ಬಿಜೆಪಿ ಮಾಡಿರುವ ಟ್ವೀಟ್ 
ರಾಜಕೀಯ

ಸಿಎಂ-ಡಿಸಿಎಂ ವೈಯಕ್ತಿಕ ಹಿತಾಸಕ್ತಿಯ ಮೇಲಾಟದಲ್ಲಿ ರಾಜ್ಯದ ರೈತರ ಬದುಕು ದುರ್ಬರ!

ತಮ್ಮ ಪ್ರಚಾರ ಕಾಪಾಡಿಕೊಳ್ಳಲು ಆಗಾಗ ರಾಷ್ಟ್ರಭಕ್ತ ಸಂಘಟನೆಗಳನ್ನು ಎಳೆದು ತರಬೇಕಾಗಿರುವ ದಯನೀಯ ಸ್ಥಿತಿಗೆ ಇವರು ತಲುಪಿಬಿಟ್ಟರಲ್ಲಾ! ಛೇ ಕಾಲೆಳೆದಿದೆ.

ಬೆಂಗಳೂರು: ಸ್ವಂತಕ್ಕೆ ಮತ್ತು ಕುಟುಂಬಕ್ಕಾಗಿ ಮಾತ್ರವೇ "ದುಡಿಯುತ್ತಾ", ಅಂಥದ್ದೇ ಪಕ್ಷದ‌ ಸಂಸ್ಕಾರ ಪಡೆದ ಪ್ರಿಯಾಂಕ್ ಖರ್ಗೆಯವರಿಗೆ ಇತರರನ್ನು ಉದ್ಧಾರ ಮಾಡುವುದು ಬಿಡಿ, ಅದನ್ನು ಕಾಣುವುದೂ ಸಾಧ್ಯವಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ತಮ್ಮ ಪ್ರಚಾರ ಕಾಪಾಡಿಕೊಳ್ಳಲು ಆಗಾಗ ರಾಷ್ಟ್ರಭಕ್ತ ಸಂಘಟನೆಗಳನ್ನು ಎಳೆದು ತರಬೇಕಾಗಿರುವ ದಯನೀಯ ಸ್ಥಿತಿಗೆ ಇವರು ತಲುಪಿಬಿಟ್ಟರಲ್ಲಾ! ಛೇ ಕಾಲೆಳೆದಿದೆ. ಸಿಎಂ-ಡಿಸಿಎಂ ಅವರ ವೈಯಕ್ತಿಕ ಹಿತಾಸಕ್ತಿಯ ಮೇಲಾಟದಲ್ಲಿ ರಾಜ್ಯದ ರೈತರ ಬದುಕು ದುರ್ಬರವಾಗುತ್ತಿದೆ. ರಾಜ್ಯ ಕಾಂಗ್ರೆಸ್ ನಲ್ಲಿ ತಾರಕಕ್ಕೇರಿದ ಬಣಗಳ ಜಗಳ..!

ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು..!
ಜಿ.ಪರಮೇಶ್ವರ್
ಡಿ.ಕೆ.ಶಿವಕುಮಾರ್‌
ಮಲ್ಲಿಕಾರ್ಜುನ್‌ ಖರ್ಗೆ
ಎಂ.ಬಿ.ಪಾಟೀಲ್

ಚುನಾವಣೆ ನಂತರ ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು..!
ಹೆಚ್.ಸಿ.ಮಹದೇವಪ್ಪ
ಬಿ.ಕೆ.ಹರಿಪ್ರಸಾದ್‌
ಕೆ.ಎನ್.ರಾಜಣ್ಣ
ಸತೀಶ್‌ ಜಾರಕಿಹೊಳಿ
ಜಮೀರ್ ಅಹ್ಮದ್‌ ಖಾನ್ ಎಂದು ಬಿಜೆಪಿ ಟೀಕಿಸಿದೆ.
‌
ರಾಜ್ಯದಲ್ಲಿ ಬರಗಾಲ ಬಂದಿದೆ ಕುಡಿಯಲು ನೀರಿಲ್ಲ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದ್ಯಾವುದರ ಚಿಂತೆ ಇಲ್ಲದ #ATMSarkara ಸಂತೆಯಲ್ಲಿ ಬೀದಿ ಜಗಳ ಮಾಡುತ್ತಾ ಕರ್ನಾಟಕವನ್ನು ಬಲಿಕೊಡುತ್ತಿದೆ ಎಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

ಮೈಸೂರು: ಕುಸಿದು ಬಿದ್ದ ದೀಪಾಲಂಕಾರದ ಬೃಹತ್ ಕಟೌಟ್; ವಿದ್ಯಾರ್ಥಿಗಳು ಪಾರು, ದಸರಾ ಆರಂಭದಲ್ಲೇ ತಪ್ಪಿದ ದೊಡ್ಡ ದುರಂತ!

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿ ಹೊಡೆದು ಯುವತಿ ಸ್ಥಳದಲ್ಲೇ ಸಾವು!

'ಕಮಾಲ್ ಕರ್ ದಿಯಾ ಪೈಲಟ್ ಜಿ, ನಿಮ್ಮ ಧೈರ್ಯಕ್ಕೆ ನಮ್ಮ ಸೆಲ್ಯೂಟ್': ಕ್ಯಾಪ್ಟನ್ ಸ್ಮಿತ್ ಮಚ್ಚರ್'ರನ್ನು ಹಾಡಿ ಹೊಗಳಿದ ಸಲ್ಮಾನ್ ಖಾನ್!

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್