ಸಿಎಂ ಸಿದ್ದರಾಮಯ್ಯ  
ರಾಜಕೀಯ

ಸಿದ್ದರಾಮಯ್ಯ ಮತ್ತು ಮುಡಾ ಪ್ರಕರಣ: 14 ನಿವೇಶನ ಹಿಂತಿರುಗಿಸಿದ ಸಿಎಂ ಬಚಾವ್ ಆಗುತ್ತಾರೆಯೇ?

2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸುತ್ತ 75 ಲಕ್ಷ ರೂಪಾಯಿಗಳ ಹೂಬ್ಲಾಟ್ ವಾಚ್ ಪ್ರಕರಣ ಕೂಡ ಸದ್ದು ಮಾಡಿತ್ತು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(MUDA) ಕೇಸಿನಲ್ಲಿ ಜಾರಿ ನಿರ್ದೇಶನಾಲಯದ ಪ್ರವೇಶ ಕಾಂಗ್ರೆಸ್ ಪಾಳಯದಲ್ಲಿ ಅನಿರೀಕ್ಷಿತತೆ ಮತ್ತು ಆತಂಕ ವಾತಾವರಣವನ್ನು ಸೃಷ್ಟಿಸಿದೆ.

ಮುಡಾ ಕೇಸು ಆರಂಭವಾಗಿ ಅದು ವಿವಾದವೆದ್ದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಬಿಎಂ ತಮಗೆ ಮುಡಾದಿಂದ ಸಿಕ್ಕಿದ್ದ 14 ನಿವೇಶನಗಳನ್ನು ಹಿಂತಿರುಗಿಸಿದ್ದಾರೆ. ಜಾರಿ ನಿರ್ದೇಶನಾಲಯ ಇಎಸ್ ಐಆರ್ ಕೇಸು ದಾಖಲಿಸಿದ ಬೆನ್ನಲ್ಲೇ ಅವರು ಈ ನಿರ್ಧಾರ ಮಾಡಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರವು ಮಿಂಚಿನ ವೇಗದಲ್ಲಿ ನಿವೇಶನಗಳನ್ನು ಹಿಂಪಡೆಯುವ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದು ಹಲವರನ್ನು ಅಚ್ಚರಿಗೊಳಿಸಿದೆ. ವಿಶೇಷ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪ್ರಕರಣವು ಇನ್ನೂ ತನಿಖೆ ಹಂತದಲ್ಲಿರುವಾಗ ಮುಡಾ ಇಷ್ಟು ತುರ್ತಾಗಿ ಕೆಲಸ ಮಾಡಿರುವುದು ಏಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಆದರೆ ಇಲ್ಲಿರುವ ಪ್ರಶ್ನೆ ಮತ್ತು ಸಂದೇಹವೆಂದರೆ ನಿವೇಶನಗಳನ್ನು ಮುಡಾಕ್ಕೆ ಹಿಂತಿರಿಗಿಸಿರುವುದು ಸಿದ್ದರಾಮಯ್ಯ ಅವರ ಸಿಎಂ ಹುದ್ದೆಗೆ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲವೇ ಎಂಬುದು.

ಭಾರೀ ಸದ್ದು ಮಾಡಿದ್ದ ಹೂಬ್ಲಾಟ್ ವಾಚ್ ಪ್ರಕರಣ: ಈಗ ಮುಡಾ ನಿವೇಶನ ವಿವಾದ ಉಂಟುಮಾಡಿದ್ದಂತೆ 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸುತ್ತ 75 ಲಕ್ಷ ರೂಪಾಯಿಗಳ ಹೂಬ್ಲಾಟ್ ವಾಚ್ ಪ್ರಕರಣ ಕೂಡ ಸದ್ದು ಮಾಡಿತ್ತು. ಅದನ್ನು ವಿಧಾನಸಭೆ ಸ್ಪೀಕರ್‌ಗೆ ಹಸ್ತಾಂತರಿಸುವ ಮೂಲಕ ಅದನ್ನು ರಾಜ್ಯದ ಆಸ್ತಿ ಎಂದು ಘೋಷಿಸಿ ಸಿದ್ದರಾಮಯ್ಯನವರು ವಿವಾದದಿಂದ ಹೊರಬಂದಿದ್ದರು.

ಆದರೆ, ಮುಡಾ ಪ್ರಕರಣವು ಸಾಕಷ್ಟು ದೂರ ಸಾಗಿಬಂದಿದೆ. ಹೈಕೋರ್ಟ್ ಮತ್ತು ವಿಶೇಷ ನ್ಯಾಯಾಲಯಗಳು ಆದೇಶಗಳನ್ನು ನೀಡಿವೆ. ಲೋಕಾಯುಕ್ತ ಪೊಲೀಸರು ಮತ್ತು ಇಡಿ ಈಗಾಗಲೇ ತನಿಖೆ ಆರಂಭಿಸಿದೆ. ಲೋಕಾಯುಕ್ತ ಪೊಲೀಸರು ಮೂರು ತಿಂಗಳೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಾಗಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇಡಿ ದಾಖಲಿಸಿದೆ.

ಇಡಿ ಪ್ರಕರಣದಲ್ಲಿ ಸೈಟ್‌ಗಳನ್ನು ಹಿಂದಿರುಗಿಸುವುದು ಸಿಎಂಗೆ ಹೇಗೆ ಸಹಾಯ ಮಾಡುತ್ತದೆ ಎಂದು ಹೇಳುವುದು ಕಷ್ಟ. ಪ್ರಕರಣವು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠಕ್ಕೆ ತಲುಪಿದಾಗ ಮಾತ್ರ ಇದರ ಕಾನೂನು ಪರಿಣಾಮಗಳು ತಿಳಿಯುತ್ತವೆ. ಇದನ್ನು ಯಾವುದೇ ರೀತಿಯಲ್ಲಿ ಅರ್ಥೈಸಬಹುದು. ಆಸ್ತಿಯನ್ನು ಈಗಾಗಲೇ ಒಪ್ಪಿಸಿರುವುದರಿಂದ ಸರ್ಕಾರಕ್ಕೆ ಸಮಸ್ಯೆಯಿಲ್ಲ ಎಂದು ಹೇಳಬಹುದು.

ಆದರೆ, ಈ ಹಂತದಲ್ಲಿ ನಿವೇಶನಗಳನ್ನು ಹಿಂದಿರುಗಿಸುವುದರಿಂದ ನಡೆಯುತ್ತಿರುವ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಹೇಳುತ್ತಾರೆ. ಆರಂಭಿಕ ಹಂತಗಳಲ್ಲಿಯೇ ಸೈಟ್‌ಗಳನ್ನು ಹಿಂತಿರುಗಿಸಿದ್ದರೆ ಅದು ಸ್ವಲ್ಪ ಮೌಲ್ಯವನ್ನು ಹೊಂದಿರಬಹುದಿತ್ತು. ಸಿಎಂ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅನುಮತಿ ನೀಡುವ ಮುನ್ನವೇ ನಿವೇಶನಗಳನ್ನು ಹಿಂತಿರುಗಿಸಬೇಕಿತ್ತು ಎಂದು ಕಾಂಗ್ರೆಸ್‌ ನ ಹಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯವಾಗಿ ಹೇಳುವುದಾದರೆ ಇದೊಂದು ಉತ್ತಮ ನಿರ್ಧಾರ. ತಾವು ನಿವೇಶನಗಳನ್ನು ಹಿಂತಿರುಗಿಸಬೇಕಾದರೆ 62 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಸಿದ್ದರಾಮಯ್ಯನವರು ಈ ಹಿಂದೆ ಹೇಳಿದ್ದರು. ಅಂತಹ ಹೇಳಿಕೆಗಳು ಕಾಂಗ್ರೆಸ್ ನಾಯಕರನ್ನೇ ಇರಿಸುಮುರುಸು ಮಾಡಿದ್ದವು. ಅಂತಹ ಹಾನಿಯನ್ನು ತಪ್ಪಿಸಲು ನಿವೇಶನ ಹಿಂತಿರುಗಿಸುವಿಕೆ ನಿರ್ಧಾರ ಉತ್ತಮ ಎನ್ನುತ್ತಾರೆ ಹಲವರು.

ತಡವಾಗಿಯಾದರೂ, ಸೈಟ್‌ಗಳನ್ನು ಹಿಂದಿರುಗಿಸಿರುವುದು ಕಾಂಗ್ರೆಸ್ ನಾಯಕರಿಗೆ, ವಿಶೇಷವಾಗಿ ಸಿದ್ದರಾಮಯ್ಯನವರ ಬೆಂಬಲಿತರಿಗೆ ಸಕಾರಾತ್ಮಕ ಸಂದೇಶವನ್ನು ರವಾನಿಸಿತು, ಅದು ಕಾನೂನು, ರಾಜಕೀಯ ಮತ್ತು ಗ್ರಹಿಕೆ ಹೋರಾಟದ ಅಂತ್ಯದಲ್ಲಿದೆ. ಈ ಕ್ರಮವು ಪಕ್ಷದೊಳಗಿನ ತನ್ನ ವಿರೋಧಿಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ನಿವೇಶನಗಳನ್ನು ಇಟ್ಟುಕೊಂಡಿದ್ದರೆ ಸಿದ್ದರಾಮಯ್ಯನವರಿಗೆ ಸಿಎಂ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗುತ್ತಿತ್ತು ಎಂಬ ಅಭಿಪ್ರಾಯವಿದೆ.

ಮತ್ತೊಂದೆಡೆ, ಇದು ತಾವು ತಪ್ಪು ಮಾಡಿದ್ದೇವೆ ಎಂದು ಒಪ್ಪಿಕೊಂಡ ಹಾಗಾಗಿದೆ, ಅವರ ವಿರೋಧ ಪಾಳಯಕ್ಕೆ ಅಸ್ತ್ರವಾಗಿದೆ ಎಂಬ ವಾದ ಕೂಡ ಕೇಳಿಬರುತ್ತಿದೆ. ಯಾವುದೇ ಅಕ್ರಮ ನಡೆಯದಿದ್ದಾಗ, ಸೈಟ್‌ಗಳನ್ನು ಏಕೆ ಹಿಂದಿರುಗಿಸುತ್ತಿದ್ದರು. ನಿವೇಶನ ವಾಪಸ್ ಕೊಡಿಸುವ ಮೂಲಕ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂಬ ಸಿದ್ದರಾಮಯ್ಯನವರ 2011ರ ಹೇಳಿಕೆಯನ್ನು ಬಿಜೆಪಿ ಬಳಸುತ್ತಿದೆ.

ಆದರೆ, ವಿವಾದದಿಂದ ದೂರವಿರಲು ನಿವೇಶನಗಳನ್ನು ಹಿಂದಿರುಗಿಸಿರುವ ಸಿದ್ದರಾಮಯ್ಯನವರ ಪತ್ನಿಯ ಸಮರ್ಥನೆಯು ವಿರೋಧ ಪಕ್ಷಗಳ ಟೀಕೆಯನ್ನು ಕಡಿಮೆ ಮಾಡಿಲ್ಲ.

ಆಡಳಿತ ಮತ್ತು ವಿಪಕ್ಷಗಳ ನಾಯಕರು ಇನ್ನೂ ಪರಸ್ಪರ ಕೆಸರೆರಚಾಟ ಮುಂದುವರಿಸಿದ್ದಾರೆ. ಇದು ಸಾಮಾನ್ಯ ಜನರು ರಾಜಕೀಯವನ್ನು ಅಸಹ್ಯಪಡುವ ಮಟ್ಟಕ್ಕೆ ಹೋಗಿದೆ, ಇದು ರಾಜಕಾರಣಿಗಳು ಜನರ ಯೋಗಕ್ಷೇಮಕ್ಕಾಗಿ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನೇ ಮುಖ್ಯವಾಗಿ ನೋಡುತ್ತಾರೆ ಎಂದು ಯೋಚಿಸುವಂತೆ ಮಾಡಿದೆ.

ಈ ಸಂದರ್ಭದಲ್ಲಿ, ಆತ್ಮಸಾಕ್ಷಿಯೇ ಪರಮ ನ್ಯಾಯಾಲಯ ಎಂಬ ಮಹಾತ್ಮಾ ಗಾಂಧೀಜಿಯವರನ್ನು ಉಲ್ಲೇಖಿಸಿ ಸಿದ್ದರಾಮಯ್ಯನವರ ಇತ್ತೀಚಿನ ಮಾತುಗಳು ಗಮನಾರ್ಹ. ಇದೀಗ, ಮುಡಾ ಪ್ರಕರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯನವರು ರಾಜಕೀಯ ಮತ್ತು ಕಾನೂನು ಗಂಟುಗಳಿಂದ ತಮ್ಮನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಅಪಾಯಗಳನ್ನು ಕಡಿಮೆ ಮಾಡಲು ಹಲವು ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಆಗಿನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ವಿರುದ್ಧದ ಇಡಿ ಪ್ರಕರಣಗಳನ್ನು ಗಮನಿಸಿದರೆ, ಕಾಂಗ್ರೆಸ್ ಪಾಳಯವು ಈಗ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಆತಂಕಕ್ಕೆ ಒಳಗಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT