ಆರ್. ಅಶೋಕ್
ಆರ್. ಅಶೋಕ್ 
ರಾಜಕೀಯ

ವಿಧಾನ ಸೌಧವನ್ನು ಸ್ಲೀಪರ್ ಸೆಲ್ ಮಾಡಬೇಡಿ; ನಮ್ಮ ಸರ್ಕಾರ ಇದ್ದಿದ್ರೆ ಘೋಷಣೆ ಕೂಗಿದವರನ್ನ ಗುಂಡಿಟ್ಟು ಸಾಯಿಸ್ತಿತ್ತು: ಅಶೋಕ್

Shilpa D

ಬೆಂಗಳೂರು: ದಯವಿಟ್ಟು ವಿಧಾನ ಸೌಧವನ್ನು ಪಾಕಿಸ್ತಾನ ಮಾಡಬೇಡಿ. ಪಾಕಿಸ್ತಾನದವರನ್ನು ಕರೆತಂದು ವಿಧಾನ ಸೌಧವನ್ನು ಉಗ್ರರ ಸ್ಲೀಪರ್ ಸೆಲ್ ಮಾಡಬೇಡಿ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದರೂ ಕ್ರಮ ಕೈಗೊಳ್ಳದೆ ಕೆಲವರನ್ನು ಕರೆಸಿ ವಿಚಾರಣೆ ನಡೆಸಿ ವಾಪಸ್‌ ಕಳುಹಿಸಿದ್ದಾರೆ. ದೇಶದ್ರೋಹಿಗಳಿಗೆ ಬಿರ್ಯಾನಿ ಕೊಟ್ಟು ಕಳಿಸಿದ್ದೀರಾ.? ಶಿವಾಜಿನಗರ ಬಿರ್ಯಾನಿನಾ.? ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಮ್ಮ ಸರ್ಕಾರ ಇದ್ದಿದ್ರೆ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನ ಅಲ್ಲಿಯೇ ಗುಂಡಿಟ್ಟು ಸಾಯಿಸುತ್ತಿತ್ತು ಎಂದು ಹೇಳಿದರು.

ವಿಧಾನಸೌಧದಲ್ಲಿ ಎಮರ್ಜೆನ್ಸಿ ತಂದಿದ್ದಾರೆ. ವಿಪಕ್ಷಗಳು ದೇಶದ್ರೋಹಿಗಳ ಬಂಧನ ಮಾಡಿ ಎಂದು ಧರಣಿ ಮಾಡುತ್ತಿವೆ. ಆದರೆ ಸರ್ಕಾರ ಇದುವರೆಗೂ ಯಾರನ್ನ ಬಂಧನ ಮಾಡಿಲ್ಲ. ನಾವು ಸದನದಲ್ಲಿ ಧರಣಿ ಮಾಡಿದರೂ ಸೆನ್ಸಾರ್ ಹಾಕಿದ್ರು ಎಂದು ವಾಗ್ದಾಳಿ ನಡೆಸಿದರು.

ದೇಶದ್ರೋಹಿಗಳಿಗೆ ಬಿರ್ಯಾನಿ ಕೊಟ್ಟು ಕಳಿಸಿದ್ದೀರಾ.? ಶಿವಾಜಿನಗರ ಬಿರ್ಯಾನಿನಾ.? ನಮ್ಮ ಸರ್ಕಾರ ಇದ್ದಿದ್ರೆ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನ ಅಲ್ಲಿಯೇ ಗುಂಡಿಟ್ಟು ಸಾಯಿಸುತ್ತಿತ್ತು.
ಆರ್.ಅಶೋಕ್ ವಿಧಾನಸಭೆ ವಿರೋಧ ಪಕ್ಷದ ನಾಯಕ

ನಮ್ಮ ಹೋರಾಟ ದೇಶದ ಬದುಕಿಗಾಗಿ. ಪಾಕ್ ಭಯೋತ್ಪಾದಕರ ಗುಂಡಿಗೆ ನಮ್ಮ ಸೈನಿಕರು ಬಲಿಯಾಗುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ದೇಶದ್ರೋಹಿಗಳ ರಕ್ಷಣೆ ನೀಡುವ ಮೂಲಕ ಗಡಿಯಲ್ಲಿ ಹಗಲು ರಾತ್ರಿ ಕಾವಲು ಕಾಯುತ್ತಿರುವ ಸೈನಿಕರಿಗೂ ಅನ್ಯಾಯ ಮಾಡುತ್ತಿದೆ ಎಂದು ಅಶೋಕ್‌ ಆರೋಪಿಸಿದರು. ಇವರು ಬಂಧನ ಕೂಡಾ ಮಾಡದೇ ರಕ್ಷಣೆ ಮಾಡುತ್ತಿದ್ದಾರೆ ಎಂದು ಅಶೋಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮಾಧ್ಯಮದವರು ನಿರ್ಭೀತಿಯಿಂದ ಕೆಲಸ ಮಾಡುತ್ತಿದ್ದಾರೆ. ಸತ್ಯವನ್ನು ಹೇಳುತ್ತಿದ್ದಾರೆ. ಆದರೆ, ಈಗ ಅವರನ್ನೂ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ವಿಧಾನಸಭೆಯ ಟಿವಿಯಲ್ಲಿ ಕೇವಲ ಆಡಳಿತ ಪಕ್ಷದವರ ವಿಡಿಯೋ ಮಾತ್ರ ತೋರಿಸಲಾಗುತ್ತಿದೆ ಎಂದು ಅಶೋಕ್‌ ಆರೋಪಿಸಿದರು.

ಮಾಧ್ಯಮದವರಿಂದ ಫೋರ್ಸ್ ಮಾಡಿ ವಿಡಿಯೋ ಪಡೆಯುತ್ತಿದ್ದಾರೆ. ಈಗಾಗಲೇ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಹಿರಿಯ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಈಗಾಗಲೇ FSL ರಿಪೋರ್ಟ್‌ ಬಂದಿದೆ, ಅದರಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿಲ್ಲ ಅಂತ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಅಶೋಕ್‌ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

SCROLL FOR NEXT