ವಿಧಾನ ಪರಿಷತ್ 
ರಾಜಕೀಯ

ಪರಿಷತ್ ನಲ್ಲಿ ನಾಲ್ಕು ಸ್ಥಾನ ತೆರವು: ಮೇಲ್ಮನೆಯಲ್ಲಿ ಕಾಂಗ್ರೆಸ್ ಗೆ ಮತ್ತಷ್ಟು ಬಲ; ಮಸೂದೆ ಪಾಸು ಮತ್ತಷ್ಟು ಸಲೀಸು!

ಸಿಪಿ ಯೋಗೇಶ್ವರ್ ಅವರ ಅನಿರೀಕ್ಷಿತ ರಾಜೀನಾಮೆ ಹಿನ್ನೆಲೆಯಲ್ಲಿ ಮೂರನೇ ಖಾಲಿ ಸ್ಥಾನ ಸೃಷ್ಟಿಸಿಯಾಗಿದೆ, ಇದರ ಜೊತೆಗೆ ಜೆಡಿಎಸ್ ಎಂಎಲ್ ಸಿ ತಿಪ್ಪೇಸ್ವಾಮಿ ಕೂಡ ಜನವರಿಯಲ್ಲಿ ನಿವೃತ್ತಿ ಹೊಂದಲಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನ ಪರಿಷತ್ ನಲ್ಲಿ ಅಧಿಕಾರದ ಸಮತೋಲನವನ್ನು ಮರುರೂಪಿಸಲು ಎರಡು ಖಾಲಿ ಸ್ಥಾನಗಳು ಸಿದ್ಧವಾಗಿವೆ. ಕಾಂಗ್ರೆಸ್ ಎಂಎಲ್ ಸಿಗಳಾದ ಪ್ರಕಾಶ್ ರಾಥೋಡ್ ಮತ್ತು ಯುಬಿ ವೆಂಕಟೇಶ್ ಅವರ ನಿವೃತ್ತಿಯಾಗುವ ಹಿನ್ನೆಲೆಯಲ್ಲಿ ಈ ಹುದ್ದೆಗಳು ಖಾಲಿಯಾಗಲಿವೆ. ಈ ಸ್ಥಾನಗಳನ್ನು ಪಡೆಯಲು ಎಲ್ಲಾ ಪಕ್ಷಗಳು ಸಜ್ಜುಗೊಂಡಿವೆ.

ಸಿಪಿ ಯೋಗೇಶ್ವರ್ ಅವರ ಅನಿರೀಕ್ಷಿತ ರಾಜೀನಾಮೆ ಹಿನ್ನೆಲೆಯಲ್ಲಿ ಮೂರನೇ ಖಾಲಿ ಸ್ಥಾನ ಸೃಷ್ಟಿಸಿಯಾಗಿದೆ, ಇದರ ಜೊತೆಗೆ ಜೆಡಿಎಸ್ ಎಂಎಲ್ ಸಿ ತಿಪ್ಪೇಸ್ವಾಮಿ ಕೂಡ ಜನವರಿಯಲ್ಲಿ ನಿವೃತ್ತಿ ಹೊಂದಲಿದ್ದಾರೆ. ಈ ಸನ್ನಿವೇಶದಿಂದ ನಾಮನಿರ್ದೇಶನಗಳ ಮೂಲಕ ಎಲ್ಲಾ ನಾಲ್ಕು ಖಾಲಿ ಸ್ಥಾನಗಳನ್ನು ತುಂಬುವ ಅಪರೂಪದ ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ದೊರೆತಿದೆ. ಮೇ 2023 ರಲ್ಲಿ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಮೇಲ್ಮನೆಯನ್ನು ನಿಯಂತ್ರಿಸಲು ಕಾಂಗ್ರೆಸ್ ಗೆ ಮತ್ತಷ್ಟು ಬಲ ಬಂದಂತಾಗುತ್ತದೆ. ಈ ಬದಲಾವಣೆಯಿಂದ ಮೇಲ್ಮನೆಯಲ್ಲಿ ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನವನ್ನು ದೊರೆಯುವುದು ಮಾತ್ರವಲ್ಲದೆ ಉಪ ಸಭಾಪತಿ ಸ್ಥಾನ ಸಿಗಲು ಅವಕಾಶ ನೀಡುತ್ತದೆ. ರಾಜ್ಯದಲ್ಲಿ ಪಕ್ಷವು ಬಹುಕಾಲದಿಂದ ಬಯಸುತ್ತಿರುವ ಮಹತ್ವದ ಅಧಿಕಾರ ಬದಲಾವಣೆ ಸನ್ನಿಹಿತವಾಗಿದೆ.

