ಬಿಜೆಪಿ ಟ್ವೀಟ್ 
ರಾಜಕೀಯ

ತುಂಗಾಭದ್ರ ಅಣೆಕಟ್ಟು: ತಜ್ಞರ ವರದಿ ಕಸದ ಬುಟ್ಟಿಗೆ; ಕಾಂಗ್ರೆಸ್ ನಾಯಕರು ಗಾಢನಿದ್ರೆಗೆ!

ಈಗಾಗಲೇ ತಿಳಿದಿರುವಂತೆ ಕಳೆದ ವರ್ಷದ ಆಗಸ್ಟ್ 10ರಂದು ರಾತ್ರಿ ಅಣೆಕಟ್ಟೆ ಗರಿಷ್ಠ ಮಟ್ಟ ತಲುಪಿದ್ದಾಗ 19ನೆ ಗೇಟ್ ಕೊಚ್ಚಿಕೊಂಡು ಹೋಗಿತ್ತು.

ಬೆಂಗಳೂರು: ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಕ್ರೆಸ್ಟ್‌ಗೇಟ್‌ಗಳೂ ಶಿಥಿಲಗೊಂಡಿವೆ, ಎಲ್ಲವನ್ನೂ ಬದಲಿಸಬೇಕು ಎಂಬ ತಜ್ಞರ ವರದಿಯನ್ನು ಕಡೆಗಣಿಸಿ ಗೇಟ್‌ ಬದಲಿಸದೆ ಕುಳಿತ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಟೀಕಾಸ್ತ್ರ ಪ್ರಯೋಗಿಸಿದ್ದು, ಗೇಟ್‌ಗಳ ಮೇಲೆ ಸಿಎಂ, ಡಿಸಿಎಂ ನಿದ್ದೆ ಮಾಡುತ್ತಿರುವಂತಹ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದೆ.

ತಜ್ಞರ ವರದಿಯನ್ನು ಕಸದ ಬುಟ್ಟಿಗೆ ಎಸೆದ ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿಯೇ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ, ಭಾರಿ ಪ್ರಮಾಣದಲ್ಲಿ ನೀರು ಇದೀಗ ಆಂಧ್ರದ ಪಾಲಾಗುತ್ತಿದೆ, ಅದನ್ನು ತಡೆಗಟ್ಟಲು ಕ್ರಮವಹಿಸಿ ಲಕ್ಷಾಂತರ ರೈತರಿಗೆ ನೀರಿನ ಭರವಸೆ ಕೊಡಿ ಎಂದು ಅದರಲ್ಲಿ ತಿಳಿಸಲಾಗಿದೆ.

ಈಗಾಗಲೇ ತಿಳಿದಿರುವಂತೆ ಕಳೆದ ವರ್ಷದ ಆಗಸ್ಟ್ 10ರಂದು ರಾತ್ರಿ ಅಣೆಕಟ್ಟೆ ಗರಿಷ್ಠ ಮಟ್ಟ ತಲುಪಿದ್ದಾಗ 19ನೆ ಗೇಟ್ ಕೊಚ್ಚಿಕೊಂಡು ಹೋಗಿತ್ತು. ಬಳಿಕ ವಾರದಲ್ಲೇ ತಾತ್ಕಾಲಿಕ ಸ್ಟಾಪ್‌ಲಾಗ್ ಗೇಟ್ ಅಳವಡಿಸಿ ನೀರು ಪೋಲಾಗುವುದನ್ನು ತಡೆಯಲಾಗಿತ್ತು. ಆದರೆ ಬಳಿಕ ತಜ್ಞರು ಅಣೆಕಟ್ಟೆಯ ಕೂಲಂಕಷ ಪರೀಕ್ಷೆ ನಡೆಸಿ, 19ನೇ ಗೇಟ್‌ ಮಾತ್ರವಲ್ಲ, ಇತರ ಎಲ್ಲ 32 ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್ ಅಳವಡಿಸಬೇಕು ಎಂದು ತಿಳಿಸಿದ್ದರು. ಆದರೆ ವಿನ್ಯಾಸ ಅಂತಿಮಗೊಳಿಸುವುದು, ಟೆಂಡರ್ ಪ್ರಕ್ರಿಯೆ ವಿಳಂಬವಾಗಿ ಮತ್ತೆ ಮಳೆಗಾಲ ಆರಂಭವಾದರೂ ಗೇಟ್ ಬದಲಾವಣೆ ಸಾಧ್ಯವಾಗಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು; ಪ್ರತಿಪಕ್ಷಗಳಿಗೆ ಮುಖಭಂಗ

ತೈಲ ಪೂರೈಕೆಗೆ ರಿಯಾಯಿತಿ ಸ್ಥಗಿತ ಬೆನ್ನಲ್ಲೇ ಎಚ್ಚೆತ್ತ ಭಾರತ; ರಷ್ಯಾ ವಿದೇಶಾಂಗ ಸಚಿವರಿಗೆ ಜೈಶಂಕರ್ ದೂರವಾಣಿ ಕರೆ; ಮಹತ್ವದ ಚರ್ಚೆ!

IPL 2026: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಉದ್ಘಾಟನಾ ಪಂದ್ಯ; ಮಾರ್ಚ್ 28 ರಂದು RCB vs SRH

'ರಕ್ಷಿತ್ ಶೆಟ್ಟಿ-ರಶ್ಮಿಕಾ ನಿಶ್ಚಿತಾರ್ಥ ಮುರಿದುಬೀಳಲು ಇದೇ ಕಾರಣ': ತಾಯಿ ಸುಮನ್ ಮಂದಣ್ಣರದ್ದು ಎನ್ನಲಾದ ಆಡಿಯೋ ವೈರಲ್!

ಗಲ್ಫ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಪ್ರಧಾನಿ ಮೋದಿ ಸಹಾಯದ ಭರವಸೆ; ಕೊಚ್ಚಿಯಲ್ಲಿ 'ವಿಕ್ಸಿತ್ ಕೇರಳಂ'ಗೆ ಚಾಲನೆ

SCROLL FOR NEXT