ಎಚ್.ಡಿ ದೇವೇಗೌಡ 
ರಾಜಕೀಯ

ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟವನೇ ನಾನು; ಮುಸಲ್ಮಾನ ಬಂಧುಗಳಿಗಾಗಿ ನನ್ನ ಶರೀರ ತ್ಯಾಗ ಮಾಡಿದ್ದೇನೆ: ದೇವೇಗೌಡ

ಅಂದು ಒಕ್ಕಲಿಗ ಸಮುದಾಯಕ್ಕೆ ನೀಡಿದ್ದ ಮೀಸಲಾತಿಯನ್ನು ಕಡಿಮೆ ಮಾಡಿ, ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದು ನಾನು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿಕೊಂಡಿದ್ದಾರೆ.

ಹಾಸನ: ಅಂದು ಒಕ್ಕಲಿಗ ಸಮುದಾಯಕ್ಕೆ ನೀಡಿದ್ದ ಮೀಸಲಾತಿಯನ್ನು ಕಡಿಮೆ ಮಾಡಿ, ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದು ನಾನು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿಕೊಂಡಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸಲು ಒಳಮೀಸಲಾತಿ ಕೊಡಬೇಕೆಂದು ಸಚಿವ ಸಂಪುಟ ಸಭೆ ತುರ್ತು ನಿರ್ಣಯ ಮಾಡಿ ಈಗ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಈ ಕೆಲಸವನ್ನು ನಾನೂ ನನ್ನ ಅಧಿಕಾರ ಅವಧಿಯಲ್ಲೇ ಮಾಡಿದ್ದೆ. ಅಂದು ಮುಸ್ಲಿಮರಿಗೆ ಮೀಸಲಾತಿ  ಕೊಟ್ಟಿದ್ದು ದೇವೇಗೌಡ. ನಾನು ಅಧಿಕಾರದಲ್ಲಿದ್ದಾಗ ಒಕ್ಕಲಿಗರಿಗೆ ನೀಡಿದ್ದನ್ನು ಕಡಿಮೆ ಮಾಡಿ, ಮುಸ್ಲಿಮರಿಗೆ ಮೀಸಲಾತಿ ಕೊಟ್ಟೆ.

ಮುಸಲ್ಮಾನ ಬಂದುಗಳು ನನ್ನ ಅಣ್ಣ ತಮ್ಮಂದಿರು, ನಿಮಗಾಗಿ ಈ ಶರೀರವನ್ನ ತ್ಯಾಗ ಮಾಡಿದ್ದೇನೆ. ನಿಮಗೆ ಮೀಸಲಾತಿ ನೀಡಿದ್ದೇನೆ, ಖರ್ಗೆಯವರು ಒಮ್ಮೆ ಮಾತ್ರ ಮೀಸಲಾತಿ ಕೊಡೋಣಾ ಎಂದಿದ್ದರು. ನಾನು ಕೊಟ್ಟ ಮೀಸಲಾತಿಯನ್ನ ಇಲ್ಲಿಯವರೆಗೂ ತೆಗೆದು ಹಾಕಲಿಕ್ಕೆ ಆಗಿಲ್ಲ, ಬೆಟ್ಟದ ರಂಗನಾಥ ಸ್ವಾಮಿಗೆ ಹರಕೆ ಮಾಡಿಕೊಂಡ ನಂತರ‌ ನಾನು ಹುಟ್ಟಿದ್ದೇನೆ. ಎಲ್ಲಾ ಸಮುದಾಯದ ದೇವಾಲಯಗಳಿಗೂ ಹೋಗಿದ್ದೇನೆ. ನನಗೆ ಎಲ್ಲಾ ದೇವಸ್ಥಾನಗಳೂ ಒಂದೇ ಎಂದಿದ್ದಾರೆ.

