ವಿದ್ಯುತ್ ಕಳ್ಳ ಎಂಬ ಪೋಸ್ಟರ್ 
ರಾಜಕೀಯ

ಕಂಡವರ ಭೂಮಿಗೆ ಬೇಲಿ ಹಾಕುವ 'ಕಿಡಿಗೇಡಿ ಕುಮಾರ'ನ ಪರ ಬ್ಯಾಟಿಂಗ್ ಬಿಟ್ಟರೆ ಕೊಳಕುಮಂಡಲ ಕಾಂಗ್ರೆಸ್ ಕಿಸಿದಿದ್ದೇನೂ ಇಲ್ಲ!

ಹಳ್ಳ ಹಿಡಿದ ಗ್ಯಾರಂಟಿಗಳು ಕಾಂಗ್ರೆಸ್ಸಿನಲ್ಲಿ ಹಾಲಾಹಲವನ್ನೇ ಸೃಷ್ಟಿಸಿವೆ ಎನ್ನುವುದಕ್ಕೆ ಕುಮಾರಸ್ವಾಮಿ ಅವರ ಮನೆಯ ಕರೆಂಟ್‌ ವೈರ್‌ ಕೊಟ್ಟ ಶಾಕೇ ಸಾಕ್ಷಿ. ರಾಜಕೀಯವಾಗಿ ಅವರನ್ನು ಎದುರಿಸಲಾಗದ ನರಸತ್ತ ಪಕ್ಷ, ಕರೆಂಟ್ ವೈರ್ ಹಿಡಿದು 'ಶಕುನಿ ಯುದ್ಧ' ಆರಂಭಿಸಿದೆ.

ಬೆಂಗಳೂರು: ಕೊಳಕು ಮಂಡಲ ಕರ್ನಾಟಕ ಕಾಂಗ್ರೆಸ್ ಗೆ ಅರ್ಜೆಂಟಾಗಿ ಜನರ ಗಮನ ಬೇರೆಡೆಗೆ ಸೆಳೆಯುವ ತುರ್ತು ಇತ್ತು. ಕಳೆದೊಂದು ವಾರದಿಂದ ಎಚ್.ಡಿ ಕುಮಾರಸ್ವಾಮಿ ಅವರು ನಡೆಸಿದ ಸರ್ಜಿಕಲ್ ಸ್ಟ್ರೈಕ್ʼಗೆ ಕೈ ಪಡೆ ಪತರಗುಟ್ಟಿ ಹೋಗಿತ್ತು ಎಂದು ಜೆಡಿಎಸ್ ಹೇಳಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಜೆಡಿಎಸ್, ಕುಮಾರಸ್ವಾಮಿ ಭಾನುವಾರದ ಮಾಧ್ಯಮಗೋಷ್ಠಿ ಒಂದರಿಂದಲೇ ಅದರ ನವರಂಧ್ರಗಳು ಆಸ್ಫೋಟಗೊಂಡಿವೆ. ಈಗ ಮಾರಿ ಉಳಿಸಿಕೊಳ್ಳಲು ಕರೆಂಟ್ ವೈರ್ ಮೊರೆ ಹೋಗಿದೆ ಕಾಂಗ್ರೆಸ್. ಗ್ಯಾರಂಟಿಗಳ ವೈಫಲ್ಯಕ್ಕೆ ದಿನ ಬೆಳಗಾದರೆ ಜನರಿಂದ ಕ್ಯಾಕರಿ ಉಗಿಸಿಕೊಳ್ಳುತ್ತಿರುವ ಆ ಪಕ್ಷ, ದಿಕ್ಕಿಲ್ಲದೆ ಅಪಾಯಕಾರಿ ಕರೆಂಟ್ ವೈರ್ ಹಿಡಿದುಬಿಟ್ಟಿದೆ. ದರಬೇಸಿ ಕಾಂಗ್ರೆಸ್ಸಿಗೆ ದಾರಿ ಕಾಣುತ್ತಿಲ್ಲ ಎಂದು ಲೇವಡಿ ಮಾಡಿದೆ.

ಉತ್ತರಪ್ರದೇಶದಲ್ಲಿ ಮೂರಂಕಿಗೆ ಕುಸಿದಿತ್ತು. ತೆಲಂಗಾಣ ಸೇರಿ 5 ರಾಜ್ಯಗಳಲ್ಲಿ ಏದುಸಿರು ಬಿಡುತ್ತಿದೆ. ವಿಕಾರ, ವಿಕೃತಿಗೆ ತುತ್ತಾಗಿ ಕತ್ತಲಾದ ಮೇಲೆ ಗೋಡೆ ಮೇಲೆ ಕಳ್ಳಕಳ್ಳವಾಗಿ ಪೋಸ್ಟರ್‌ ಅಂಟಿಸುವ 'ಶಿಖಂಡಿ'ಸ್ಥಿತಿಗೆ ಬಂದಿದೆ. ಪಾಪ.. ಆ ಪಕ್ಷ ಭೂಗಳ್ಳ, ಕಲ್ಲುಕಳ್ಳ, ಕೊತ್ವಾಲನ ಶಿಷ್ಯನ ಕೈಗೆ ಸಿಕ್ಕಿ ಹುಚ್ಚುನಾಯಿಯಂತೆ ಒದ್ದಾಡುತ್ತಿದೆ

ಕುಮಾರಸ್ವಾಮಿ ಅವರು ಸ್ಪಷ್ಟನೆ ಕೊಟ್ಟ ಮೇಲೂ ಕಾಂಗ್ರೆಸ್‌ ವಿಕೃತಿ ಮಿತಿಮೀರಿದೆ. ಬೆಸ್ಕಾಂ ವಿದ್ಯುತ್‌ ವೇಗದಲ್ಲಿ ಎಫ್‌ ಐಆರ್‌ ದಾಖಲಿಸಿದೆ. ಕುಮಾರಸ್ವಾಮಿ ಅವರು ತಿಹಾರ್ ಜೈಲಿಗೆ ಹೋಗುವ ತಪ್ಪೇನೂ ಮಾಡಿಲ್ಲ. ಈಡಿ, ಸಿಬಿಐ, ಐಟಿ ಅವರ ಬೆನ್ಹತ್ತಿಲ್ಲ. ಪುಡಿರೌಡಿ 'ಕಿಡಿಗೇಡಿಕುಮಾರ'ನ ಕೈಚಳಕಕ್ಕೆ ಹೆದರುವ ಪ್ರಶ್ನೆಯೂ ಇಲ್ಲ.

ರಾಜ್ಯವನ್ನೇ ಗುಡಿಸಿ ಗಂಡಾಂತರಿಸಿ ತಿಪ್ಪೆ ಸಾರಿಸಿದೆ ಲಜ್ಜೆಗೇಡಿ ಕಾಂಗ್ರೆಸ್. #YstTax,  #SstTax, ಕಾಸಿಗಾಗಿ ಪೋಸ್ಟಿಂಗ್, ಸಿಎಂ ಕಚೇರಿಲಿ ಸುಲಿಗೆ, ಗುತ್ತಿಗೆದಾರರಿಂದ ಪರ್ಸಂಟೇಜ್, ಸ್ಟಾನ್ಲಿ ಸೋಫಾ-ಮಂಚ, ಹ್ಯುಬ್ಲೆಟ್‌ ವಾಚು.. ಒಂದಾ ಎರಡಾ? ಐಷಾರಾಮಯ್ಯನ ಮುಖ ಉಳಿಸಲು ಕರೆಂಟ್‌ ವೈರ್‌ ಹಿಡಿದು ಕೆಟ್ಟಿದೆ ಗುಜರಿ ಶಾಪ್  ಕಾಂಗ್ರೆಸ್

ಇನೊಬ್ಬರು ಹೇಳಿದ್ದನ್ನು ತಿರುಚಿ ವಕ್ರೀಕರಿಸುವ 'ವಿಕೃತಿ ವಿಕಾರಪೀಡಿತʼ ಕಾಂಗ್ರೆಸ್ಸಿಗೆ, ಮಾಜಿ ಸಿಎಂ ಸ್ಪಷ್ಟನೆಗಿಂತ ನೀತಿಗೆಟ್ಟ ರಾಜಕಾರಣದಲ್ಲೇ ಹೆಚ್ಚು ನಂಬಿಕೆ. ಅದೇ ಅದರ ಧರ್ಮ. ಕಂಡ ಕಂಡವರ ಭೂಮಿಗೆ ಬೇಲಿ ಹಾಕುವ 'ಕಿಡಿಗೇಡಿಕುಮಾರ'ನ ಪರ ಬ್ಯಾಟಿಂಗ್ ಬೀಸಿದ್ದು ಬಿಟ್ಟರೆ ಕೊಳಕುಮಂಡಲ ಕಾಂಗ್ರೆಸ್ ಕನ್ನಡಿಗರಿಗಾಗಿ ಕಿಸಿದಿದ್ದೇನೂ ಇಲ್ಲ.

ಹಳ್ಳ ಹಿಡಿದ ಗ್ಯಾರಂಟಿಗಳು ಕಾಂಗ್ರೆಸ್ಸಿನಲ್ಲಿ ಹಾಲಾಹಲವನ್ನೇ ಸೃಷ್ಟಿಸಿವೆ ಎನ್ನುವುದಕ್ಕೆ ಕುಮಾರಸ್ವಾಮಿ ಅವರ ಮನೆಯ ಕರೆಂಟ್‌ ವೈರ್‌ ಕೊಟ್ಟ ಶಾಕೇ ಸಾಕ್ಷಿ. ರಾಜಕೀಯವಾಗಿ ಅವರನ್ನು ಎದುರಿಸಲಾಗದ ನರಸತ್ತ ಪಕ್ಷ, ಕರೆಂಟ್ ವೈರ್ ಹಿಡಿದು 'ಶಕುನಿ ಯುದ್ಧ' ಆರಂಭಿಸಿದೆ. ಯುದ್ಧಕ್ಕೆ ನಾವೂ ಸಿದ್ಧರಿದ್ದೇವೆ.

ಕಂಬದ ಕರೆಂಟಿನ ಬಗ್ಗೆ ಕಾಂಗ್ರೆಸ್ ಈ ಪರಿ  ಕೈಕೈ ಹಿಚುಕಿಕೊಳ್ಳುತ್ತಿರುವುದನ್ನು ನೋಡಿದರೆ ವೈರಿನಲ್ಲಿಯೂ ನರಿ ರಾಜಕೀಯ  ದಿಟವೆನಿಸುತ್ತದೆ. ಕುಮಾರಸ್ವಾಮಿ ಅವರ ಒಂದೇ ಒಂದು ಕ್ಷಿಪಣಿ ಸಾಕು, ಕಾಂಗ್ರೆಸ್ ‌'ರಕ್ಕಸ ರಿಪಬ್ಲಿಕ್' ಉಡೀಸ್ ಆಗಲಿಕ್ಕೆ. ಶಿಖಂಡಿ ಅಂತ್ಯಕಾಲ ಆರಂಭವಾಗಿದೆ ಎಂದು ಜೆಡಿಎಸ್ ಕಿಡಿಕಾರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್