ಹೆಚ್ ಡಿ ಕುಮಾರಸ್ವಾಮಿ  
ರಾಜಕೀಯ

ಪ್ರಜ್ವಲ್‌ ರೇವಣ್ಣ 'ಲೈಂಗಿಕ ಹ‌ಗರಣ' ಕಾಂಗ್ರೆಸ್'ಗೆ ತಿರುಗುಬಾಣವಾಗಲಿದೆ: ಹೆಚ್‌ಡಿ ಕುಮಾರಸ್ವಾಮಿ (ಸಂದರ್ಶನ)

Manjula VN

ಪ್ರಜ್ವಲ್‌ ರೇವಣ್ಣ ರಾಸ ಲೀಲೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಪ್ರಕರಣದ ಜೆಡಿಎಸ್‌ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ಈ ನಡುವಲ್ಲೇ ಈ ವಿಚಾರ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಗೆ ತೊಡಕಾಗಬಹುದು ಎನ್ನಲಾಗುತ್ತಿದೆ.

ಈ ನಡುವೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರಪವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು, ಇಂತಹ ಆರೋಪಗಳು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಪ್ರಕರಣ ಕಾಂಗ್ರೆಸ್ ಪಕ್ಷಕ್ಕೆ ತಿರುಗುಬಾಣವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸಂದರ್ಶನದ ಆಯ್ದ ಭಾಗಗಳು ಇಂತಿವೆ...

ಲೈಂಗಿಕ ಹಗರಣ ಪ್ರಕರಣದಿಂದ ಪಕ್ಷದ ಮೇಲಾಗುವ ಪರಿಣಾಮಗಳೇನು?

ಈ ವಿಚಾರ ಕಾಂಗ್ರೆಸ್‌ಗೆ ತಿರುಗು ಬಾಣವಾಗಲಿದ್ದು, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಸರಕಾರ ಪತನಕ್ಕೂ ಕಾರಣವಾಗಬಹುದು. ಆದರೆ ಈಗಲೇ ಅದು ಹೇಗೆ ಎಂದು ನಾನು ಹೇಳಲಾರೆ.

ಪ್ರಕರಣದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಹಿನ್ನಡೆಯಾಗುವುದಿಲ್ಲವೇ?

ಹಿನ್ನಡೆ? ಹಿನ್ನಡೆಯ ಪ್ರಶ್ನೆಯೇ ಇಲ್ಲ. ಈ ಸಮಸ್ಯೆಯು ನಮ್ಮ ಕುಟುಂಬದಲ್ಲಿ ಒಂದು ರೀತಿಯ ತಾತ್ಕಾಲಿಕ ಮಾನಸಿಕ ಸಂಕಷ್ಟವನ್ನು ಸೃಷ್ಟಿಸಿದೆ, ವಿಶೇಷವಾಗಿ ನನ್ನ ತಂದೆ (ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ) ಮತ್ತು ತಾಯಿಗೆ ಸಾಕಷ್ಟು ನೋವು ತಂದಿದೆ. ಆದರೆ, ಇಂತಹ ಆರೋಪಗಳು ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟದ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಏಪ್ರಿಲ್ 26 ರಂದು ಕರ್ನಾಟಕದಲ್ಲಿ 14 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ನಾವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ. ಹಾಗೆಯೇ ನನ್ನ ಸೋದರಳಿಯ ಪ್ರಜ್ವಲ್, ಸೋದರ ಮಾವ ಡಾ.ಸಿ.ಎನ್.ಮಂಜುನಾಥ್ ಮತ್ತು ಕೋಲಾರ ಅಭ್ಯರ್ಥಿ (ಎಂ.ಮಲ್ಲೇಶ್ ಬಾಬು) ಚುನಾವಣೆಯಲ್ಲಿ ಗೆಲ್ಲುತ್ತಾರೆ.

ಬಿಜೆಪಿ ಬಗ್ಗೆ ಏನು ಹೇಳುತ್ತೀರಿ?

ನಮ್ಮ ರಾಜಕೀಯ ಪ್ರತಿಸ್ಪರ್ಧಿಗಳು ಈ ವಿಚಾರದಲ್ಲಿ ಅನಗತ್ಯವಾಗಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಎಳೆದು ತಂದಿದ್ದಾರೆ. ಈ ಘಟನೆಗೂ ಅವರಿಗೂ ಅಥವಾ ಬಿಜೆಪಿಗೂ ಯಾವ ರೀತಿಯಲ್ಲಿ ಸಂಬಂಧವಿದೆ? ನಮ್ಮ ವಿರೋಧಿಗಳು ನಮಗೆ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ದೂಷಿಸಲು ಸಮಸ್ಯೆಗೆ ಹುಡುಕಾಡುತ್ತಿದ್ದರು. ಇಂತಹ ವಿಷಯಗಳಲ್ಲಿ ಬಿಜೆಪಿ ಮತ್ತು ಪ್ರಧಾನಿಯನ್ನು ತಿರಸ್ಕರಿಸಲು ಜನರು ಮೂರ್ಖರಲ್ಲ. ಕೆಲವು ವರ್ಷಗಳ ಹಿಂದೆ ಈ ಘಟನೆಗಳು ನಡೆದಿವೆ ಎಂದು ಅವರೇ ಹೇಳುತ್ತಿದ್ದಾರೆ. ಮೊದಲೇ ನಡೆದಿದ್ದರೆ, ಚುನಾವಣೆಯ ಸಮಯದಲ್ಲೇಕೆ ಬಯಲಿಗೆ ತರಲಾಯಿತು. ಜನರು ಬುದ್ಧಿವಂತರಿದ್ದು, ಈ ಬಗ್ಗೆ ಚಿಂತಿಸುತ್ತಾರೆ.

ಆರೋಪಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸುತ್ತಿರುವುದರಿಂದ ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಆದರೆ ಪ್ರಜ್ವಲ್‌ನಿಂದ 400 ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಕೆಲವರು ಹೇಳಿರುವುದರಿಂದ ತನಿಖಾ ಸಂಸ್ಥೆ ಖಂಡಿತವಾಗಿಯೂ ಆರೋಪಗಳನ್ನು ಪರಿಶೀಲಿಸಬೇಕಾಗಿದೆ. ಇನ್ನೂ ಕೆಲವರು ಈ ಸಂಖ್ಯೆ 3,000 ಕ್ಕಿಂತ ಹೆಚ್ಚಿದೆ ಎಂದು ಹೇಳುತ್ತಿದ್ದಾರೆ. ಇದು ಸಾಧ್ಯವೇ? ನಿನ್ನೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಎಂದು ಹೇಳಿಕೊಳ್ಳುವ ಮಹಿಳೆಯೊಬ್ಬರು 2021 ರಲ್ಲಿ ತನ್ನ ಮೇಲೆ ಬಂದೂಕು ತೋರಿಸಿ ಅತ್ಯಾಚಾರವೆಸಗಿದ್ದಾರೆ ಎಂದು ದೂರಿದ್ದಾರೆ. ಹಾಗಾದರೆ ಅವರು ಈ ಮೂರು ವರ್ಷ ಏಕೆ ಮೌನವಾಗಿದ್ದರು?

ಆರೋಪಗಳು ಕೇಳಿಬಂದ ನಂತರ ನೀವು ನಿಮ್ಮ ತಂದೆ ಮತ್ತು ತಾಯಿಯನ್ನು ಭೇಟಿ ಮಾಡಿದ್ದೀರಾ?

ಅಪ್ಪನ ಮನೆಗೆ ಹೋಗಿ ಒಂದೆರಡು ದಿನ ಅಮ್ಮನ ಜೊತೆ ಇದ್ದೆ. ಅವರು ವಯಸ್ಸಾದವರಾಗಿದ್ದು, ಯಾವುದೇ ಮಗ ಮತ್ತು ಮೊಮ್ಮಗನ ವಿರುದ್ಧ ಇಂತಹ ದೂರುಗಳು ಬಂದಾಗ ಅವರು ಮಾನಸಿಕವಾಗಿ ಕುಗ್ಗುವುದುಸಹಜ. ಮಗನಾಗಿ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವುದು ನನ್ನ ಕರ್ತವ್ಯ. ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಆದರೆ ನನ್ನ ವಿರೋಧಿಗಳು ನನ್ನ ಸಹೋದರ ಮತ್ತು ಸೋದರಳಿಯನಿಗೆ ಸೂಕ್ತ ವಕೀಲರನ್ನು ನೇಮಿಸುವ ಬಗ್ಗೆ ಚರ್ಚಿಸಲು ನಾನು ನನ್ನ ತಂದೆಯನ್ನು ಭೇಟಿಯಾಗಿದ್ದೇನೆ ಎಂದು ಬಿಂಬಿಸಲು ಪ್ರಯತ್ನಿಸಿದರು. ರೇವಣ್ಣ ತನ್ನ ಮತ್ತು ಮಗನನ್ನು ನೋಡಿಕೊಳ್ಳುವಷ್ಟು ಸಮರ್ಥರಿದ್ದಾರೆ.

ಈ ವಿಚಾರವಾಗಿ ರೇವಣ್ಣ ಜೊತೆ ಮಾತನಾಡಿದ್ದೀರಾ?

ಹೌದು, ನಾನು ಈ ಬಗ್ಗೆ ನನ್ನ ಸಹೋದರನೊಂದಿಗೆ ಮಾತನಾಡಿದ್ದೇನೆ. ಅವನು ನಿರಪರಾಧಿ ಎಂದು ಹೇಳಿದ್ದಾನೆ. ತನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದೂ ಹೇಳಿದ್ದಾನೆಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

KSCA ಅಧ್ಯಕ್ಷರಾಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ!

12 ಸಾವಿರ ವರ್ಷಗಳಲ್ಲೇ ಮೊದಲು: ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟ; ಭಾರತ ಸೇರಿ ಹಲವು ದೇಶಗಳ ವಿಮಾನಗಳ ಮಾರ್ಗ ಬದಲಾವಣೆ!

"ಧರ್ಮ ಗ್ರಂಥಗಳಲ್ಲಿ ಧ್ವಜಾರೋಹಣದ ಉಲ್ಲೇಖ ಇಲ್ಲ": ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣಕ್ಕೆ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತೆ ತಗಾದೆ!

ಕಾಂಗ್ರೆಸ್‌ನಲ್ಲಿ ಅವರ ಶಾಸಕರನ್ನ ಅವರೇ ಖರೀದಿ ಮಾಡುತ್ತಿದ್ದಾರೆ; ಒಬ್ಬರಿಗೆ 100 ಕೋಟಿ ರೂ ಆಫರ್‌; ಕಾರು, ಫ್ಲ್ಯಾಟು ಗಿಫ್ಟು!

SCROLL FOR NEXT