ಶಿವಮೊಗ್ಗದ ಫ್ರೀಡಂ ಪಾರ್ಕ್'ನಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್  
ರಾಜಕೀಯ

'ಟೈಮ್ ವೇಸ್ಟ್ ಮಾಡ್ಬೇಡಿ, ವಯಸ್ಸಾಗತ್ತೆ, ಇನ್ನು 9 ವರ್ಷ ಈ ಕಾಂಗ್ರೆಸ್ ಸರ್ಕಾರ ಇರತ್ತೆ, ಬನ್ನಿ ಸೇರ್ಕೊಳ್ಳಿ'

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ತಿದ್ದುಪಡಿ ಮಸೂದೆ ತಂದೇ ತರುತ್ತೇವೆ ಎಂದ ಡಿಸಿಎಂ

ಶಿವಮೊಗ್ಗ: ನಮ್ಮ ಸರ್ಕಾರದ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆಗಳಿಂದ ರಾಜ್ಯದ ಧಾರ್ಮಿಕ ಕೇಂದ್ರಗಳಲ್ಲಿ ಆದಾಯ ಹೆಚ್ಚುತ್ತಿದೆ. ಧಾರ್ಮಿಕ ಇಲಾಖೆಯ ಸಚಿವ ರಾಮಲಿಂಗಾ ರೆಡ್ಡಿಯವರು ದೂರಾಲೋಚನೆ ಮಾಡಿ ಹಳ್ಳಿಯಲ್ಲಿರುವ ಚಿಕ್ಕ ದೇವಾಲಯಗಳಿಗೆ ಸಹಾಯ ಮಾಡಿ ಅವುಗಳು ಅಭಿವೃದ್ಧಿಯಾಗಬೇಕು, ಅರ್ಚಕರಿಗೂ ಅನುಕೂಲವಾಗಬೇಕೆಂದು ಕಾಳಜಿ ಹೊಂದಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ನಮ್ಮ ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲವಾಗದು ಎಂಬುದು ನನ್ನ ನಂಬಿಕೆ. ಗ್ರಾಮೀಣ ಭಾಗದಲ್ಲಿರುವ ಚಿಕ್ಕ ದೇವಸ್ಥಾನಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ತಿದ್ದುಪಡಿ ಮಸೂದೆ ತಂದಿದ್ದಾರೆ. ಇದನ್ನು ವಿರೋಧ ಪಕ್ಷದವರು ವಿರೋಧ ಮಾಡಿ ವಿಧಾನ ಪರಿಷತ್ತಿನಲ್ಲಿ ತಿರಸ್ಕೃತವಾಗುವಂತೆ ಮಾಡಿದ್ದಾರೆ. ಮಸೂದೆಯ ಮಸೂದೆಯ ಭಾವನೆಯನ್ನು ಅರ್ಥವಾಗುತ್ತದೆ. ಹಳ್ಳಿಯಲ್ಲಿರುವ ದೇವರು ದೇವರಲ್ಲವೇ ಎಂದು ಡಿ ಕೆ ಶಿವಕುಮಾರ್ ಕೇಳಿದ್ದಾರೆ.

ನಮ್ಮ ಮುಜರಾಯಿ ಇಲಾಖೆಯ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿಯವರು ದೂರದೃಷ್ಟಿಯಿಂದ ಜಾರಿಗೆ ತರಲು ಉದ್ದೇಶಿಸಲಾಗಿದ್ದ ಮಸೂದೆಯಿದು. ಬಿಜೆಪಿ ಮತ್ತು ಜೆಡಿಎಸ್ ನವರು ಪೂರ್ವಯೋಜಿತವಾಗಿ ಪ್ಲ್ಯಾನ್ ಮಾಡಿಕೊಂಡು ಮಸೂದೆಯನ್ನು ವಿಧಾನ ಪರಿಷತ್ ನಲ್ಲಿ ಸೋಲಿಸಿದ್ದಾರೆ. ಮತ್ತೆ ನಮ್ಮ ಸಂಖ್ಯಾಬಲ ಹೆಚ್ಚಾದಾಗ ಇದನ್ನು ಜಾರಿಗೆ ತರುವುದು ಖಂಡಿತ ಎಂದರು.

ಬಿಜೆಪಿಯವರದ್ದು ಮಾತೊಂದು, ಕೃತಿಯೊಂದು, ಅವರೇ ಹಿಂದೂ ದೇವಾಲಯಗಳ ದೊಡ್ಡ ವಿರೋಧಿಗಳು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಬಿಜೆಪಿಯವರು ರಾಜಕಾರಣ ಮಾಡಲಿ, ಮೂರು ತಿಂಗಳಲ್ಲಿ ನಮಗೆ ಮೆಜಾರಿಟಿ ಬರುತ್ತೆ, ಆವಾಗ ಈ ಬಿಲ್ ನ್ನು ವಿಧಾನ ಪರಿಷತ್ ನಲ್ಲಿ ಧ್ವನಿಮತದಿಂದ ಆಂಗೀಕರಿಸುತ್ತೇವೆ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಗೆ ಬನ್ನಿ, ಸೇರಿಕೊಳ್ಳಿ: ​​ ಹೊಸಬರು ಪಕ್ಷ ಸೇರ್ಪಡೆ ವಿಚಾರವಾಗಿ ಟೈಮ್ ವೇಸ್ಟ್ ಮಾಡಬೇಡಿ, ವಯಸ್ಸು ಆಗ್ತಾ ಇರುತ್ತದೆ, ಇನ್ನು ಒಂಭತ್ತು ವರ್ಷಗಳ ಕಾಲ ಈ ಕಾಂಗ್ರೆಸ್ ಸರ್ಕಾರ ಇರುತ್ತದೆ ಎಂದು ಬಹಿರಂಗವಾಗಿ ಆಹ್ವಾನ ನೀಡಿದರು.

ಇಡೀ ರಾಜ್ಯದ ಉದ್ದಗಲಕ್ಕೂ ಅದು ಬಿಜೆಪಿ, ಜೆಡಿಎಸ್ ಆಗಿರಲಿ, ಬೇರೆ ಬೇರೆ ಪಕ್ಷವಾಗಿರಲಿ ಅಥವಾ ಪಕ್ಷಗಳ ಕಾರ್ಯಕರ್ತರೇ ಆಗಿರಲಿ ನಮ್ಮ ಪಕ್ಷದ ನಾಯಕತ್ವ, ಸಿದ್ಧಾಂತ ಒಪ್ಪಿ ಬರುವುದಾದರೆ ಬರಲಿ, ನಾವು ಖಂಡಿತಾ ಆಹ್ವಾನಿಸುತ್ತೇವೆ, ಯಾರು ಬೇಕಾದರೂ ಬರಬಹುದು, ಇನ್ನು 9 ವರ್ಷಗಳ ಕಾಲ ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುತ್ತದೆ, ಅರ್ಜಿ ಹಾಕಿ, ಟೈಂ ವೇಸ್ಟ್ ಮಾಡಬೇಡಿ, ವಯಸ್ಸು ಕಾಯಲ್ಲ ಎಂದು ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT