ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಶುಕ್ರವಾರ ಉಡುಪಿಯ ಸದಾನಂದ ನಾಯಕ್ ಅವರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.  
ರಾಜಕೀಯ

ಕೆ ಎಸ್ ಈಶ್ವರಪ್ಪ ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ಮೋದಿ ಬಂದಿದ್ರಾ? ಎಲ್ಲರ ಗಮನ ಸೆಳೆದ ಈ ವ್ಯಕ್ತಿ ಯಾರು?!

ಅರೆ ಇದೇನಿದು, ಈಶ್ವರಪ್ಪನವರ ಪಕ್ಕದಲ್ಲಿ ಪ್ರಧಾನಿ ಮೋದಿ ನಿಂತಿದ್ದಾರಲ್ಲ ಎಂದು ಒಂದು ಕ್ಷಣ ಅನಿಸಬಹುದು. ಆದರೆ ಇದು ನಿನ್ನೆ ಶುಕ್ರವಾರ ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಬೆಂಬಲ ನೀಡಲು ಬಂದ ಮೋದಿಯವರಂತೆ ಕಾಣುವ ವ್ಯಕ್ತಿ.

ಶಿವಮೊಗ್ಗ: ಅರೆ ಇದೇನಿದು, ಈಶ್ವರಪ್ಪನವರ ಪಕ್ಕದಲ್ಲಿ ಪ್ರಧಾನಿ ಮೋದಿ ನಿಂತಿದ್ದಾರಲ್ಲ ಎಂದು ಒಂದು ಕ್ಷಣ ಅನಿಸಬಹುದು. ಆದರೆ ಇದು ನಿನ್ನೆ ಶುಕ್ರವಾರ ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಬೆಂಬಲ ನೀಡಲು ಬಂದ ಮೋದಿಯವರಂತೆ ಕಾಣುವ ವ್ಯಕ್ತಿ.

ಬಿಜೆಪಿಯಿಂದ ಬಂಡಾಯವೆದ್ದು ಹಾಲಿ ಸಂಸದ ಬಿ ವೈ ರಾಘವೇಂದ್ರ ಎದುರು ಸ್ಪರ್ಧಿಸುತ್ತಿರುವ ಈಶ್ವರಪ್ಪನವರು ತಮ್ಮ ಪ್ರಚಾರಕ್ಕೆ ಪ್ರಧಾನಿ ಮೋದಿ ಫೋಟೋವನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷ ದೂರು ನೀಡಿದ್ದು ಪ್ರಕರಣ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದೆ.

ಹೀಗಿರುವಾಗಲೇ ಅವರು ನಿನ್ನೆ ನಾಮಪತ್ರ ಸಲ್ಲಿಸುವ ವೇಳೆ ಮೋದಿಯಂತಹ ವ್ಯಕ್ತಿಯನ್ನು ಕರೆತಂದು ಸಾವಿರಾರು ಬೆಂಬಲಿಗರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಪ್ರಧಾನಿ ಮೋದಿಯವರಂತೆ ಕಾಣುವ ಸದಾನಂದ ನಾಯಕ್ ಉಡುಪಿ ಜಿಲ್ಲೆಯ ಹಿರಿಯಡ್ಕ ಪಟ್ಟಣದ ಬೊಮ್ಮರಬೆಟ್ಟು ಗ್ರಾಮದವರು. ಅಡುಗೆ ಕೆಲಸ ಮಾಡುವ ಇವರು ಶಾಲೆ ಬಿಟ್ಟ ನಂತರ ಕೆಲಸ ಮಾಡಲು ಆರಂಭಿಸಿದರು. ಶಿವಮೊಗ್ಗ ಲೋಕಸಭಾ ಸ್ಥಾನ ಚುನಾವಣೆಯಲ್ಲಿ ಈಶ್ವರಪ್ಪ ಅವರನ್ನು ಬೆಂಬಲಿಸುತ್ತಿರುವ ರಾಷ್ಟ್ರಭಕ್ತರ ಬಳಗದ ವತಿಯಿಂದ ನಡೆದ ಬೃಹತ್ ಮೆರವಣಿಗೆಯಲ್ಲಿ ನಾಯಕ್ ಭಾಗವಹಿಸಿದ್ದರು.

ಉಡುಪಿ ಜಿಲ್ಲೆಯ ವಿವಿಧೆಡೆಯಿಂದ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದಿಂದಲೂ ಅಪಾರ ಸಂಖ್ಯೆಯ ಬೆಂಬಲಿಗರು ನಿನ್ನೆ ಈಶ್ವರಪ್ಪನವರ ಜೊತೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸದಾನಂದ ನಾಯಕ್ ನಿನ್ನೆ ಶಿವಮೊಗ್ಗ ನಗರದಲ್ಲಿ ಈಶ್ವರಪ್ಪ ಅವರೊಂದಿಗೆ ಮೆರವಣಿಗೆ ನಡೆಸುತ್ತಿದ್ದ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದು ಹೈಲೈಟ್ ಆದರು. ನೆರೆದಿದ್ದ ಜನರತ್ತ ಕೈ ಬೀಸಿದ ನಾಯಕ್, ಕೈಮುಗಿದು ಈಶ್ವರಪ್ಪ ಅವರಿಗೆ ಬೆಂಬಲ ಕೋರಿದರು. ಈಶ್ವರಪ್ಪ ಪರ ಘೋಷಣೆಗಳನ್ನು ಕೂಗಿದ ಅವರ ಬೆಂಬಲಿಗರು ಮೆರವಣಿಗೆಯಲ್ಲಿ ಮೋದಿ ಭಾವಚಿತ್ರವಿರುವ ಧ್ವಜಗಳನ್ನು ಹಿಡಿದು ಸಾಗಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೆದ್ದ ನಂತರ ನಾನು ದೆಹಲಿಗೆ ತೆರಳಿ ಪ್ರಧಾನಿ ಮೋದಿಯವರ ಆಶೀರ್ವಾದ ಪಡೆದು ಅವರನ್ನು ಬೆಂಬಲಿಸುತ್ತೇನೆ ಎಂದು ನಾಮಪತ್ರ ಸಲ್ಲಿಸಿದ ನಂತರ ಈಶ್ವರಪ್ಪ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT