ಸಿಎಂ ಸಿದ್ದರಾಮಯ್ಯ  
ರಾಜಕೀಯ

ಕರ್ನಾಟಕದಲ್ಲಿ ಜಾತಿ ಸಮೀಕ್ಷೆ ವರದಿ: ಸಿಎಂ ಸಿದ್ದರಾಮಯ್ಯ ಪಾಲಿಗೆ ರಾಜಕೀಯವಾಗಿ ವರವಾಗುವುದೇ?

ಈಗ ಸರ್ಕಾರವು ವರದಿಯನ್ನು ಪರಿಶೀಲಿಸಲು ಉಪ ಸಮಿತಿಯನ್ನು ರಚಿಸುವ ಸಾಧ್ಯತೆಯಿದೆ. ಸಮಾಜದಲ್ಲಿ ಹೆಚ್ಚಿನ ಸಮಾನತೆಯನ್ನು ತರಲು ಭವಿಷ್ಯದ ಯೋಜನೆಗಳಿಗೆ ಜಾತಿ ಗಣತಿಯನ್ನು ಆಧಾರವಾಗಿ ಬಳಸಲು ಇದು ಆಶಿಸುತ್ತಿದೆ.

ಬೆಂಗಳೂರು: 2015 ರಲ್ಲಿ ನಡೆಸಿದ್ದ ಜಾತಿ ಗಣತಿ-ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮುಂದಿನ ವಾರ ರಾಜ್ಯ ಸಚಿವ ಸಂಪುಟದ ಮುಂದೆ ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಈ ವರ್ಷ ಲೋಕಸಭೆ ಚುನಾವಣೆಗೆ ಮುನ್ನ ಸಿಎಂಗೆ ವರದಿಯನ್ನು ಸಲ್ಲಿಸಿತ್ತು, ಆದರೆ ಅದು ಸಾರ್ವಜನಿಕವಾಗಿ ಬಹಿರಂಗವಾಗಿಲ್ಲ.

ಈಗ ಸರ್ಕಾರವು ವರದಿಯನ್ನು ಪರಿಶೀಲಿಸಲು ಉಪ ಸಮಿತಿಯನ್ನು ರಚಿಸುವ ಸಾಧ್ಯತೆಯಿದೆ. ಸಮಾಜದಲ್ಲಿ ಹೆಚ್ಚಿನ ಸಮಾನತೆಯನ್ನು ತರಲು ಭವಿಷ್ಯದ ಯೋಜನೆಗಳಿಗೆ ಜಾತಿ ಗಣತಿಯನ್ನು ಆಧಾರವಾಗಿ ಬಳಸಲು ಇದು ಆಶಿಸುತ್ತಿದೆ.

ಆದರೆ ಬಿಡುಗಡೆಗೆ ಮುನ್ನ ವರದಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಇತರ ರಾಜಕೀಯ ಗುಂಪುಗಳೆರಡರಿಂದಲೂ ವಿರುದ್ಧ ಪ್ರತಿಕ್ರಿಯೆಗಳು ಬಂದಿವೆ. ಇದು ರಾಜ್ಯದ ಸಾಮಾಜಿಕ ಸ್ತರದಲ್ಲಿ ಮಾದರಿ ಬದಲಾವಣೆಯನ್ನು ತರಬಹುದಾದರೂ, ಇದು ಸಿದ್ದರಾಮಯ್ಯನವರಿಗೆ ರಾಜಕೀಯವಾಗಿಯೂ ಹೊಡೆತ ಬೀಳಬಹುದು ಎಂದು ಅಂದಾಜಿಸಲಾಗಿದೆ.

ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 17 ಮತ್ತು ಶೇಕಡಾ 14ರಷ್ಟು ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳಿದ್ದರೂ ಆ ವರ್ಗದ ಮುಖಂಡರು ವರದಿಯು ಶೀಘ್ರದಲ್ಲೇ ಬಹಿರಂಗಗೊಳಿಸುವುದನ್ನು ಇಷ್ಟಪಡುತ್ತಿಲ್ಲ. ಎರಡು ಜಾತಿಗಳು, ಪ್ರಮುಖ ಸಾಮಾಜಿಕ ಮತ್ತು ರಾಜಕೀಯ ಸ್ಥಾನಗಳನ್ನು ಹೊಂದಿರುವಾಗ, ಸಾಕಷ್ಟು ಸಂಪನ್ಮೂಲಗಳನ್ನು ಪಡೆಯಲು ಅಗತ್ಯವಾದ ಸಂಖ್ಯೆಯನ್ನು ಹೊಂದಿರುವುದಿಲ್ಲ ಎಂದು ವ್ಯಾಪಕವಾಗಿ ನಂಬಲಾಗಿದೆ. ಹೊಸದಾಗಿ ಸಮೀಕ್ಷೆ ನಡೆಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ಒತ್ತಾಯಿಸಿದ್ದಾರೆ. ಹಲವಾರು ವೀರಶೈವ ಲಿಂಗಾಯತ ಧರ್ಮೀಯರು ಕೂಡ "ವೈಜ್ಞಾನಿಕ ಜನಗಣತಿಗೆ ಒತ್ತಾಯಿಸಿದ್ದಾರೆ.

160 ಕೋಟಿ ರೂಪಾಯಿ ವೆಚ್ಚದಲ್ಲಿ 2015 ರಲ್ಲಿ ಜಾತಿ ಗಣತಿ ಅಭಿಯಾನ 45 ದಿನಗಳ ಕಾಲ ನಡೆಸಲಾಯಿತು, 1.6 ಲಕ್ಷ ಸಮೀಕ್ಷೆದಾರರು 1.35 ಕೋಟಿ ಕುಟುಂಬಗಳಿಗೆ 55 ಪ್ರಶ್ನೆಗಳನ್ನು ಕೇಳಿದ್ದರು. ಜಾತಿ ಪ್ರಮಾಣಪತ್ರಗಳು, ಶಾಲಾ ದಾಖಲೆಗಳು ಇತ್ಯಾದಿಗಳನ್ನು ಪರಿಶೀಲಿಸಿದರು. ಕರ್ನಾಟಕದ 70 ಮಿಲಿಯನ್ ನಷ್ಟಿರುವ ಜನಸಂಖ್ಯೆಯು ಸುಮಾರು 1,500 ಜಾತಿಗಳು ಹಾಗೂ ಉಪ ಜಾತಿಗಳಿಂದ ಕೂಡಿದೆ. ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯಗಳು ಮತ್ತು ರಾಜ್ಯದ ಸಂಪನ್ಮೂಲಗಳ ಹೆಚ್ಚಿನ ಪಾಲನ್ನು ನಿರೀಕ್ಷಿಸುತ್ತಿರುವವರು ವರದಿಯನ್ನು ಸಾರ್ವಜನಿಕಗೊಳಿಸುವುದಕ್ಕಾಗಿ ಮತ್ತು ಕಾರ್ಯಗತಗೊಳಿಸಲು ಕಾಯುತ್ತಿದ್ದಾರೆ. ಇಂತಹ ಜನಗಣತಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದರೂ, ಅದು ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿದೆ.

ಕಳೆದ ಅಕ್ಟೋಬರ್‌ನಲ್ಲಿ, ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ತನ್ನ ಜಾತಿ ಗಣತಿ ವರದಿಯನ್ನು ಸಾರ್ವಜನಿಕಗೊಳಿಸಿತು ಕೇಂದ್ರದಿಂದ ವಿಶೇಷ ಆರ್ಥಿಕ ಸ್ಥಾನಮಾನಕ್ಕಾಗಿ ಆಶಿಸಿತ್ತು, ಅದು ಇನ್ನೂ ಕಾರ್ಯಗತವಾಗಿಲ್ಲ. ರಾಷ್ಟ್ರವ್ಯಾಪಿ ಜಾತಿ ಗಣತಿಗೆ ರಾಹುಲ್ ಗಾಂಧಿಯವರು ಸತತವಾಗಿ ಬೇಡಿಕೆ ಇಟ್ಟಿದ್ದಾರೆ. ಜಾತಿ ವ್ಯವಸ್ಥೆ ಸಮಾಜಕ್ಕೆ ದೊಡ್ಡ ಕಂದಕವಾಗಿದ್ದರೂ ಕೂಡ, ಇಂತಹ ಸಮೀಕ್ಷೆಗಳು ನಮ್ಮನ್ನು ಮತ್ತಷ್ಟು ವಿಭಜಿಸುವುದಿಲ್ಲ ಮತ್ತು ಮುಂದೊಂದು ದಿನ ದೇಶವು ಮೀಸಲಾತಿಯನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ ಎಂದು ಆಶಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ರಷ್ಯಾ ಸಂಬಂಧಗಳು ವ್ಯಾಪಾರ ಒಪ್ಪಂದಕ್ಕೆ ಅಡ್ಡಿಯಾಗಬಹುದು: ಯುರೋಪಿಯನ್ ಒಕ್ಕೂಟ ವಾರ್ನಿಂಗ್!

ಭಾರತದ ಅಣೆಕಟ್ಟು-ನದಿಗಳು ನಮ್ಮದಾಗಲಿದೆ: Op Sindoorಗೆ ಪ್ರತೀಕಾರ ಹೇಳ್ತೀವಿ; ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಬೆದರಿಕೆ!

Bumrah ಓವರ್​ನಲ್ಲಿ 6 ಸಿಕ್ಸರ್ ಸಿಡಿಸುವ ಸವಾಲು: ಆದ್ರೆ Saim Ayub ಆಡಿದ 3 ಪಂದ್ಯದಲ್ಲೂ ಸುತ್ತಿದ್ದು ಶೂನ್ಯ, ಕಳಪೆ ದಾಖಲೆ ಬರೆದ Pak ಬ್ಯಾಟರ್, Video!

ಬರೇಲಿಯಲ್ಲಿ ದಿಶಾ ಪಠಾನಿ ಮನೆಯ ಹೊರಗೆ ಗುಂಡು ಹಾರಿಸಿದ್ದ ಇಬ್ಬರು ಶಂಕಿತರು ಎನ್‌ಕೌಂಟರ್‌ನಲ್ಲಿ ಸಾವು

ನವೆಂಬರ್ ಒಳಗೆ ಬೆಂಗಳೂರಿನ ಎಲ್ಲಾ ಗುಂಡಿಗಳನ್ನು ಮುಚ್ಚಿ: ಗುತ್ತಿಗೆದಾರರಿಗೆ DCM ಡಿಕೆಶಿ ಗಡುವು

SCROLL FOR NEXT