ನಾನು ಈ ಜಿಲ್ಲೆಗೆ ಬಂದಿರೋದು ನನ್ನ ಮೊಮ್ಮಗನ್ನ ಗೆಲ್ಲಿಸೋದಕ್ಕಲ್ಲ, ಈ ಜಿಲ್ಲೆಯ ಅಭಿವೃದ್ಧಿಗಾಗಿ. ನಾವು ಏನು ಮೋಸ ಮಾಡಿದ್ದೇವೆ ಹೇಳಲಿ, ನಮ್ಮ ಸಮಾಜದವರನ್ನ ದೊಡ್ಡ ದೊಡ್ಡ ಸ್ಥಾನಕ್ಕೆ ಕಳಿಸಿದ್ದೇನೆ. ಅವರೆಲ್ಲಾ ಸೇರಿ ನಮ್ಮನ್ನ ಸೋಲಿಸಿದರು, ನಾನು ಕಾಂಗ್ರೆಸ್ ಗಾಗಿ‌ ನನ್ನ ಜೀವನವನ್ನೇ ತೆತ್ತಿದ್ದೇನೆ. ಒಂದು ಪುರಸಭೆ ಚುನಾವಣೆ ಗೆಲ್ಲಿಸೋಕೆ ದೇಶದ ಮಾಜಿ ಪ್ರಧಾನಿ ಆದವನು ಇಲ್ಲಿ ಬಂದು ಕೂತೆ ಎಂದಿದ್ದಾರೆ.

ಮೀಸಲಾತಿ ವಿಚಾರ ರಾಜ್ಯಾದ್ಯಂತ ಬಹಿರಂಗ ಚರ್ಚೆಯಾಗಬೇಕು. ಯಾವ ಸಮುದಾಯಗಳು ಮೀಸಲಾತಿಯನ್ನು ಅನುಭವಿಸುತ್ತಿವೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು ಮತ್ತು ನಂತರ ಯಾವುದೇ ಮೀಸಲಾತಿ ವರ್ಗಗಳ ಅಡಿಯಲ್ಲಿ ಬರಬೇಕು. ರಾಜ್ಯದಲ್ಲಿ ವಿವಿಧ ವರ್ಗಗಳಿಗೆ ಮೀಸಲಾತಿ ನೀಡಲು ಪಕ್ಷ ಮತ್ತು ಮುಖಂಡರು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಯಾವುದೇ ನಾಯಕರೊಂದಿಗೆ ಚರ್ಚೆಗೆ ಸಿದ್ಧ ಎಂದು ಹೇಳಿದರು.

ದಿವಂಗತ ಎಲ್.ಜಿ.ಹಾವನೂರ ಅವರ ಸೂತ್ರದಂತೆ ತಾವು ಮುಖ್ಯಮಂತ್ರಿಯಾಗಿದ್ದಾಗ ಮಾತ್ರ ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತರಿಗೆ ಶೇಕಡವಾರು ಮೀಸಲಾತಿಗೆ ತಿದ್ದುಪಡಿ ತರುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದರು.

ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಗೌಡರು, ಗಂಭೀರ ಸಮಸ್ಯೆಗಳು ಎದುರಾದಾಗ ತಮ್ಮನ್ನು ಮತ್ತು ತಮ್ಮ ಪಕ್ಷವನ್ನು ದೂಷಿಸುತ್ತಿದ್ದು, ಸಂಸತ್ ಚುನಾವಣೆಯಲ್ಲಿ ಮೀಸಲಾತಿ ಪ್ರಮುಖ ವಿಷಯವಾಗಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ವಿವಿಧ ಸಾಮರ್ಥ್ಯಗಳಲ್ಲಿ ಅವರ ಅಧಿಕಾರಾವಧಿಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ಕಾಂಗ್ರೆಸ್ ನಾಯಕರು ಮರೆಮಾಚುತ್ತಾರೆ.

ಸದನದಲ್ಲಿ ಮೀಸಲಾತಿ ಕುರಿತ ಖಾಸಗಿ ವಿಧೇಯಕ ಮಂಡಿಸಿದಾಗ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ ಸೇರಿದಂತೆ ಕಾಂಗ್ರೆಸ್ ನಾಯಕರು ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ಗೌಡರು ನೆನಪಿಸಿಕೊಂಡರು. ಅವರು ಮೀಸಲಾತಿಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿದ್ದರು ಮತ್ತು ಅಂತಿಮವಾಗಿ ಎಸ್‌ಸಿ ಮೀಸಲಾತಿಯನ್ನು 15 ಪ್ರತಿಶತದಿಂದ 18 ಕ್ಕೆ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT