ರಾಜಕೀಯ

ಸಂಪುಟ ವಿಸ್ತರಣೆ ಕಸರತ್ತು: ಯಾರಿಗುಂಟು ಯಾರಿಗಿಲ್ಲ? ಹಿರಿಯರಿಗೆ ಬೇವು-ಕಿರಿಯರಿಗೆ ಬೆಲ್ಲ!

Shilpa D

ಮೈಸೂರು: ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಪುಟ ವಿಸ್ತರಣೆಗೆ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ, ಮೂರ್ನಾಲ್ಕು ಬಾರಿ ಗೆದ್ದಿರುವ ಹಿರಿಯರು ಹಾಗೂ ಹೊಸ ಮುಖಗಳು ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಹಿರಿಯ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೇ ಪಕ್ಷ ಅವರಿಗೆ ಅವಕಾಶ ಕಲ್ಪಿಸುತ್ತದೆ ಎಂಬ ವಿಶ್ವಾಸದಲ್ಲಿ ಎರಡನೇ ಹಂತದ ನಾಯಕರು ಇದ್ದಾರೆ.  ಇದರ ಜೊತೆಗೆ ಜೈನ, ಉಪ್ಪಾರ, ಇತರೆ ಹಿಂದುಳಿದ ಸಮುದಾಯಗಳ ಶಾಸಕರು ಕೂಡ ಸಚಿವ ಸಂಪುಟದ ಮೇಲೆ ಕಣ್ಣಿಟ್ಟಿದ್ದಾರೆ.

ಶಿವಕುಮಾರ್ ಅವರ ವಿರುದ್ಧ ದನಿಯೆತ್ತಿದ್ದ ಕೆ.ವೆಂಕಟೇಶ್, ಎಚ್.ಸಿ.ಮಹದೇವಪ್ಪ, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಅವರಂತಹ ಹಿರಿಯರ ಪ್ರವೇಶ ನಿಷೇದಿಸಿದರೇ ಅದು ಎರಡನೇ ಹಂತದ ನಾಯಕರಿಗೆ ಸಚಿವರಾಗಲು ದಾರಿಮಾಡಿಕೊಟ್ಟಂತಾಗುತ್ತದೆ.

ಆದರೆ ಸಿದ್ದರಾಮಯ್ಯ ಅವರು ತಮ್ಮ ಆಪ್ತರಾದ ಮಹದೇವಪ್ಪ, ವೆಂಕಟೇಶ್, ಬೈರೇಗೌಡ, ಕೆ.ಎನ್.ರಾಜಣ್ಣ, ಬಸವರಾಜ್ ರಾಯರೆಡ್ಡಿ, ಗುಂಡೂರಾವ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಮುಂದಾಗಬಹುದು ಎಂದು ಮೂಲಗಳು ತಿಳಿಸಿವೆ.

ತಾವು ಸಾಂಕೇತಿಕ ಮುಖ್ಯಮಂತ್ರಿಯಾಗಲು ಬಯಸುವುದಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ, ತಮಗಾಗಿ ಜೆಡಿಎಸ್ ತೊರೆದು ಬಂದಿರುವ  ಮಹದೇವಪ್ಪ ಮತ್ತು ವೆಂಕಟೇಶ್ ಅವರಂತಹ ಅನುಭವಿಗಳು ತಮ್ಮ ಸಂಪುಟದಲ್ಲಿ ಇರಬೇಕೆಂದು ಒತ್ತಾಯಿಸಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಅವರನ್ನು ತೃಪ್ತಿಪಡಿಸಲು ಎಲ್ಲ ವರ್ಗಗಳಿಗೂ ಸಮಾನ ಪ್ರಾತಿನಿಧ್ಯ ನೀಡುವ ದೃಢ ನಿಲುವು ಹೊಂದಿದ್ದಾರೆ.

ಈ ನಡುವೆ ಎಸ್‌ಸಿ/ಎಸ್‌ಟಿಗಳಿಗೆ ಎಂಟು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ದಲಿತ ಮುಖಂಡರು ಖರ್ಗೆ ಮತ್ತು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸೂಕ್ತ ಸಮುದಾಯಕ್ಕೆ ಪ್ರಾತಿನಿಧ್ಯ ಇಲ್ಲ ಎಂಬುದು ಕಾಂಗ್ರೆಸ್ ಹೈಕಮಾಂಡ್‌ಗೆ ಗೊತ್ತಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದ್ದಾರೆ.

ಎಸ್‌ಎಂ ಕೃಷ್ಣ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರಗಳಲ್ಲಿ ಸಮುದಾಯದ ನಾಲ್ವರು ಸಚಿವರಿದ್ದರು. ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದು, ಜೆಡಿಎಸ್ ಕೋಟೆ ಒಡೆಯಲು ಎನ್ ಚಲುವರಾಯಸ್ವಾಮಿ ಜತೆಗೂಡಿ ಶ್ರಮಿಸಿದ್ದಾಗಿ ಹೇಳಿದ್ದಾರೆ . ಎಸ್‌ಟಿ ಸಮುದಾಯದವರು ಮೂರು ಮತ್ತು ಮುಸ್ಲಿಮರು ಇನ್ನೂ ಮೂರು ಸಚಿವ ಸ್ಥಾನಗಳನ್ನು ಕೋರಿದ್ದಾರೆ.

SCROLL FOR NEXT