ಡಿಕೆ ಸುರೇಶ್ - ಸಿ.ಎನ್.ಮಂಜುನಾಥ್
ಡಿಕೆ ಸುರೇಶ್ - ಸಿ.ಎನ್.ಮಂಜುನಾಥ್ 
ರಾಜಕೀಯ

ಹೈವೋಲ್ಟೇಜ್‌ ಬೆಂಗಳೂರು ಗ್ರಾಮಾಂತರದಲ್ಲಿ ಒಕ್ಕಲಿಗ ಅಭ್ಯರ್ಥಿಗಳಿಂದ ಸಣ್ಣ ಜಾತಿಗಳ ಓಲೈಕೆ

Lingaraj Badiger

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು ರಾಜ್ಯದ ಪ್ರತಿಷ್ಠಿತ ಚುನಾವಣಾ ಕಣಗಳಲ್ಲೊಂದಾಗಿ ಮಾರ್ಪಟ್ಟಿದ್ದು, ಕ್ಷೇತ್ರದಲ್ಲಿ ಬಹುತೇಕ ಒಕ್ಕಲಿಗ ಮತಗಳು ವಿಭಜನೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಸಣ್ಣ ಸಣ್ಣ ಜಾತಿ ಮತ್ತು ಸಮುದಾಯಗಳನ್ನು ಓಲೈಸಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರವನ್ನು ಒಳಗೊಂಡಿರುವ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗರ ಜನಸಂಖ್ಯೆಯ ಶೇ. 36-45 ರಷ್ಟಿದೆ. ಅವರ ನಂತರ ತಿಗಳರು, ಗೊಲ್ಲರು, ಕುಂಬಾರರು, ಕುರುಬರು, ಬೆಸ್ತರು, ಗಾಣಿಗರು, ದೇವಾಂಗ, ವಿಶ್ವಕರ್ಮ, ಭೋವಿಗಳು ಮತ್ತು ಲಂಬಾಣಿಗಳಂತಹ ಸಣ್ಣ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಡಿಕೆ ಸುರೇಶ್(ಕಾಂಗ್ರೆಸ್) ಮತ್ತು ಡಾ.ಸಿ.ಎನ್.ಮಂಜುನಾಥ್ (ಬಿಜೆಪಿ-ಜೆಡಿಎಸ್) ಅವರು ಇಬ್ಬರೂ ಒಕ್ಕಲಿಗರಾಗಿದ್ದು, ಅವರ ಸಮುದಾಯದ ಮತಗಳು ವಿಭಜನೆಯಾಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಅವರ ಪ್ರಚಾರ ತಂಡಗಳು ಸಣ್ಣ ಸಣ್ಣ ಜಾತಿಗಳ ಓಲೈಕೆಗೆ ಮುಂದಾಗಿವೆ.

ಕನಕಪುರ (2.3 ಲಕ್ಷ ಮತದಾರರು), ರಾಮನಗರ (2.15 ಲಕ್ಷ), ಮಾಗಡಿ (2.35 ಲಕ್ಷ), ಕುಣಿಗಲ್ (2 ಲಕ್ಷ) ಮತ್ತು ಚೆನ್ನಪಟ್ಟಣ (2.27 ಲಕ್ಷ) - ಈ ಐದು ಕ್ಷೇತ್ರಗಳು ಮತ್ತು ನಗರ ಕ್ಷೇತ್ರಗಳಲ್ಲಿ ಈ ಸಣ್ಣ ಜಾತಿಗಳು ಮತ್ತು ಸಮುದಾಯಗಳನ್ನು ಸೆಳೆಯಲು ಇಬ್ಬರೂ ಅಭ್ಯರ್ಥಿಗಳು ಶ್ರಮಿಸುತ್ತಿದ್ದಾರೆ.

ಈ ಕ್ಷೇತ್ರಗಳಲ್ಲಿ ಸುಮಾರು ಶೇ. 15-20 ರಷ್ಟು ಎಸ್‌ಸಿ ಬಲ ಮತ್ತು ಎಡ ಸಮುದಾಯಗಳಿವೆ. ಭೋವಿಗಳು ಮತ್ತು ಲಂಬಾಣಿಗಳು ಸಹ ಎಸ್‌ಸಿ ಮತದ ಭಾಗವಾಗಿದ್ದಾರೆ.

ಗ್ರಾಮೀಣ ಮತ್ತು ನಗರ ಕ್ಷೇತ್ರಗಳಲ್ಲಿ ಮುಸ್ಲಿಮರು ಮೂರನೇ ಅತಿದೊಡ್ಡ ಭಾಗವಾಗಿದ್ದಾರೆ. ಮಾಗಡಿಯಲ್ಲಿ ಈ ಸಮುದಾಯದ ಜನಸಂಖ್ಯೆಯು ಕೇವಲ ಶೇ. 6.4 ರಷ್ಟಿದ್ದರೆ, ರಾಮನಗರದಲ್ಲಿ ಇದು 16.24 ರಷ್ಟಿದೆ. ಉತ್ತರ ಕರ್ನಾಟಕದಲ್ಲಿ ಅಸಾಧಾರಣ ಶಕ್ತಿಯಾಗಿರುವ ವೀರಶೈವ-ಲಿಂಗಾಯತರು ಹಳೆ ಮೈಸೂರು ಭಾಗದಲ್ಲಿ ವಿಶೇಷವಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆ ಇದೆ. ಮಾಗಡಿಯಲ್ಲಿ ಶೇ. 6.1 ರಷ್ಟು ಮತ್ತು ರಾಮನಗರದಲ್ಲಿ ಕೇವಲ 2.86 ರಷ್ಟು, ಕನಕಪುರದಲ್ಲಿ ಶೇ. 2.43 ಮತ್ತು ಚನ್ನಪಟ್ಟಣದಲ್ಲಿ ಶೇ. 1 ರಷ್ಟಿದ್ದಾರೆ.

SCROLL FOR NEXT