ಮನ್ಸೂರ್ ಖಾನ್ 
ರಾಜಕೀಯ

ಕರ್ನಾಟಕ ಲೋಕಸಭೆ ಚುನಾವಣೆ: ಈ ಬಾರಿ ಲೋಕಸಭೆಗೆ ಆಯ್ಕೆಯಾಗುವರೇ ಅಲ್ಪಸಂಖ್ಯಾತ ಅಭ್ಯರ್ಥಿ!

2008 ರಲ್ಲಿ ಕ್ಷೇತ್ರಗಳ ಮರು ವಿಂಗಡನೆಯಾದ ನಂತರ ಕರ್ನಾಟಕದಿಂದ ಲೋಕಸಭೆಗೆ ಅಲ್ಪಸಂಖ್ಯಾತ ಸಮುದಾಯದ ಯಾವುದೇ ಸದಸ್ಯರು ಆಯ್ಕೆಯಾಗಿಲ್ಲ.

ಬೆಂಗಳೂರು: 2008 ರಲ್ಲಿ ಕ್ಷೇತ್ರಗಳ ಮರು ವಿಂಗಡನೆಯಾದ ನಂತರ ಕರ್ನಾಟಕದಿಂದ ಲೋಕಸಭೆಗೆ ಅಲ್ಪಸಂಖ್ಯಾತ ಸಮುದಾಯದ ಯಾವುದೇ ಸದಸ್ಯರು ಆಯ್ಕೆಯಾಗಿಲ್ಲ. 2009, 2014 ಮತ್ತು 2019 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಅಲ್ಪಸಂಖ್ಯಾತ ಅಭ್ಯರ್ಥಿಗಳು ಆಯ್ಕೆಯಾಗಲಿಲ್ಲ. 2004 ರಲ್ಲಿ ಗುಲ್ಬರ್ಗವನ್ನು ಪ್ರತಿನಿಧಿಸಿದ್ದ ಇಕ್ಬಾಲ್ ಅಹ್ಮದ್ ಸರಡಗಿ ಸಮುದಾಯದ ಕೊನೆಯ ಪ್ರತಿನಿಧಿಯಾಗಿದ್ದರು. ಇದು ಡಿಲಿಮಿಟೇಶನ್ ಮೊದಲು ನಡೆದ ಚುನಾವಣೆಯಾಗಿತ್ತು.

ಪ್ರಸ್ತುತ ಸನ್ನಿವೇಶದಲ್ಲಿ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಕೇವಲ ಒಬ್ಬ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ರಾಜ್ಯದ ಮತದಾರರಲ್ಲಿ ಅಲ್ಪಸಂಖ್ಯಾತರು ಶೇ 16ರಷ್ಟು ಇರುವಾಗಲೂ ಇದೇ ಪರಿಸ್ಥಿತಿ.

ಮಾಜಿ ಸಂಸದ ಮತ್ತು ರಾಜ್ಯಸಭೆಯ ಮಾಜಿ ಉಪಸಭಾಪತಿ ರೆಹಮಾನ್ ಖಾನ್ ಅವರು ಅಲ್ಪಸಂಖ್ಯಾತರ ಕಳಪೆ ಪ್ರಾತಿನಿಧ್ಯವು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ, ಆದರೆ ಇಡೀ ದೇಶದಲ್ಲಿ ಈ ಸಮಸ್ಯೆಯಿದೆ ಎಂದು ಹೇಳಿದ್ದರು. ದೇಶದಲ್ಲಿ ಸುಮಾರು 200 ಮಿಲಿಯನ್ ಮುಸ್ಲಿಮರಿದ್ದಾರೆ ಮತ್ತು ಮುಖ್ಯ ಪಕ್ಷಗಳು ಅವರಲ್ಲಿ ಕೆಲವರಿಗೆ ಮಾತ್ರ ಟಿಕೆಟ್ ನೀಡಿವೆ. ಕರ್ನಾಟಕದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್‌ನಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಮನ್ಸೂರ್ ಖಾನ್ ಸ್ಪರ್ಧಿಸುತ್ತಿರುವ ಏಕೈಕ ಅಲ್ಪಸಂಖ್ಯಾತ ಅಭ್ಯರ್ಥಿಯಾಗಿದ್ದಾರೆ.

ಸಂವಿಧಾನದ ಪೀಠಿಕೆಯು ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಮಾನತೆಯನ್ನು ಉಲ್ಲೇಖಿಸುತ್ತದೆ. ರಾಜ್ಯದಲ್ಲಿ ಶೇಕಡಾ 15-16 ರ ಜನಸಂಖ್ಯೆಗೆ ಕೇವಲ ಒಂದು ಅಲ್ಪಸಂಖ್ಯಾತ ಟಿಕೆಟ್ ನೀಡಿರುವುದು ಸಂವಿಧಾನದ ಪೀಠಿಕೆಗೆ ತೋರಿದ ಅಗೌರವ ಎಂದು ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದ್ದಾರೆ.

ನ್ಯಾಯಯುತ ಮತ್ತು ಸಮಾನ ಪ್ರಾತಿನಿಧ್ಯವಿಲ್ಲದೆ, ನಿಜವಾದ ನ್ಯಾಯವನ್ನು ಸಾಧಿಸುವುದು ಕಷ್ಟ. ಸಾಂವಿಧಾನಿಕವಾಗಿ, ಯಾರೂ ಪ್ರಾತಿನಿಧ್ಯದಿಂದ ವಂಚಿತರಾಗಬಾರದು. ಭವಿಷ್ಯದಲ್ಲಿ, ಈ ಅಂತರವನ್ನು ನಿವಾರಿಸಲಾಗುವುದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಅಲ್ಪಸಂಖ್ಯಾತರು ರಾಜಕೀಯ ಸಾಧನವಾಗಿದ್ದಾರೆ. ಅಧಿಕಾರದಲ್ಲಿರುವ ಪಕ್ಷದೊಂದಿಗೆ ಸಮಸ್ಯೆಯನ್ನು ಪ್ರಸ್ತಾಪಿಸಲು ಹಿಂಜರಿಯುತ್ತಾರೆ. ಸಮುದಾಯವು ಸಂಖ್ಯೆಯಲ್ಲಿ ಚಿಕ್ಕದಾಗಿದೆ ಅಥವಾ ಗಾತ್ರದಲ್ಲಿ ನಗಣ್ಯವಾಗಿದೆ ಎಂದಲ್ಲ. ಮುಸ್ಲಿಮರು ಸುಮಾರು 30 ವಿಧಾನಸಭಾ ಕ್ಷೇತ್ರಗಳಲ್ಲಿ ಅಂದರೆ ಸುಮಾರು ಮೂರು ಅಥವಾ ನಾಲ್ಕು ಸಂಸತ್ ಗಳಲ್ಲಿ ಫಲಿತಾಂಶ ಮುರಿಯಬಹುದು ಎಂದು ಮಾಜಿ ವಿಸಿ ಪ್ರೊ.ಮುಜಾಫರ್ ಅಸಾದಿ ಹೇಳಿದ್ದಾರೆ.

ಸಂಸದೀಯ ವ್ಯವಸ್ಥೆಯ ಬಗ್ಗೆ ಪಾಠ ಮಾಡದ ಕಾರಣ ಸಮುದಾಯದ ನಾಯಕತ್ವಕ್ಕೆ ದೂರದೃಷ್ಟಿ ಇಲ್ಲದಂತಾಗಿದೆ. ಪ್ರಜಾಪ್ರಭುತ್ವದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಒಂದು ರೀತಿಯಲ್ಲಿ ಹತ್ತಿಕ್ಕಲಾಗಿದೆ ಎಂದು ಭಾಸವಾಗುತ್ತಿದೆ. ಪ್ರಬಲ ನಾಯಕತ್ವ ಹೊರಹೊಮ್ಮಲು ಅವಕಾಶ ನೀಡುತ್ತಿಲ್ಲ ಎಂದಿದ್ದಾರೆ. ಜಾಮಿಯಾ ಮಸೀದಿ ಮುಖ್ಯ ಇಮಾಮ್ ಮೌಲಾನಾ ಇಮ್ರಾನ್ ರಶಾದಿ ಮಾತನಾಡಿ, ಹೆಚ್ಚಿನ ರಾಜಕೀಯ ಪ್ರಾತಿನಿಧ್ಯವನ್ನು ಪಡೆಯಲು ವಂಚಿತ ವರ್ಗಗಳು ಮತ್ತು ಅಲ್ಪಸಂಖ್ಯಾತರು ಒಗ್ಗೂಡಿ ಕೆಲಸ ಮಾಡಬೇಕಾಗುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರವೇ ಅಡ್ಡಿ ಸೃಷ್ಟಿಸುತ್ತಿದೆ: DCM ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

SCROLL FOR NEXT