ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ
ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ 
ರಾಜಕೀಯ

ಕಾಂಗ್ರೆಸ್‌ಗೆ ನನ್ನ ಕುಟುಂಬದ ಬಗ್ಗೆ ಅಸೂಯೆ ಇದೆ: ಹೆಚ್'ಡಿ ದೇವೇಗೌಡ

Manjula VN

ಹಾಸನ: ಕಾಂಗ್ರೆಸ್‌ ನಾಯಕರಿಗೆ ನನ್ನ ಕುಟುಂಬದ ಬಗ್ಗೆ ಅಸೂಯೆ ಇದೆ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಬುಧವಾರ ಹೇಳಿದರು.

ತಮ್ಮ ಮೊಮ್ಮಗ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ 5 ವರ್ಷದ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ಪಕ್ಷದ ಹಿತದೃಷ್ಟಿಯಿಂದ ಯಾವುದೇ ಸವಾಲು ಮತ್ತು ಪರಿಣಾಮಗಳನ್ನು ಎದುರಿಸುವ ಶಕ್ತಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿದೆ ಎಂದು ಹೇಳಿದರು.

ಇದೇ ವೇಳೆ ತಮ್ಮ ಪುತ್ರರಾದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್ ಡಿ ರೇವಣ್ಣ, ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಶ್ಲಾಘಿಸಿದ ಅವರು. ರೈತ ಸಮುದಾಯದ ಶ್ರೇಯೋಭಿವೃದ್ಧಿಗೆ ಜೆಡಿಎಸ್ ಬದ್ಧವಾಗಿದೆ ಎಂದು ಹೇಳಿದರು.

ಬಳಿಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಪ್ರಾಮುಖ್ಯತೆ ನೀಡಲಿಲ್ಲ. ಕೃಷಿ ಸಾಲ ಮನ್ನಾ ಮಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆಂದು ತಿಳಿಸಿದರು. ಬಳಿಕ ಅಲ್ಪಸಂಖ್ಯಾತರಿಗೆ ಶೇ 4 ರಷ್ಟು ಮೀಸಲಾತಿ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ಬಳಿಕ ಲೋಕಸಭೆ ಚುನಾವಣೆಗೆ ಮುಂದಿನ 100 ದಿನ ಬಹುಮುಖ್ಯ ಎಂದು ಒತ್ತಿ ಹೇಳಿದ ದೇವೇಗೌಡ ಅವರು, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಮತ್ತು ಅದರ ನಾಯಕರನ್ನು ಮುಗಿಸಲು ಪ್ರತಿಪಕ್ಷಗಳು ಷಡ್ಯಂತ್ರ ರೂಪಿಸಿದ್ದು, ಪ್ರಜ್ವಲ್ ಅವರ ಪ್ರಗತಿ ವರದಿಯನ್ನು ಜೆಡಿಎಸ್ ಕಾರ್ಯಕರ್ತರು ಜನರ ಬಳಿಗೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.

ನಾವು ಯಾವುದೇ ಜಾತಿ ಅಥವಾ ಸಮುದಾಯದ ತಾರತಮ್ಯ ಮಾಡಿಲ್ಲ. ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲು ಪ್ರಯತ್ನಿಸಿದ್ದೇವೆಂದು ಹೇಳಿದರು.

ಬಳಿಕ 2019ರ ಲೋಕಸಭೆ ಚುನಾವಣೆಯಲ್ಲಿ ತುಮಕೂರಿನಲ್ಲಿ ತಮ್ಮನ್ನು ಸೋಲಿಸಿದ್ದಕ್ಕಾಗಿ ಜಿಲ್ಲಾ ಸಚಿವ ಕೆ ಎನ್ ರಾಜಣ್ಣ ಅವರನ್ನು ದೇವೇಗೌಡ ಅವರು ತರಾಟೆಗೆ ತೆಗೆದುಕೊಂಡರು. ಜನರು ಜಿಲ್ಲೆ ಅಭಿವೃದ್ಧಿಗಾಗಿ ಪ್ರಜ್ವಲ್ ಅವರನ್ನು ಮತ್ತೊಮ್ಮೆ ಯ್ಕೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಬಳಿಕ ಪ್ರಜ್ವಲ್ ರೇವಣ್ಣ, ಹೆಚ್ ಡಿ ರೇವಣ್ಣ, ಎಚ್ ಡಿ. ಕುಮಾರಸ್ವಾಮಿ, ಕೆ ಎಸ್ ಲಿಂಗೇಶ್, ಸಿ ಎನ್ ಬಾಲಕೃಷ್ಣ ಮಾತನಾಡಿದರು.

SCROLL FOR NEXT