ನಾಲ್ಕು ಪ್ರಮುಖ ಖಾಲಿ ಹುದ್ದೆಗಳು ಸಂಭಾವ್ಯ ಅಧಿಕಾರ ಬದಲಾವಣೆಗೆ ಬಾಗಿಲು ತೆರೆದಿರುವುದರಿಂದ ಕಾಂಗ್ರೆಸ್ ಮೇಲ್ಮನೆಯ ಮೇಲೆ ನಿಯಂತ್ರಣ ಸಾಧಿಸುತ್ತದೆ. ಬಹುಮತದೊಂದಿಗೆ, ಕಾಂಗ್ರೆಸ್ ಈ ಅವಧಿಗೆ ಮೊದಲ ಬಾರಿಗೆ ಪರಿಷತ್ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಬಹುದು ಹಾಗೂ ವಿಧಾನಸಭೆಯ ಉಳಿದ ಅವಧಿಗೆ ಮೇಲ್ಮನೆಯಲ್ಲಿ ತನ್ನ ಪ್ರಾಬಲ್ಯವನ್ನು ಭದ್ರಪಡಿಸಿಕೊಳ್ಳಬಹುದು. ಆದರೆ ಪರಿಷತ್ ಅಧ್ಯಕ್ಷ ಮತ್ತು ಉಪ ಅಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈ ಬಹುಮತವು ನಮಗೆ ದೊಡ್ಡ ಪರಿಹಾರವಾಗಿದೆ. ಹಿಂದೆ, ನಮಗೆ ಸಂಖ್ಯಾಬಲದ ಕೊರತೆ ಇದ್ದಾಗ, ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ನಮ್ಮ ಪ್ರಮುಖ ಮಸೂದೆಗಳನ್ನು ತಡೆಹಿಡಿಯುತ್ತಿದ್ದವು ಎಂದು ಮೇಲ್ಮನೆಯ ಕಾಂಗ್ರೆಸ್ ನಾಯಕ ಎನ್‌ಎಸ್ ಬೋಸ್ ರಾಜು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಗೆ ತಿಳಿಸಿದ್ದಾರೆ.

ಪ್ರಸ್ತುತ, 75 ಸದಸ್ಯ ಬಲದ ಮೇಲ್ಮನೆಯಲ್ಲಿ ಕಾಂಗ್ರೆಸ್ 36 ಸ್ಥಾನಗಳನ್ನು ಹೊಂದಿದ್ದು, ಬಿಜೆಪಿ 29 ಸ್ಥಾನ ಮತ್ತು ಜೆಡಿಎಸ್ 8 ಸ್ಥಾನಗಳನ್ನು ಹೊಂದಿದೆ. ಅಂದರೆ ವಿರೋಧ ಪಕ್ಷವು 37 ಸ್ಥಾನಗಳ ಅಲ್ಪ ಬಹುಮತವನ್ನು ಹೊಂದಿದೆ. ಆದಾಗ್ಯೂ, ಕಾಂಗ್ರೆಸ್ ನಿಯಂತ್ರಣವನ್ನು ಪಡೆಯಲು ಕೆಲವೇ ಕೆಲವು ಸಂಖ್ಯೆಗಳ ಅಗತ್ಯವಿದೆ. ಬಜೆಟ್ ಅಧಿವೇಶನದ ವೇಳೆಗೆ ಕಾಂಗ್ರೆಸ್ ಪರವಾಗಿ ಬದಲಾಗುವ ನಿರೀಕ್ಷೆಯಿದೆ. ರಾಜ್ಯಪಾಲರು ಕಾಂಗ್ರೆಸ್‌ನ ನಾಲ್ವರು ನಾಮನಿರ್ದೇಶಿತರನ್ನು ಅನುಮೋದಿಸಿ ಅವರನ್ನು ನೇಮಿಸಿದ ನಂತರ, ಫೆಬ್ರವರಿ 2025 ರಲ್ಲಿ ಬಜೆಟ್ ಅಧಿವೇಶನದಲ್ಲಿ ಪಕ್ಷವು ತನ್ನ ಬಹುಮತವನ್ನು ಸಾಬೀತುಪಡಿಸಬೇಕಾಗುತ್ತದೆ, ಹೀಗಾಗಿ ಈ ಅಧಿವೇಶನ ಕಾಂಗ್ರೆಸ್ ಪಾಲಿಗೆ ನಿರ್ಣಾಯಕವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT