದರು.

ಇದೇ ವೇಳೆ ಸಿದ್ದರಾಮಯ್ಯ ಅವರು ಸಿಎಂ ಅವಧಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಂತೆ ಎಂಬಿ ಪಾಟೀಲ್ ಪದೇ ಪದೇ ಅದನ್ನೇ ಕೇಳಬೇಡಿ, ನಾನು ಈಗಾಗಲೇ ಅದರ ಬಗ್ಗೆ ಸ್ಪಷ್ಟನೆ ಕೊಟ್ಟಾಗಿದೆ. ಮತ್ತೆ ಮತ್ತೆ ಅದೇ ಮಾತನಾಡಲು ಸಾಧ್ಯವಿಲ್ಲ. ಅದನ್ನು ನೀವು ಕೆದಕಲು ಹೋಗಬೇಡಿ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್