ಬಸನಗೌಡ ಪಾಟೀಲ್ ಯತ್ನಾಳ್ 
ರಾಜಕೀಯ

ವಿಜಯೇಂದ್ರ ಒಪ್ಪಿಗೆ ಇಲ್ಲದೆ ವಕ್ಫ್ ಹೋರಾಟ: ಸ್ವಕ್ಷೇತ್ರದಲ್ಲೇ ಯತ್ನಾಳ್'ಗೆ ವಿರೋಧ

ಯತ್ನಾಳ್ ಅವರು ವಕ್ಫ್ ವಿಚಾರಕ್ಕಿಂತ ಬಿಜೆಪಿ ವಿರುದ್ಧವೇ ದನಿಯೆತ್ತಿದ್ದಾರೆ. ಯತ್ನಾಳ್ ಅವರ ಎಲ್ಲಾ ಕಾರ್ಯಗಳು ಪಕ್ಷವನ್ನು ಹಾಳು ಮಾಡುತ್ತಿವೆ. ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯವನ್ನೂ ಕುಗ್ಗಿಸುತ್ತಿವೆ.

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಒಪ್ಪಿಗೆ ಇಲ್ಲದೆ ವಕ್ಫ್ ವಿವಾದ ಸಂಬಂಧ ಪ್ರತ್ಯೇಕ ಪ್ರತಿಭಟನೆ ಆರಂಭಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸ್ವಕ್ಷೇತ್ರ ವಿಜಯಪುರದಲ್ಲೇ ವಿರೋಧಗಳು ವ್ಯಕ್ತವಾಗುತ್ತಿವೆ.

ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ ಬಿರಾದಾರ್, ಪಕ್ಷದ ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೋಪಾಲ ಘಟಕಾಂಬ್ಳೆ ಸುದ್ದಿಗೋಷ್ಠಿ ನಡೆಸಿ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಯತ್ನಾಳ್ ಅವರನ್ನು ಬಿಜೆಪಿ ಹೈಕಮಾಂಡ್ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಒತ್ತಾಯಿಸಿದರು.

ಯತ್ನಾಳ್ ಅವರು ವಕ್ಫ್ ವಿಚಾರಕ್ಕಿಂತ ಬಿಜೆಪಿ ವಿರುದ್ಧವೇ ದನಿಯೆತ್ತಿದ್ದಾರೆ. ಯತ್ನಾಳ್ ಅವರ ಎಲ್ಲಾ ಕಾರ್ಯಗಳು ಪಕ್ಷವನ್ನು ಹಾಳು ಮಾಡುತ್ತಿವೆ. ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯವನ್ನೂ ಕುಗ್ಗಿಸುತ್ತಿವೆ, ಇಷ್ಟೆಲ್ಲಾ ಆಗುತ್ತಿದ್ದರೂ ಕಾಂಗ್ರೆಸ್ ವಿರುದ್ಧ ಹೋರಾಡಲು ಪಕ್ಷವನ್ನು ಒಗ್ಗೂಡಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇದೀಗ ಕೇಂದ್ರ ನಾಯಕತ್ವ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಹೇಳಿದರು.

ರಾಜ್ಯಾಧ್ಯಕ್ಷರು, ಕೇಂದ್ರ ನಾಯಕರ ಬೆಂಬಲ ಮತ್ತು ಒಪ್ಪಿಗೆಯೊಂದಿಗೆ ಯತ್ನಾಳ್ ಅವರು ರ್ಯಾಲಿಯನ್ನು ಆಯೋಜಿಸಿದ್ದರೆ ನಮಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಅವರು ಪ್ರತ್ಯೇಕ ಪ್ರತಿಭಟನೆ ನಡೆಸಿದರು. ಇದು ಕರ್ನಾಟಕ ಬಿಜೆಪಿಯಲ್ಲಿ ಒಗ್ಗಟ್ಟು ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪ್ರತಿಪಕ್ಷಗಳಲ್ಲಿ ನೀಡುತ್ತಿದೆ. ಯತ್ನಾಳ್ ಪಕ್ಷಕ್ಕೆ ಅಪಾಯಕಾರಿಯಾಗಿದ್ದಾರೆ. ಹೀಗಾಗಿ ಯತ್ನಾಳ್ ಮತ್ತು ಅವರ ತಂಡದ ವಿರುದ್ಧ ಅಸಮಾಧಾನಗೊಂಡಿರುವ ಪಕ್ಷದ ನೂರಾರು ಕಾರ್ಯಕರ್ತರ ಪರವಾಗಿ ನಾವು ಮಾತನಾಡುತ್ತಿದ್ದೇವೆಂದು ತಿಳಿಸಿದ್ದಾರೆ.

ಕಾಂಗ್ರೆಸ್‌ನಿಂದ ಸುಪಾರಿ ಪಡೆದು ಬಿಜೆಪಿ ಮುಗಿಸಲು ನಡೆಸುತ್ತಿರುವ ಪಕ್ಷ ವಿರೋಧಿ ಜಾಥಾ ವಿಜಯಪುರ ಜಿಲ್ಲೆ ಪ್ರವೇಶ ಮಾಡಿದರೆ ತಡೆವೊಡ್ಡುತ್ತೇವೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT