ಜನಾರ್ದನ ರೆಡ್ಡಿ - ಸಿದ್ದರಾಮಯ್ಯ  
ರಾಜಕೀಯ

ಸಿದ್ದರಾಮಯ್ಯ ಯಾರ ಬಳಿಯೂ ದುಡ್ಡು ತೆಗೆದುಕೊಳ್ಳಲ್ಲ, ಹೀಗಾಗಿ ಸಿಎಂ ಸ್ಥಾನದಿಂದ ಇಳಿಸಲು ಕಾಯ್ತಿದ್ದಾರೆ: ಜನಾರ್ದನ ರೆಡ್ಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರ ಬಳಿಯೂ ದುಡ್ಡು ತೆಗೆದುಕೊಳ್ಳಲ್ಲ. ಹೀಗಾಗಿ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಯುತ್ತಿದ್ದಾರೆ.

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರ ಬಳಿಯೂ ದುಡ್ಡು ತೆಗೆದುಕೊಳ್ಳಲ್ಲ. ಹೀಗಾಗಿ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಯುತ್ತಿದ್ದಾರೆ ಎಂದು ಮಾಜಿ, ಶಾಸಕ ಜನಾರ್ದನ ರೆಡ್ಡಿ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಕಾಂಗ್ರೆಸ್ ಹೈಕಮಾಂಡ್​ಗೆ ದುಡ್ಡು ಕೊಡುವ ಸಿಎಂ ಬೇಕಿದ್ದಾರೆ. ಹೀಗಾಗಿ ಚುನಾವಣೆ ಮುಗಿದ ತಕ್ಷಣ ಸಿದ್ದರಾಮಯ್ಯರನ್ನು ಅವರನ್ನು ಸಿಎಂ ಸ್ಥಾನದಿಂದ ಇಳಿಸಲು ರಾಹುಲ್ ಗಾಂಧಿ​ ಕಾಯುತ್ತಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಯಾರ ಬಳಿಯೂ ದುಡ್ಡು ತೆಗೆದುಕೊಳ್ಳುವುದಿಲ್ಲ ಮತ್ತು ಯಾರಿಗೂ ಕೂಡ ದುಡ್ಡನ್ನು ಕೊಡಲ್ಲ. ಆದರೆ ಹೈಕಮಾಂಡ್​ಗೆ ದುಡ್ಡು ಕೊಡುವ ಸಿಎಂ ಬೇಕಾಕಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್​ಗೆ ಡಿ.ಕೆ.ಶಿವಕುಮಾರ್​ರಂತಹ ಮುಖ್ಯಮಂತ್ರಿ ಬೇಕಾಗಿದೆ. ಅದಕ್ಕೆ ಡಿ.ಕೆ. ಶಿವಕುಮಾರ್​ರನ್ನು ಸಿಎಂ ಮಾಡಲು ರಾಹುಲ್ ಗಾಂಧಿ ಕಾಯುತ್ತಿದ್ದಾರೆ. ಮಂಡ್ಯ ಸಮಾವೇಶದಲ್ಲಿ ರಾಹುಲ್ ಗಾಂಧಿ ಈ ಸಂದೇಶ ರವಾನೆ ಮಾಡಿದ್ದಾರೆ ಎಂದರು.

ಇದೇ ವೇಳೆ ಸಚಿವ ಶಿವರಾಜ್​ ತಂಗಡಗಿ ವಿರುದ್ಧ ವಾಗ್ದಾಳಿ ನಡೆಸಿದ ಜನಾರ್ದನ ರೆಡ್ಡಿ, ಹೀಗೆ ಮೋದಿ ವಿರುದ್ಧ ಶಿವರಾಜ ತಂಗಡಗಿ ಮಾತನಾಡುತ್ತಿದ್ದರೆ, ಜನ ಅವರನ್ನು ಮಂತ್ರಿ ಅಂತಾ ಕರೆಯಲ್ಲ, ಬದಲಾಗಿ ಕಂತ್ರಿ ಎಂದು ಕರೆಯುತ್ತಾರೆ. ಕಾಂಗ್ರೆಸ್ ಅಂದರೆ ಸಂಸ್ಕೃತಿ ಇಲ್ಲದ ಪಕ್ಷ. ಭಾರತ್ ಮಾತಾ ಕೀ ಜೈ ಎನ್ನಲು ಅಲ್ಲಿ ಪರವಾನಗಿ ಪಡೆಯಬೇಕು ಎಂದು ಕಿಡಿಕಾರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