ಸಂಗ್ರಹ ಚಿತ್ರ 
ರಾಜಕೀಯ

ನಕಲಿ ವೋಟರ್ ಐಡಿ ಪ್ರಕರಣ; ಸಚಿವ ಭೈರತಿ ಸುರೇಶ್ ರಾಜೀನಾಮೆಗೆ ಬಿಜೆಪಿ ಆಗ್ರಹ

ನಕಲಿ ವೋಟರ್ ಐಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಭೈರತಿ ಸುರೇಶ್ ಅವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.

ಬೆಂಗಳೂರು: ನಕಲಿ ವೋಟರ್ ಐಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಭೈರತಿ ಸುರೇಶ್ ಅವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಸಂವಿಧಾನ ವಿರೋಧಿ ಕೆಲಸವನ್ನು ಈ ಸರ್ಕಾರದ ಸಚಿವರು ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಭೈರತಿ ಸುರೇಶ್. ಸುರೇಶ್ ಗೆಲ್ಲೋಕೆ ನಕಲಿ ವೋಟರ್ ಐಡಿ ಮಾಡಿದ್ದಾರೆ. ಮೌನೇಶ್ ಎಂಬ ಸುರೇಶ್ ಆಪ್ತರನ್ನ ಸಿಸಿಬಿ ಬಂಧನ ಮಾಡಿದೆ. ಅಕ್ರಮವಾಗಿ ಐಡಿ ಸಂಗ್ರಹ, ಆಧಾರ್ ಕಾರ್ಡ್ ಸೃಷ್ಟಿ ಮಾಡೋ ಕೆಲಸ ಮೌನೇಶ್ ಮಾಡಿದ್ದಾನೆ. ಇದಕ್ಕೆ ಕಾರಣ ಸಚಿವರು. ಹೀಗಾಗಿ ಭೈರತಿ ಸುರೇಶ್ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಇದೊಂದು ಅಕ್ರಮ. ಇದೊಂದು ಸಂವಿಧಾನ ವಿರೋಧಿ ಚಟುವಟಿಕೆ. ಸಿಸಿಬಿ ತನಿಖೆ ಸರಿಯಾಗಿ ಆಗಬೇಕು. ಎಷ್ಟು ನಕಲಿ ವೋಟರ್ ಐಡಿ ಮಾಡಿದರು? ಎಷ್ಟು ನಕಲಿ ಆಧಾರ್ ಮಾಡಿದ್ದಾರೆ ಅನ್ನೋ ಸಂಪೂರ್ಣ ತನಿಖೆ ಆಗಬೇಕು. ತನಿಖೆ ಆಗಿ ವರದಿ ಬರುವ ಹೊತ್ತಿಗೆ ಸಚಿವ ಭೈರತಿ ಸುರೇಶ್ ರಾಜೀನಾಮೆ ಕೊಡಬೇಕು. ಯಾವುದೇ ಪ್ರಭಾವ ಬೀರದೆ ತನಿಖೆ ಆಗಬೇಕಾದರೆ ಭೈರತಿ ಸುರೇಶ್ ರಾಜೀನಾಮೆ ಕೊಡಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಧಮ್ ಇದ್ರೆ ನನ್ನ ಕೊಲ್ಲಿ.. ಕನಿಷ್ಠ 1 ಸಾವಿರ ಕ್ಷಿಪಣಿಗಳು ಲೋಡ್ ಆಗಿ ನಿಂತಿವೆ': ಇರಾನ್ ಗೆ Donald Trump ಎಚ್ಚರಿಕೆ

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ. ವ್ಯಾಪಾರದ ಗುರಿ

'ಮಟನ್ ಹಾಕ್ತೀವಿ ಅಂತ ಹೇಳಿ ಚಿಕನ್ ಕೊಟ್ರು': ರಣಾಂಗಣವಾಯ್ತು 'ನಿಕಾಹ್ ಸಮಾರಂಭ', 12 ಮಂದಿಗೆ ಗಾಯ, Video

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಬೆಂಗಳೂರು: ತಾಯಿ, ಅಜ್ಜಿ, ಮಾವನನ್ನು ಕೊಂದು ಆರೋಪಿ ಆತ್ಮಹತ್ಯೆ!