ಸಾಂದರ್ಭಿಕ ಚಿತ್ರ 
ರಾಜಕೀಯ

Exit poll: ಕರ್ನಾಟಕದಲ್ಲಿ ಕಾಂಗ್ರೆಸ್ ಒಂದಂಕಿ ದಾಟುವುದಿಲ್ಲ!

ಲೋಕಸಭೆ ಚುನಾವಣೆ 2024ರ ಮತದಾನ ಪ್ರಕ್ರಿಯೆ ಮುಗಿದು ನಿನ್ನೆ ಶನಿವಾರದ ಮೆಗಾ ಎಕ್ಸಿಟ್ ಪೋಲ್‌ ಹೊರಬಿದ್ದಿದ್ದು, ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಮೀಕ್ಷೆಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಒಂದಂಕಿ ದಾಟುವುದಿಲ್ಲ ಎಂದು ಹೇಳಿದೆ.

ಬೆಂಗಳೂರು: ಲೋಕಸಭೆ ಚುನಾವಣೆ 2024ರ ಮತದಾನ ಪ್ರಕ್ರಿಯೆ ಮುಗಿದು ನಿನ್ನೆ ಶನಿವಾರದ ಮೆಗಾ ಎಕ್ಸಿಟ್ ಪೋಲ್‌ ಹೊರಬಿದ್ದಿದ್ದು, ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಮೀಕ್ಷೆಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಒಂದಂಕಿ ದಾಟುವುದಿಲ್ಲ ಎಂದು ಹೇಳಿದೆ.

ಈ ಎಕ್ಸಿಟ್ ಪೋಲ್ ಮುಂದಿನ ಮಂಗಳವಾರದಂದು ನಿಜವಾದರೆ ಫಲಿತಾಂಶಗಳು ಅಧಿಕೃತವಾಗಿ ಪ್ರಕಟವಾದಾಗ, ಕರ್ನಾಟಕ ರಾಜಕೀಯದಲ್ಲಿ, ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಸರ್ಕಾರದಲ್ಲಿ ರಾಜಕೀಯ ಅಲೆಗಳು ಏಳುವುದನ್ನು ತಳ್ಳಿಹಾಕುವಂತಿಲ್ಲ.

ಅಂದಾಜುಗಳ ಪ್ರಕಾರ, ರಾಷ್ಟ್ರೀಯ ಮಟ್ಟದಲ್ಲಿ I.N.D.I.A ಮೈತ್ರಿಕೂಟದ ಚಿತ್ರಣ ಪ್ರಕಾಶಮಾನವಾಗಿಲ್ಲ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ 128 ಸ್ಥಾನಗಳು ಬರಬಹುದೆಂದು ಭವಿಷ್ಯ ನುಡಿದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಎಕ್ಸಿಟ್ ಪೋಲ್‌ಗಳು ಆತಂಕ ಉಂಟುಮಾಡಿವೆ.

ಎಕ್ಸಿಟ್ ಪೋಲ್ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎಕ್ಸಿಟ್ ಪೋಲ್‌ಗಳು ಸಾಮಾನ್ಯವಾಗಿ ಸಣ್ಣ ಮಾದರಿ ಗಾತ್ರಗಳನ್ನು ಹೊಂದಿರುತ್ತವೆ. ಎಕ್ಸಿಟ್ ಪೋಲ್ ಸರಿಯಾದ ಸಂಖ್ಯೆಯನ್ನು ನೀಡುವುದಿಲ್ಲ. ಎಕ್ಸಿಟ್ ಪೋಲ್‌ಗಳಲ್ಲಿ ನನಗೆ ನಂಬಿಕೆ ಇಲ್ಲ.ಎಕ್ಸಿಟ್ ಪೋಲ್‌ಗಳು ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 3-4 ಸ್ಥಾನಗಳನ್ನು ನೀಡುತ್ತಿವೆ, ಆದರೆ ನಾವು ಎರಡಂಕಿಯಲ್ಲಿ ಸೀಟುಗಳನ್ನು ಗೆಲ್ಲುತ್ತೇವೆ. I.N.D.I.A ಬ್ಲಾಕ್ ಭಾರತದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತನ್ನ ಐದು ಭರವಸೆಗಳ ಮೇಲೆ ಭರವಸೆ ಇಟ್ಟುಕೊಂಡು ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ಗೆ ಎಕ್ಸಿಟ್ ಪೋಲ್ ಆತಂಕ ತಂದಿದೆ.

ಬಿಜೆಪಿಯಲ್ಲಿ ಕೆಲವು ನಾಯಕರು - ವಿಶೇಷವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರೋಧಿಗಳು - ಅವರ ಪುತ್ರ ಬಿವೈ ವಿಜಯೇಂದ್ರ ಅವರ ನಾಯಕತ್ವದಲ್ಲಿ ಪಕ್ಷವನ್ನು ಕ್ಲೀನ್ ಸ್ವೀಪ್ ಮಾಡಲು ಸಾಧ್ಯವಾಗದಿದ್ದರೆ ತಮ್ಮ ಟೀಕೆ, ಆಕ್ರೋಶ ಹೆಚ್ಚಿಸಿ ನಾಯಕತ್ವ ಬದಲಾವಣೆಗೆ ಒತ್ತಾಯಿಸಬಹುದು. ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿವೆ.

ಎಕ್ಸಿಟ್ ಪೋಲ್‌ಗಳು 2023ರ ನೀರಸ ಪ್ರದರ್ಶನದ ನಂತರ ಬಿಜೆಪಿಗೆ ಪುನರಾಗಮನವನ್ನು ಭವಿಷ್ಯ ನುಡಿದಿವೆ. ಎಕ್ಸಿಟ್ ಪೋಲ್‌ಗಳು ಕರ್ನಾಟಕದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ), ಭಾರತೀಯ ಜನತಾ ಪಕ್ಷ-ಜನತಾ ದಳ (ಜಾತ್ಯತೀತ) ಮೈತ್ರಿಕೂಟಕ್ಕೆ ಕನಿಷ್ಠ 20 ಸ್ಥಾನಗಳನ್ನು ನೀಡಿವೆ.

ಮೇ 2023 ರ ಅಸೆಂಬ್ಲಿ ಚುನಾವಣೆಯಲ್ಲಿ ಕೇವಲ 60 ಸ್ಥಾನಗಳನ್ನು ಗೆಲ್ಲುವ ಮೂಲಕ ಸೋಲು ಅನುಭವಿಸಿದ ಕೇಸರಿ ಪಕ್ಷವು 25 ಸ್ಥಾನಗಳನ್ನು ಗೆದ್ದಾಗ 2019 ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ 5-6 ಸ್ಥಾನಗಳನ್ನು ಕಳೆದುಕೊಂಡರೂ ಪಕ್ಷಕ್ಕೆ ಹೆಚ್ಚಿನ ಹಿನ್ನಡೆಯಾದಂತಾಗುವುದಿಲ್ಲ.

ಅಸೆಂಬ್ಲಿ ಚುನಾವಣೆಯಲ್ಲಿ 19 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್‌ಗೆ 1-3 ಲೋಕಸಭಾ ಸ್ಥಾನಗಳನ್ನು ಸಮೀಕ್ಷೆಗಾರರು ನೀಡಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೂ ಹಾಸನದಲ್ಲಿ ಮಾತ್ರ ಗೆದ್ದಿತ್ತು.

ಅಚ್ಚರಿಯ ಸಂಗತಿಯೆಂದರೆ, ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್‌ಗಳು ಲೈಂಗಿಕ ದೌರ್ಜನ್ಯ ಪ್ರಕರಣಗಳ ಪ್ರಮುಖ ಆರೋಪಿ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಗೆಲುವಿನ ಮುನ್ಸೂಚನೆ ನೀಡಿವೆ.

ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಮತ್ತು ಕೋಲಾರ ಕ್ಷೇತ್ರದಲ್ಲಿ ಮಲ್ಲೇಶ್‌ಬಾಬು ಗೆಲುವು ಸಾಧಿಸಲಿದ್ದಾರೆ ಎಂದು ಎಕ್ಸಿಟ್ ಪೋಲ್‌ಗಳು ಪರೋಕ್ಷವಾಗಿ ಭವಿಷ್ಯ ನುಡಿದಿವೆ.

ಭವಿಷ್ಯವಾಣಿಯನ್ನು ಗಮನಿಸಿದರೆ, ಬಿಜೆಪಿ ತನ್ನ ಸಾಂಪ್ರದಾಯಿಕ ಭದ್ರಕೋಟೆಗಳಾದ ಬೆಂಗಳೂರು, ಮಲೆನಾಡು ಮತ್ತು ಕರಾವಳಿ ಪ್ರದೇಶಗಳು ಮತ್ತು ಮುಂಬೈ-ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಪ್ರದೇಶಗಳನ್ನು ವಿಶೇಷವಾಗಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಉತ್ಸಾಹದಿಂದ ಕಾಂಗ್ರೆಸ್‌ಗೆ ಮತ ಹಾಕಿದ ಜನತೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಬೆಂಬಲಿಸಿದಂತಿದೆ. ಅಂದರೆ, ಜನರು ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಪ್ರಾದೇಶಿಕ ನಾಯಕತ್ವಕ್ಕೆ ಹೇಗೆ ಮತ ಚಲಾಯಿಸಿದರು ಮತ್ತು ಕಾಂಗ್ರೆಸ್ ನೀಡಿದ ಐದು ಭರವಸೆಗಳ ನಡುವೆಯೂ ಜನರು ಹೇಗೆ ಮತ ಚಲಾಯಿಸಿದರೋ ಲೋಕಸಭೆ ಚುನಾವಣೆಯನ್ನು ತೆಗೆದುಕೊಂಡರೆ ಮೋದಿಯೇ ಅವರ ಆಯ್ಕೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿಗಾಗಿ ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗ ನಾಯಕತ್ವವು ಲೋಕಸಭೆ ಚುನಾವಣೆಯಲ್ಲಿ ವಿಶೇಷವಾಗಿ ಹಳೆಯ ಮೈಸೂರು ಭಾಗದಲ್ಲಿ ಕೆಲಸ ಮಾಡಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೆಲೆ ತೆತ್ತ ಬಳಿಕ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಬಿಜೆಪಿ ಹೈಕಮಾಂಡ್ ನಿರ್ಧಾರವು ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT