ಸಾಂದರ್ಭಿಕ ಚಿತ್ರ  
ರಾಜಕೀಯ

ಲೋಕಸಭೆ ಚುನಾವಣೆ: ಕೇರಳ ಗಡಿಯ ಈ ಗ್ರಾಮಗಳಲ್ಲಿ ಚುನಾವಣೆ ಸೂಚನೆಯೇ ಕಾಣುತ್ತಿಲ್ಲ!

ಇಂಡಿಯಾ ಮೈತ್ರಿಕೂಟದ ಸಿಪಿಐ ಮತ್ತು ಬಿಜೆಪಿ ಅಭ್ಯರ್ಥಿ ಮುಂದೆ ಕೇರಳದ ವಯನಾಡ್ ನಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವುದರಿಂದ ರಾಜಕೀಯವಾಗಿ ಒಂದೆಡೆ ತೀವ್ರ ಜಿದ್ದಾಜಿದ್ದಿಯಿದ್ದರೆ. ಕರ್ನಾಟಕ-ಕೇರಳ ಗಡಿಭಾಗ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ.

ಬಾವಲಿ (ಕರ್ನಾಟಕ-ಕೇರಳ ಗಡಿಭಾಗ) : ಇಂಡಿಯಾ ಮೈತ್ರಿಕೂಟದ ಸಿಪಿಐ ಮತ್ತು ಬಿಜೆಪಿ ಅಭ್ಯರ್ಥಿ ಮುಂದೆ ಕೇರಳದ ವಯನಾಡ್ ನಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವುದರಿಂದ ರಾಜಕೀಯವಾಗಿ ಒಂದೆಡೆ ತೀವ್ರ ಜಿದ್ದಾಜಿದ್ದಿಯಿದ್ದರೆ. ಕರ್ನಾಟಕ-ಕೇರಳ ಗಡಿಭಾಗ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ.

ಕರ್ನಾಟಕದ ಬೇರೆಲ್ಲಾ ಕ್ಷೇತ್ರಗಳಲ್ಲಿ ಚುನಾವಣಾ ಕಾವು ರಂಗೇರಿದ್ದರೆ ಈ ಗ್ರಾಮದ ಜನತೆಗೆ ಚುನಾವಣೆ ದಿನಾಂಕ ಯಾವಾಗ ಎಂದು ಸಹ ಗೊತ್ತಿಲ್ಲ. ಚಾಮರಾಜನಗರ ಮತ್ತು ವಯನಾಡು ಸೀಟುಗಳಿಗೆ ಒಂದೇ ದಿನ ಚುನಾವಣೆ ನಡೆಯುತ್ತಿದೆ ಎಂದು ಈ ಗ್ರಾಮದ ಕೆಲವು ವಿದ್ಯಾವಂತರಿಗೆ ಮಾತ್ರ ಗೊತ್ತಿದೆ. ಆದರೆ, ತಮ್ಮ ಕ್ಷೇತ್ರದಲ್ಲಿ ರೋಡ್ ಶೋ ನಡೆಸುತ್ತಿರುವ ರಾಹುಲ್ ಗಾಂಧಿ ಅವರ ಚುನಾವಣಾ ಕಾರ್ಯಕ್ರಮಗಳ ಬಗ್ಗೆ ಈ ಗ್ರಾಮಸ್ಥರಿಗೆ ತಿಳಿದಿದೆ. ಈ ಗ್ರಾಮಗಳಾದ್ಯಂತ ಭಿತ್ತಿಪತ್ರಗಳು ಕಾಣಿಸಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಇಲ್ಲಿನ ಪಕ್ಷದ ಮುಖಂಡರು ನಿವಾಸಿಗಳನ್ನು ಕೋರಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (TNIE) ಸಿಬ್ಬಂದಿ ಡಿಬಿ ಕುಪ್ಪೆ, ಬಾವಲಿ, ಹೊಸಹಳ್ಳಿ, ಕಡೇರ್ ಗದ್ದೆ, ಮೂಲೆಹೊಳೆ, ಹುಂಡ್ರೆ, ಆನೆಮಾಳ ಮತ್ತು ಇತರ ಕುಗ್ರಾಮಗಳ ಮೂಲಕ ಸುತ್ತಾಡಿದಾಗ ಜನರ ಮನಸ್ಥಿತಿ ಕಂಡು ಅಚ್ಚರಿಯಾಯಿತು.

ಇಲ್ಲಿನ ಹೆಚ್ಚಿನ ಗ್ರಾಮಸ್ಥರು ಕೇರಳದ ಕಟಿಯಾ, ಪೆರಿಕಲ್ಲೂರ್, ಪುಲ್ಪಲ್ಲಿ ಮತ್ತು ಇತರ ಸ್ಥಳಗಳಲ್ಲಿ ಎಸ್ಟೇಟ್ ಮತ್ತು ಹೊಲಗಳಲ್ಲಿ ಕೆಲಸ ಮಾಡಲು ನದಿ-ಗಡಿ ದಾಟಿ ಹೋಗುತ್ತಿದ್ದಾರೆ. ಚಾಮರಾಜನಗರಕ್ಕಿಂತ ವಯನಾಡಿನಲ್ಲಿ ತಮ್ಮ ರಾಜಕೀಯ ಕದನದ ಬಗ್ಗೆ ಗ್ರಾಮಸ್ಥರಿಗೆ ಹೆಚ್ಚು ಕುತೂಹಲವಿದೆ. ಅನೇಕ ನಿವಾಸಿಗಳಿಗೆ ಪಕ್ಷದ ಚಿಹ್ನೆಗಳ ಪರಿಚಯವಿದ್ದರೂ, ಅಭ್ಯರ್ಥಿಗಳು ಯಾರೆಂದು ತಿಳಿದಿಲ್ಲ. “ನಾನು ಸ್ಥಳೀಯ ಶಾಸಕ ಅನಿಲ್ ಚಿಕ್ಕಮಡು ಅವರ ಪೋಸ್ಟರ್ ನೋಡಿದೆ. ಚುನಾವಣೆಯಿರುವುದರಿಂದ ಪೋಸ್ಟರ್ ಹಾಕಿದ್ದಾರೆ ಎಂದು ಗೊತ್ತಾಯಿತು'' ಎನ್ನುತ್ತಾರೆ ಹೊಸೂರಿನ ಮಂಜುಳಾ.

ಡಿ.ಬಿ.ಕುಪ್ಪೆಯ ಅಮೀದ್, ಬಾವಲಿ ಗಡಿಭಾಗದಲ್ಲಿ ವಾಹನಗಳ ತಪಾಸಣೆಗೆ ಚೆಕ್‌ಪೋಸ್ಟ್ ಬಂದಿರುವುದರಿಂದ ಚುನಾವಣೆ ಸಮೀಪಿಸುತ್ತಿದೆ ಎಂದು ಗೊತ್ತಾಯಿತು. ಇಲ್ಲಿಯ ನಿವಾಸಿಗಳು ಇನ್ನೂ ಚುನಾವಣೆಯ ಕಾವು ಏರಿಲ್ಲ. ಬಂಟಿಂಗ್ಸ್ ಮತ್ತು ಪೋಸ್ಟರ್‌ಗಳ ಭರಾಟೆಯಿಲ್ಲದಿರುವುದರಿಂದ ಅಷ್ಟೊಂದು ಜನರಲ್ಲಿ ಉಮೇದು ಕಾಣುತ್ತಿಲ್ಲ. ಆದರೆ ವಯನಾಡಿನಲ್ಲಿ ಹಾಗಲ್ಲ, ಅಲ್ಲಿ ಅಭ್ಯರ್ಥಿಗಳ ದೊಡ್ಡ ಕಟೌಟ್‌ಗಳು ಬಂದಿವೆ ಎನ್ನುತ್ತಾರೆ.

ಕಲ್ಪೆಟ್ಟಾ ಮತ್ತು ಸುಲ್ತಾನ್ ಬತ್ತೇರಿಯಲ್ಲಿ ಎರಡು ಬಾರಿ ಮಳೆ ಸುರಿದಿರುವುದರಿಂದ ಬರದ ಆತಂಕ ಕಡಿಮೆಯಾಗಿದ್ದು, ರಾಹುಲ್ ಗಾಂಧಿ ರೋಡ್ ಶೋನಲ್ಲಿ ಪಾಲ್ಗೊಳ್ಳಲು ಜನರು ಉತ್ಸುಕರಾಗಿದ್ದಾರೆ, ಪ್ರಿಯಾಂಕಾ ವಾದ್ರಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಲಿದ್ದಾರೆ.

ಈ ಭಾಗಗಳಲ್ಲಿ ಮತದಾರರು ಉತ್ತಮ ಮತದಾನವಾಗುವಂತೆ ಮಾಡಲು ಅಧಿಕಾರಿಗಳು ಮತ್ತು ಪಂಚಾಯಿತಿಗಳು ಪ್ರಚಾರ ಮಾಡಬೇಕೆಂದು ಗ್ರಾಮಸ್ಥರು ಬಯಸುತ್ತಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಭ್ಯರ್ಥಿಗಳು ಪ್ರಚಾರ ಮಾಡುತ್ತಿರುವಾಗ ನಮ್ಮ ಗ್ರಾಮಗಳನ್ನು ಮಾತ್ರ ಏಕೆ ನಿರ್ಲಕ್ಷಿಸಲಾಗಿದೆ? ಕನಿಷ್ಠ ಪಕ್ಷ ಯಾರು ಸ್ಪರ್ಧಿಸುತ್ತಾರೆ ಎಂಬುದು ಮತದಾರರಿಗೆ ತಿಳಿದಿರಬೇಕಲ್ಲವೇ ಎಂದು ಮತದಾರರು ಕೇಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT