ಪ್ರತಾಪ್ ಸಿಂಹ ಪರ ಬೆಂಬಲಿಗರ ಪ್ರತಿಭಟನೆ
ಪ್ರತಾಪ್ ಸಿಂಹ ಪರ ಬೆಂಬಲಿಗರ ಪ್ರತಿಭಟನೆ 
ರಾಜಕೀಯ

ಮೋದಿಗೆ ದೇಶದ ಹಿತಾಸಕ್ತಿಯಷ್ಟೇ ಮುಖ್ಯ; ಸಂಸದ, ಮಂತ್ರಿಯಾದರೂ ನಗಣ್ಯ: 'ಪಾಸ್' ಕೊಟ್ಟು ಕೈ ಸುಟ್ಟುಕೊಂಡ ಸಿಂಹ!

Shilpa D

ಮೈಸೂರು: ಮುಂಬರುವ ಲೋಕಸಭೆ ಚುನಾವಣೆಗೆ ಮೈಸೂರು-ಕೊಡಗು ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿರುವ ಬಿಜೆಪಿ ಮೈಸೂರು ರಾಜಮನೆತನದ ವಂಶಸ್ಥರನ್ನು ಕಣಕ್ಕಿಳಿಸಿದೆ.

ಪಕ್ಷದ ಸಂಸದರು, ಮಂತ್ರಿಗಳು ಯಾರೇ ಆಗಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯ ದೇಶ ವಿರೋಧಿ ಚಟುವಟಿಕೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ತಂಡ ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದೆ.

ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಣೆಯಿಂದ ಆಕ್ರೋಶಗೊಂಡಿರುವ ಪಕ್ಷದ ಕಾರ್ಯಕರ್ತರಲ್ಲಿನ ಅಸಮಾಧಾನ ಹೋಗಲಾಡಿಸಲು ಬಿಜೆಪಿ ಐಟಿ ಸೆಲ್ ಈ ಬೆಳವಣಿಗೆಯನ್ನು ಚರ್ಚೆಯ ಕೇಂದ್ರಬಿಂದುವಾಗಿ ಸಕ್ರಿಯವಾಗಿ ಬಳಸುತ್ತಿದೆ.

ರಾಷ್ಟ್ರೀಯವಾದವನ್ನು' ಬಳಸಿಕೊಂಡು ಕಾರ್ಯಕರ್ತರನ್ನು ಯದುವೀರ್ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸುವಂತೆ ಕರೆ ನೀಡಿದೆ. ಕಳೆದ ವರ್ಷ ಡಿಸೆಂಬರ್ 13 ರಂದು ಇಬ್ಬರಿಗೆ ಸಂಸತ್ ಪಾಸ್ ನೀಡುವ ಮೂಲಕ ಪ್ರತಾಪ್ ಸಿಂಹ ವಿವಾದಕ್ಕೆ ಸಿಲುಕಿಕೊಂಡರು. ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದುಕೊಂಡಿದ್ದ ಇಬ್ಬರು ವ್ಯಕ್ತಿಗಳು ಘೋಷಣೆ ಕೂಗಿ ಸ್ಮೋಕ್ ಬಾಂಬ್ ಎಸೆದಿದ್ದರು.

ಈ ಘಟನೆಯ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ನೀಡೇಕು ಮತ್ತು ಪ್ರತಾಪ್ ಸಿಂಹ ವಿರುದ್ಧ ಕ್ರಮ ಜರುಗಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಇದರಿಂದ ಕೇಂದ್ರ ಸರ್ಕಾರ ಮತ್ತು ಪ್ರದಾನಿ ನರೇಂದ್ರ ಮೋದಿ ಇಕ್ಕಟ್ಟಿಗೆ ಸಿಲುಕಿ ಮುಜುಗರ ಅನುಭವಿಸುವಂತಾಯಿತು. ತನ್ನ ಅಭಿವೃದ್ಧಿ ಕಾರ್ಯಗಳಿಂದ ಕ್ಷೇತ್ರದ ಮತದಾರರಲ್ಲಿ ಉತ್ತಮ ಹೆಸರು ಗಳಿಸಿದ ಪ್ರತಾಪ್ ಸಿಂಹ ಬದಲಿಗೆ ರಾಜವಂಶಸ್ಥ ಯದುವೀರ್ ಅವರನ್ನು ಕರೆತಂದಿದೆ.

ಪ್ರತಾಪ್ ಸಿಂಹಗೆ ಟಿಕೆಟ್ ನಿರಾಕರಿಸಿರುವ ಕಾರಣ ಪಕ್ಷದ ಕಾರ್ಯಕರ್ತರು, ಅದರಲ್ಲೂ ವಿಶೇಷವಾಗಿ ಸಿಂಹ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಕೀಯಕ್ಕೆ ಬರದಂತೆ ಯದುವೀರ್‌ಗೆ ಒತ್ತಾಯಿಸಿ ಪ್ರಚಾರ ನಡೆಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನೋಟಾಗೆ ಮತ ಹಾಕುವಂತೆಯೂ ಕೆಲವರು ಕರೆ ನೀಡಿದರು.

ಆದಾಗ್ಯೂ, ಬಿಜೆಪಿಯ ಐಟಿ ಸೆಲ್ ಇದನ್ನು ಪರಿಹರಿಸಲು ಹೊಸ ಮಾರ್ಗವನ್ನು ಕಂಡುಕೊಂಡಿದೆ. ಇದನ್ನು ಪ್ರಧಾನಿ ಮೋದಿಯವರ ರಾಷ್ಟ್ರೀಯತೆಯ ಉತ್ಸಾಹ ಮತ್ತು ರಾಷ್ಟ್ರ ವಿರೋಧಿ ಎಂದು ಪರಿಗಣಿಸುವ ಯಾವುದೇ ಚಟುವಟಿಕೆಗಳ ಬಗ್ ಮೋದಿಗಿರುವ ಶೂನ್ಯ-ಸಹಿಷ್ಣುತೆಯ ನೀತಿಗೆ ಸಾಕ್ಷಿಯಾಗಿದೆ ಎಂದು ವಿಷಯವನ್ನು ಬಿಂಬಿಸಲು ಹೊರಟಿದೆ.

ಪ್ರಧಾನಿ ಮೋದಿಯವರ ಪ್ರಬಲ ನಾಯಕತ್ವ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಎತ್ತಿಹಿಡಿಯುವ ಪಕ್ಷದ ಬದ್ಧತೆಯನ್ನು ತೋರಿಸುವ ಪೋಸ್ಟ್‌ಗಳು ಮತ್ತು ಟ್ವೀಟ್‌ಗಳಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳು ಅಬ್ಬರಿಸುತ್ತಿದ್ದವು. ಪ್ರತಾಪ್ ಸಿಂಹ ಅವರನ್ನು ಕೈಬಿಟ್ಟಿರುವುದು ಪ್ರಧಾನಿ ಮೋದಿಯವರ ಸಂಕಲ್ಪವನ್ನು ತೋರಿಸುತ್ತದೆ. ಯಾರೇ ಗಡಿ ದಾಟಿದರೆ ಮೋದಿ ಆಡಳಿತದಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ಎಂದು ಬೆಲ್ಲಂ ಸ್ವಾತಿ ಎಂಬುವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ರಾಷ್ಟ್ರೀಯತೆ ಮತ್ತು ಶಿಸ್ತಿನ ನಿರೂಪಣೆಯೊಂದಿಗೆ ಬಿಜೆಪಿಯ ಕಾರ್ಯತಂತ್ರವು ಮುಂಬರುವ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವ ಮತ್ತು ಯದುವೀರ್‌ಗೆ ಬೆಂಬಲವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ.

SCROLL FOR NEXT